ಅಬಕಾರಿ ಇಲಾಖೆಯ ಇ-ಹರಾಜು

ಚಿತ್ರ ೦೭ ಕೆ.ಎಲ್.ಆರ್. ೦೧ : ಚನ್ನಯ್ಯ ರಂಗಮAದಿರದಲ್ಲಿ ನಡೆದ ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ಅಬಕಾರಿ ಹೆಚ್ಚುವರಿ ಆಯುಕ್ತರಾದ ಬಸವರಾಜ್ ಆರ್.ಸೋಮಣ್ಣನವರ್ ಮುಂತಾದವರು ಇದ್ದರು.
ಚಿತ್ರ ೦೭ ಕೆ.ಎಲ್.ಆರ್. ೦೧ : ಚನ್ನಯ್ಯ ರಂಗಮAದಿರದಲ್ಲಿ ನಡೆದ ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ಅಬಕಾರಿ ಹೆಚ್ಚುವರಿ ಆಯುಕ್ತರಾದ ಬಸವರಾಜ್ ಆರ್.ಸೋಮಣ್ಣನವರ್ ಮುಂತಾದವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆ ಕಾಯಿದೆ ಮತ್ತು ನಿಯಮಗಳಿಗೆ ತಂದಿರುವ ಗಣನೀಯ ಸುಧಾರಣೆಗಳ ಹಿನ್ನೆಲೆಯಲ್ಲಿ ಇ-ಹರಾಜು ಪ್ರಕ್ರಿಯೆಯ ಕುರಿತು ಬುಧವಾರ ಚನ್ನಯ್ಯ ರಂಗಮAದಿರದಲ್ಲಿ ಸಾರ್ವಜನಿಕರಿಗೆ ತರಬೇತಿ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಲಾಖೆಯಲ್ಲಿ ಇಂತಹ ಸಂವಾದ ಮತ್ತು ಚರ್ಚೆಗಳು ಅಪರೂಪ. ಇಂತಹ ಮಹತ್ವದ ಕಾರ್ಯಕ್ರಮ ಆಯೋಜಿಸಿರುವ ರಾಜ್ಯ ಸರ್ಕಾರ ಮತ್ತು ಅಬಕಾರಿ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.
ಇ-ಹರಾಜು ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು ಸರ್ಕಾರದ ಆದಾಯವನ್ನು ಹೆಚ್ಚಿಸುವುದು ಒಂದು ದೃಷ್ಟಿಯಾಗಿದ್ದರೂ, ಆಡಳಿತದಲ್ಲಿ ಚುರುಕು ತರುವುದು, ಸಾರ್ವಜನಿಕರ ಹಿತ ಕಾಪಾಡುವುದು ಮುಖ್ಯವಾಗಿದೆ. ವಿಶೇಷವಾಗಿ ಹೆಚ್ಚಿನ ಆದಾಯ ತಂದುಕೊಡುವ ಅಬಕಾರಿ ಇಲಾಖೆಯಲ್ಲಿ ಇಂತಹ ಸಂವಾದಗಳು ಅತ್ಯುಪಯುಕ್ತವಾಗಿವೆ ಎಂದು ತಿಳಿಸಿದರು.
ಬಹಳ ವರ್ಷಗಳಿಂದ ಲ್ಯಾಪ್ಸ್ ಆಗಿದ್ದ, ಡಿಫಕ್ಟ್ ಆಗಿದ್ದ ಅಥವಾ ಡೆಡ್ ಆಗಿದ್ದ ಪರವಾನಗಿಗಳಿಗೆ ದಾರಿ ಕಲ್ಪಿಸುವುದು, ಕಳ್ಳಸಂತೆ, ಅಡಲ್ಟ್ರೇಷನ್ಸ್ ಅಥವಾ ಕಪ್ಪು ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಮಾರಾಟಗಳನ್ನು ತಡೆಗಟ್ಟುವುದು ಹಾಗೂ ಅರ್ಹರಿಗೆ ಕಾನೂನುಬದ್ಧವಾಗಿ ಸೌಲಭ್ಯ ದೊರೆಯುವಂತೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರುವುದು ಇ-ಹರಾಜು ತರಲು ಇರುವ ಮುಖ್ಯ ಕಾರಣಗಳಾಗಿವೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಇಲಾಖೆಯು ಇ-ಹರಾಜು ಪ್ರಕ್ರಿಯೆಯನ್ನು ಜಾರಿಗೆ ತರುವ ಮೊದಲು ಉತ್ತಮ ಪ್ಲ್ಯಾನಿಂಗ್ ಮತ್ತು ಪ್ರಿಪರೇಷನ್ ಮಾಡಿರುವುದನ್ನು ಅವರು ಶ್ಲಾಘಿಸಿದರು. ಆಕ್ಷನ್ ಅನ್ನು ಸಂಪೂರ್ಣ ವೇಳಾಪಟ್ಟಿಯೊಂದಿಗೆ ವರ್ಕ್ಔಟ್ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು ೫೬೯ ಡಿಫಕ್ಟ್ ಅಥವಾ ಲ್ಯಾಪ್ಸ್ ಆಗಿರುವ ಪರವಾನಗಿಗಳಿದ್ದು, ಇವುಗಳಿಗೆ ಪ್ರಥಮ ಬಾರಿಗೆ ಇ-ಹರಾಜು ತರಲಾಗಿದೆ. ಇದರಲ್ಲಿ ೪೬೭ಕ್ಕೂ ಹೆಚ್ಚು ಸಿಎಲ್೨ (ವೈನ್ ಸ್ಟೋರ್ ಲೈಸೆನ್ಸ್) ಪರವಾನಗಿಗಳು ಮತ್ತು ಸುಮಾರು ೯೨ ಸಿಎಲ್-೯ಎ ಪರವಾನಗಿಗಳು ರಾಜ್ಯ ಮಟ್ಟದಲ್ಲಿವೆ. ಜಿಲ್ಲೆಗೆ ಸಂಬAಧಿಸಿದAತೆ ಕೋಲಾರದಲ್ಲಿ ೧೫ ಹಾಗೂ ಚಿಕ್ಕಬಳ್ಳಾಪುರದಲ್ಲಿ ೧೧ ಪರವಾನಗಿಗಳು ಇವೆ ಎಂದು ತಿಳಿಸಿದರು.
ಇ-ಹರಾಜಿನ ಮೂಲಕ ಆಯ್ಕೆ ಪ್ರಕ್ರಿಯೆ ನಡೆದರೂ ಸಹ, ಹೊಸದಾಗಿ ನೀಡುವ ಸಿಎಲ್-೨ಎ ಮತ್ತು ಸಿಎಲ್-೯ಎ ಲೈಸೆನ್ಸ್ಗಳಿಗೆ ಅಬಕಾರಿ ಕಾಯಿದೆಯ ಎಲ್ಲ ಹಳೆಯ ಅವಕಾಶಗಳು ಅನ್ವಯವಾಗುತ್ತವೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಇತಿಹಾಸದಲ್ಲಿಯೇ ಅಬಕಾರಿ ಇಲಾಖೆಯು ಮೊದಲ ಬಾರಿಗೆ ಪಾರದರ್ಶಕವಾಗಿ, ವ್ಯವಸ್ಥಿತವಾಗಿ ಹಾಗೂ ಸದುದ್ದೇಶದಿಂದ ಈ ಹರಾಜು ಪ್ರಕ್ರಿಯೆಯನ್ನು ನಡೆಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಇದರಲ್ಲಿ ಭಾಗವಹಿಸುವವರು ಸರ್ಕಾರದ ಜೊತೆಗೆ ಕೈಜೋಡಿಸಿ, ಈ ವ್ಯಾಪಾರದಲ್ಲಿ ತಮ್ಮ ಅನುಕೂಲಗಳನ್ನು ಪರಿಶೀಲಿಸಿ, ಪಾಲ್ಗೊಳ್ಳುವಂತೆ ಮನವಿ ಮಾಡಿದರು. ತರಬೇತಿ ಕಾರ್ಯಕ್ರಮದಲ್ಲಿ ರಿಜಿಸ್ಟ್ರೇಶನ್, ಇಎಂಡಿ, ಬೇಸ್ ಪ್ರೈಸ್ ಸೇರಿದಂತೆ ಇ-ಹರಾಜು ಪ್ರಕ್ರಿಯೆಯ ಎಲ್ಲ ತಾಂತ್ರಿಕ ಅಂಶಗಳನ್ನು ವಿವರಿಸಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿ ಅಬಕಾರಿ ಆಯುಕ್ತರಾದ ಬಸವರಾಜ್ ಆರ್. ಸೋಮಣ್ಣವರ್, ಅಬಕಾರಿ ಜಂಟಿ ಆಯುಕ್ತ ಗಿರಿ, ಕೋಲಾರ ಅಬಕಾರಿ ಉಪ ಆಯುಕ್ತರಾದ ಸಯ್ಯದಾ ಅಜ್ಮತ್ ಆಫ್ರಿನ್, ಚಿಕ್ಕಬಳ್ಳಾಪುರ ಅಬಕಾರಿ ಉಪ ಆಯುಕ್ತರಾದ ಡಿ. ಪಿ. ನರೇಂದ್ರ ಕುಮಾರ್, ಅಧೀಕ್ಷಕರಾದ ಜೆ. ದೀಪಕ್, ಸಂಪನ್ಮೂಲ ವ್ಯಕ್ತಿ ಗಳಾದ ಎನ್. ನರೇಶ್, ರವೀಂದ್ರನಾಥ್ ಸೇರಿದಂತೆ ಕೋಲಾರ ಚಿಕ್ಕಬಳ್ಳಾಪುರ ಸನ್ನದುದಾರರು ಸಾರ್ವಜನಿಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net