ಇಂದು ಔಷಧ ಅಂಗಡಿಗಳ ಬಂದ್

ತಾಳಿಕೋಟೆಯ ವಾಸವಿ ಮೆಡಿಕಲ್ ಶಾಪ್‌ನಲ್ಲಿ ಔಷಧ ವ್ಯಾಪಾರಸ್ಥರ ಸಂಘದಿಂದ ಔಷಧ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸುಭಾಸ ಸಾಲಂಕಿ, ಸಂತೋಷ ಪ್ರಥಮಶೆಟ್ಟಿ, ಮೈನುದ್ದೀನ ಕೊರ್ತಿ ಮತ್ತಿತರರಿದ್ದರು.
ತಾಳಿಕೋಟೆಯ ವಾಸವಿ ಮೆಡಿಕಲ್ ಶಾಪ್‌ನಲ್ಲಿ ಔಷಧ ವ್ಯಾಪಾರಸ್ಥರ ಸಂಘದಿಂದ ಔಷಧ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸುಭಾಸ ಸಾಲಂಕಿ, ಸಂತೋಷ ಪ್ರಥಮಶೆಟ್ಟಿ, ಮೈನುದ್ದೀನ ಕೊರ್ತಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕಾರ್ಯಕಾರಣಿ ಸದಸ್ಯ ವಾಸುದೇವ ಹೆಬಸೂರ ಮಾಹಿತಿ
  • ಒಂದು ದಿನದ ಸಂಪೂರ್ಣ ಬಂದ್‌ಗೊಳಿಸಲು ನಿರ್ಧಾರ
ತಾಳಿಕೋಟೆ: ಔಷಧಗಳನ್ನು ಆನ್‌ಲೈನ್ ಸೇವೆಯ ಮೂಲಕ ವಿತರಿಸುವುದನ್ನು ಸ್ಥಗಿತಗೊಳಿಸಬೇಕೆಂದು ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘ, ಕರ್ನಾಟಕ ರಾಜ್ಯ ಔಷಧ ವ್ಯಾಪಾರಸ್ಥರ ಸಂಘ, ಜಿಲ್ಲಾ ಹಾಗೂ ತಾಲೂಕು ಘಟಕದ ನೇತತ್ವದಲ್ಲಿ ಮೇ 20ರಂದು ನಗರದಲ್ಲಿರುವ ಎಲ್ಲ ಔಷಧ ಅಂಗಡಿಗಳನ್ನು ಒಂದು ದಿನದ ಸಂಪೂರ್ಣ ಬಂದ್‌ಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಾರ್ಯಕಾರಣಿ ಸದಸ್ಯ ವಾಸುದೇವ ಹೆಬಸೂರ ತಿಳಿಸಿದರು. 
ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ನೇತತ್ವದಲ್ಲಿ ಸೋಮವಾರ ವಾಸವಿ ಮೆಡಿಕಲ್ ಶಾಪ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೇ 20ರಂದು ಔಷಧ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗುವುದು, ಆನ್‌ಲೈನ್ ಸೇವೆಯ ನೆಪದಲ್ಲಿ ಔಷಧ ಪೂರೈಸುತ್ತಿರುವ ಕೆಲವು ಕಂಪನಿಗಳು ಗ್ರಾಹಕರಿಗೆ ಸರಿಯಾದ ಔಷಧಿ ನೀಡದೇ ವಂಚಿಸುತ್ತಿವೆ. 
ಅಲ್ಲದೇ ಕೆಲವು ಖಾಸಗಿ ದೊಡ್ಡ ದೊಡ್ಡ ಕಂಪನಿಗಳು ಔಷಧಗಳಿಗೆ ಹೆಚ್ಚಿನ ರಿಯಾಯಿತಿ ನೀಡಿ ಗ್ರಾಹಕರನ್ನು ದಾರಿ ತಪ್ಪಿಸುತ್ತಿವೆ ಈ ವ್ಯವಸ್ಥೆಯನ್ನು ಬಂದ್ ಮಾಡಬೇಕೆಂದು ಆಗ್ರಹಿಸಿ, ಸಂಘದ ಕರೆಯ ಮೇರೆಗೆ ಒಂದು ದಿನ ಔಷಧ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಪ್ರತಿಭಟನೆಯು ನಗರದ ಕತ್ರಿ ಬಜಾರದಿಂದ ಬಾಲಾಜಿ ಮಂದಿರ ರಸ್ತೆ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವತ್ತ, ಮಹಾರಾಣಾಪ್ರತಾಪಸಿಂಹ ವತ್ತ, ಬಸ್ ನಿಲ್ದಾಣದ ಮುಂಭಾಗ ಹಾಯ್ದು, ಬಸವೇಶ್ವರ ವತ್ತಕ್ಕೆ ಮುಕ್ತಾಯಗೊಳಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದೆಂದರು.
ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಭಾಸ ಸಾಲಂಕಿ, ಉಪಾಧ್ಯಕ್ಷ ಸಂತೋಷ ಪ್ರಥಮಶೆಟ್ಟಿ, ಮೈನುದ್ದೀನ ಕೊರ್ತಿ, ರವಿ ಪಾಟೀಲ, ಲಕ್ಷ್ಮೀಕಾಂತ ಸಜ್ಜನ, ಶಿವಲಿಂಗಪ್ಪ ಸಾಲಂಕಿ, ಶಶಿಧರ ಸರಶೆಟ್ಟಿ ಉಪಸ್ಥಿತರಿದ್ದರು.
"

ವ್ಯಾಪಾರಿಗಳ ಮುಷ್ಕರ 

ಚಡಚಣ: ಆನ್‌ಲೈನ್ ಪೋರ್ಟಲ್‌ಗಳ ಅನಿಯಂತ್ರಿತ ಕಾರ್ಯನಿರ್ವಹಣೆ ಮತ್ತು ದರೋಡೆಕೋರತನದ ಬೆಲೆ ಅಕ್ರಮಗಳ ವಿರುದ್ಧ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದೇಶಾದ್ಯಂತ ಔಷಧ ವ್ಯಾಪಾರಸ್ಥರ ಸಂಘ ಕರೆ ನೀಡಿರುವ ಹಿನ್ನೆಲೆ ಮೇ 20ರಂದು ತಾಲೂಕಿನ ಔಷಧ ವ್ಯಾಪಾರಸ್ಥರು ಸಂಘದ ಸದಸ್ಯರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ತಾಲೂಕಿನ ಎಲ್ಲ ಔಷಧ ಅಂಗಡಿಗಳು ಬಂದ್ ಇರಲಿದ್ದು, ಸಾರ್ವಜನಿಕರು ಹಾಗೂ ರೋಗಿಗಳು ಸಹಕರಿಸುವಂತೆ ಸಂಘದ ಅಧ್ಯಕ್ಷ ಪ್ರದೀಪ ಜಂಗಮಶೆಟ್ಟಿ ಹಾಗೂ ಗೌರವ ಕಾರ್ಯದರ್ಶಿ ವಿ.ಎಸ್. ಅಂಜುಟಗಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net