2025ರಲ್ಲಿ ಡಿಡಿ ಕೇಸ್ ವಿಧಿಸುವಲ್ಲಿ ಧಾರವಾಡ ಸಂಚಾರ ಠಾಣೆ ಪೊಲೀಸರು ಮೊದಲ ಸ್ಥಾನದಲ್ಲಿದ್ದಾರೆ. ಠಾಣೆ ವ್ಯಾಪ್ತಿಯಲ್ಲಿ 1,032 ಪ್ರಕರಣ ದಾಖಲಾಗಿದ್ದು, 1,12,56,000 ರೂ. ದಂಡ ವಸೂಲಾತಿಯಾಗಿದೆ. ಹುಬ್ಬಳ್ಳಿಯ ಉತ್ತರ ಸಂಚಾರ ಠಾಣೆಯಲ್ಲಿ 630 ಪ್ರಕರಣ ದಾಖಲಾಗಿದ್ದು, 63,67,500 ರೂ. ದಂಡ, ಪೂರ್ವ ಸಂಚಾರ ಠಾಣೆಯಲ್ಲಿ 385 ಪ್ರಕರಣ ದಾಖಲಾಗಿದ್ದು, 38,50,000 ದಂಡ ಹಾಗೂ ದಕ್ಷಿಣ ಸಂಚಾರ ಠಾಣೆಯಲ್ಲಿ 378 ಪ್ರಕರಣ ದಾಖಲಾಗಿದ್ದು 37,75,000 ರೂ. ದಂಡ ಆಕರಣೆ ಮಾಡಲಾಗಿದೆ.