ದೇವಾಲಯ ಆರ್ಥಿಕ ಸಾಮಾಜಿಕ ಆಧಾರ

ಕಲಬುರಗಿ ಸಿಯುಕೆನಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾರ್ಥಿ, ಸಿಬ್ಬಂದಿಯೊಂದಿಗೆ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​, ಡಾ.ಗೋವಿನೋಲ್ಲಾ ಮಹೇಂದರ್​, ಪ್ರೊ.ಪಾಂಡುರಂಗ, ಡಾ.ಕವಿತಾ, ಡಾ.ಎಸ್​.ಲಿಂಗಮೂರ್ತಿ, ಡಾ.ಸುಮಾ ಸ್ಕಾರಿಯಾ ಇತರರಿದ್ದರು.
ಕಲಬುರಗಿ ಸಿಯುಕೆನಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾರ್ಥಿ, ಸಿಬ್ಬಂದಿಯೊಂದಿಗೆ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​, ಡಾ.ಗೋವಿನೋಲ್ಲಾ ಮಹೇಂದರ್​, ಪ್ರೊ.ಪಾಂಡುರಂಗ, ಡಾ.ಕವಿತಾ, ಡಾ.ಎಸ್​.ಲಿಂಗಮೂರ್ತಿ, ಡಾ.ಸುಮಾ ಸ್ಕಾರಿಯಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಅನಿಸಿಕೆ
  • ಸಿಯುಕೆನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಸಮಾರೋಪ
ಕಲಬುರಗಿ: ವಿಕಸಿತ ಭಾರತ-2047ರ ಸಾಕಾರಕ್ಕೆ ದೇವಾಲಯಗಳು ಆರ್ಥಿಕ, ಸಾಮಾಜಿಕವಾಗಿ ಆಧಾರವಾಗಲಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಆರ್​.ಆರ್​. ಬಿರಾದಾರ್​ ಹೇಳಿದರು.
ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ಪ್ರವಾಸೋದ್ಯಮ ಮತ್ತು ಹೋಟೆಲ್​ ನಿರ್ವಹಣಾ ವಿಭಾಗ, ಅರ್ಥಶಾಸ್ತ್ರ ಅಧ್ಯಯನ ಮತ್ತು ಯೋಜನಾ ವಿಭಾಗ ಹಾಗೂ ನವದೆಹಲಿಯ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ (ಐಸಿಎಸ್​ಎಸ್​ಆರ್​) ಸಹಯೋಗದಡಿ ಗುರುವಾರ ಏರ್ಪಡಿಸಿದ್ದ ದೇವಾಲಯ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಸಾರ್ವಜನಿಕ ನೀತಿ: ಆಡಳಿತ, ಜೀವನೋಪಾಯ ಮತ್ತು ಸುಸ್ಥಿರ ಪ್ರಾದೇಶಿಕ ಅಭಿವೃದ್ಧಿ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಸಮಾರೋಪದಲ್ಲಿ ಅವರು ಮಾತನಾಡಿದರು.
ಭಾರತೀಯ ದೇವಾಲಯಗಳು ಕೇವಲ ಆಧ್ಯಾತ್ಮಿಕ, ಭಕ್ತಿ ಕೇಂದ್ರಗಳಲ್ಲದೆ ದೇಶದ ಆರ್ಥಿಕ, ಸಾಮಾಜಿಕವಾಗಿ ಬಲ ನೀಡುವುದರ ಜತೆಗೆ ಶಿಕ್ಷಣ, ಆರೋಗ್ಯ ಸೇವೆ, ಅನ್ನದಾಸೋಹ ಮೂಲಕ ಆಹಾರ ಭದ್ರತೆ, ಸಂಸ್ಕೃತಿ ಸಂರಕ್ಷಣೆ ಹಾಗೂ ಭಕ್ತಿ ಪರಂಪರೆ ಮೂಲಕ ವಿಕಸಿತ ಭಾರತದ ರಾಷ್ಟ್ರೀಯ ಕನಸು ಸಾಕಾರಗೊಳಿಸುವಲ್ಲಿ ಪ್ರಮುಖ ಆಧಾರವಾಗಲಿದೆ ಎಂದರು.
ಸಮ್ಮೇಳನ ಸಂಚಾಲಕ ಡಾ.ಗೋವಿನೋಲ್ಲಾ ಮಹೇಂದರ್​ ಮಾತನಾಡಿ, ಈ ಸಮ್ಮೇಳನದಲ್ಲಿ 112 ಸಂಶೋಧನಾ ಪ್ರಬಂಧಗಳು ಮಂಡನೆಯಾಗಿವೆ. ಅಧ್ಯಯನದ ಭಾಗವಾಗಿ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ ಎಂದು ಹೇಳಿದರು.
ವ್ಯವಹಾರ ಅಧ್ಯಯನ ನಿಕಾಯ ಡೀನ್​ ಪ್ರೊ.ಪಾಂಡುರಂಗ ಮಾತನಾಡಿದರು. ತಮಿಳುನಾಡು ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ಕವಿತಾ ಕೆ., ಸಮ್ಮೇಳನದ ಸಹ ಸಂಚಾಲಕ ಡಾ.ಎಸ್​. ಲಿಂಗಮೂರ್ತಿ ಉಪಸ್ಥಿತರಿದ್ದರು. ಡಾ.ಸುಮಾ ಸ್ಕಾರಿಯಾ ವಂದಿಸಿದರು. ಸಮ್ಮೇಳನದಲ್ಲಿ ದೇವಾಲಯಗಳ ಆರ್ಥಿಕತೆ, ಸಾಮಾಜಿಕ ಅಭಿವೃದ್ಧಿ, ಸುಸ್ಥಿರ ಪ್ರಾದೇಶಿಕ ಅಭಿವೃದ್ಧಿ, ತೀರ್ಥಯಾತ್ರೆ ಪ್ರವಾಸೋದ್ಯಮ, ಜೀವನೋಪಾಯ ಬೆಂಬಲ, ಉದ್ಯೋಗ ಸೃಷ್ಟಿ, ದೇವಾಲಯ ನಿರ್ವಹಣೆ, ಆಡಳಿತ ಹಾಗೂ ಸಂಬಂಧಿತ ಸಾರ್ವಜನಿಕ ನೀತಿ ಕುರಿತು ವ್ಯಾಪಕ ಚರ್ಚೆ, ಸಂವಾದ ನಡೆಯಿತು.
"

ವಿದ್ಯಾರ್ಥಿಗಳು ಮತ್ತು ಸಂಶೋಧಕರು ದೇವಾಲಯ, ಸಂಘ-ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಅಧ್ಯಯನ ಮಾಡಿ ಸ್ಟಾರ್ಟಪ್​ ಆಧಾರಿತ ಪರಿಹಾರ ರೂಪಿಸುವ ಮೂಲಕ ದೇಗುಲಗಳ ಅಭಿವೃದ್ಧಿ, ಸ್ಥಳಿಯ ಮತ್ತು ಪ್ರಾದೇಶಿಕ ಸಮುದಾಯಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕು.

— > ಪ್ರೊ.ಪಾಂಡುರಂಗ ವಿ. ಡೀನ್​, ವ್ಯವಹಾರ ಅಧ್ಯಯನ ನಿಕಾಯ ಸಿಯುಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net