ಕಳ್ಳಿಪಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನದಲ್ಲಿ ಮಾತನಾಡಿ, ಜನರ ಜೀವನ ಶೈಲಿ ಬದಲಾಗುತ್ತಿದಂತೆ ಸಾಂಪ್ರಾಯದಾಯಿಕ, ಆರೋಗ್ಯಕರ ತಿನಿಸುಗಳು ದೂರವಾಗಿವೆ. ರಾಗಿ, ಸಜ್ಜೆ, ನವಣೆ, ಬರಗು, ಸಾಮೆ, ಊದಲು, ಆರ್ಕ್, ಕೊರಲೆ ಮೊದಲಾದ ಸಿರಿಧಾನ್ಯಗಳಲ್ಲಿ ಪೋಷಕಾಂಶ ಯಥೇಚ್ಚವಾಗಿದೆ. ಸಿರಿಧಾನ್ಯಗಳು ಹೆಚ್ಚಿನ ಪ್ರಮಾಣದ ಪ್ರೋಟಿನ್, ನಾರಿನಾಂಶ, ಬಿ ಮತ್ತು ಇ ಗುಂಪಿನ ಜೀವಸತ್ವಗಳನ್ನು ಹೊಂದಿವೆ. ಅಗತ್ಯ ಅಮೈನೊ, ಪೋಲಿಕ್ ಆಂಮ್ಲಗಳಿಂದ ಕೂಡಿದೆ ಎಂದರು.