ತಾಲೂಕಿನ ನಾಗನೂರ ಗ್ರಾಮದ ಬಸವಾಶ್ರಮದಲ್ಲಿ ಏರ್ಪಡಿಸಿದ್ದ ಬಸವಧರ್ಮ ಉತ್ಸವ ಹಾಗೂ ಅಲ್ಲಮಪ್ರಭುಗಳ ಜಯಂತ್ಯುತ್ಸವ ಕಾರ್ಯಕ್ರಮ ಸಮಾರೋಪದ ಅಧ್ಯತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ವರ್ಷ ಬಸವ ತತ್ತ$$$್ವದನ್ವಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿರುವುದು ಹೆಮ್ಮೆಯ ಸಂಗತಿ. ಬಸವ ಪ್ರಚಾರ ಕಾರ್ಯಕ್ರಮ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ಇಳಕಲ್ಲ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಇಂದಿಗೂ ಸಮಾನತೆ, ಮೌಢ್ಯ ನಿವಾರಣೆಗೆ ನಿರಂತರ ಹೋರಾಡಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು. ಗುರುಬಸವ ಮಠದ ಬಸವಪ್ರಕಾಶ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಾಶ್ರಮದ ಬಸವಗೀತಾ ತಾಯಿ, ಹೊಸಕೇರಿ ಲಹಾರೇಶ್ವರ ಮಠದ ನೀಲಲೋಚನಾ ತಾಯಿ ಆಶೀರ್ವಚನ ನೀಡಿದರು. ಲಕ್ಷಿ$್ಮ ಆರಿಬೆಂಚಿ, ರವಿ ಯಡಹಳ್ಳಿ, ಮಹಾನಂದಾ ಪಾಟೀಲ, ರಾಜೇಶ್ವರಿ ಯಾದವಾಡ, ಅನ್ನಪೂರ್ಣಾ ಲಂಬುನವರ, ಸದಾಶಿವ ಗಾಯಕವಾಡ, ಶಿವಪ್ಪ ನಿರಾಕಾರಿ, ಅಶೋಕ ಕುಲಗೋಡ, ಜೆ.ಎಲ್.ಎಂ. ತಾಲೂಕು ಮಹಿಳಾ ಟಕದ ಅಧ್ಯೆ ಗೀತಾ ಆರಿಬೆಂಚಿ ಇತರರಿದ್ದರು.