ಬೆಳೆ ಹಾನಿ ವರದಿ ಬಳಿಕ ಬರ ಘೋಷಣೆ

ಶಹಾಪುರ ತಾಲೂಕಿನ ಮುಡಬೂಳ ಗ್ರಾಮದ ಹೊಲಗಳಿಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಬೆಳೆಗಳನ್ನು ಪರಿಶೀಲಿಸಿದರು. ಶಾಸಕ ಶರಣಬಸಪ್ಪ ದರ್ಶನಾಪುರ, ಡಿಸಿ ರಾಹುಲ್ ಪಾಂಡ್ವೆ ಇತರರಿದ್ದರು.
ಶಹಾಪುರ ತಾಲೂಕಿನ ಮುಡಬೂಳ ಗ್ರಾಮದ ಹೊಲಗಳಿಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಬೆಳೆಗಳನ್ನು ಪರಿಶೀಲಿಸಿದರು. ಶಾಸಕ ಶರಣಬಸಪ್ಪ ದರ್ಶನಾಪುರ, ಡಿಸಿ ರಾಹುಲ್ ಪಾಂಡ್ವೆ ಇತರರಿದ್ದರು.
Published on

ಮಳೆ ಕೊರತೆಯಿಂದ ತಾಲೂಕಿನಾದ್ಯಂತ ಬೆಳೆಗಳು ಒಣಗುತ್ತಿದ್ದು, ಪ್ರತಿಯೊಬ್ಬ ರೈತ ಕೂಡಲೇ ಬೆಳೆ ವಿಮೆ ಮಾಡಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲï ಮನವಿ ಮಾಡಿದರು.

ಮುಡಬೂಳ ಗ್ರಾಮದ ಹೊಲಗಳಿಗೆ ಗುರುವಾರ ಬೆಳಗ್ಗೆ ಭೇಟಿ ನೀಡಿ ಬೆಳೆಗಳ ಸ್ಥಿತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೊಗರಿ ಮಳೆಯಾಶ್ರಿತ ಮತ್ತು ಭತ್ತ ನೀರಾವರಿ ಬೆಳೆ ವಿಮೆ ನೋಂದಣಿಗೆ ಆ.೧೪ ಕೊನೆಯ ದಿನವಾಗಿದ್ದರಿಂದ ಪ್ರತಿ ಗ್ರಾಮದಲ್ಲಿ ಡಂಗೂರ ಸಾರಿ ರೈತರಿಗೆ ಮಾಹಿತಿ ನೀಡುವಂತೆ ತಾಪಂ ಇಒ ಹಾಗೂ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೆಳೆ ಹಾನಿಯ ಸಮಗ್ರ ವರದಿ ತಕ್ಷಣ ಸಿದ್ಧಪಡಿಸಿ ಕಂದಾಯ ಇಲಾಖೆಗೆ ಸಲ್ಲಿಸುವಂತೆ ಜಿ¯್ಲÁಽಕಾರಿಗೆ ಸೂಚನೆ ನೀಡಲಾಗಿದೆ. ಕಳೆದ ವರ್ಷ ಕೇವಲ ೧,೭೦೦ ರೈತರು ಬೆಳೆ ವಿಮೆ ಮಾಡಿಸಿದ್ದರೆ, ಈ ಸಲ ಈಗಾಗಲೇ ಸುಮಾರು ೧೦ ಸಾವಿರ ರೈತರು ವಿಮೆ ಮಾಡಿಸಿರುವ ಮಾಹಿತಿ ಇದೆ. ಉಳಿದವರೂ ವಿಳಂಬ ಮಾಡದೆ ವಿಮೆ ಮಾಡಿಸಬೇಕು ಎಂದರು.
ರಾಜ್ಯದ ಎಲ್ಲ ಜಿ¯್ಲೆಗಳ ಮಳೆ ಮತ್ತು ಬೆಳೆ ಹಾನಿ ವರದಿ ಪರಿಶೀಲಿಸಿದ ಬಳಿಕ ಮಾಸಾಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರ ಮತ್ತು ಪರಿಹಾರ ಘೋಷಣೆ ಕುರಿತು ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿz್ದÁರೆ ಎಂದ ಸಚಿವ ಡಾ.ಶರಣಪ್ರಕಾಶ, ರಸಗೊಬ್ಬರ ವಿತರಣೆಯಲ್ಲಿ ಅಕ್ರಮ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅಽಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಟೋಕನ್ ವ್ಯವಸ್ಥೆ ಮೂಲಕವೇ ವಿತರಣೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಶಾಸಕ ಶರಣಬಸಪ್ಪ ದರ್ಶನಾಪುರ, ಜಿ¯್ಲÁಽಕಾರಿ ರಾಹುಲï ಪಾಂಡ್ವೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಽಕಾರಿ ಲವೀಶ್ ಒರ್ಡಿಯಾ, ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶಿವಮಾಂತಪ್ಪ ಸಾಹು, ಮುಖಂಡರಾದ ಸಂಗಣ್ಣಗೌಡ ಮಾಲಿಪಾಟೀಲ್, ಅಶೋಕ ಮ¯್ಲÁಬಾದಿ, ಬಸವರಾಜ ಮುದ್ನೂರ, ಶಾಂತಗೌಡ ಮಾಲಿಪಾಟೀಲï, ಮಲ್ಲನಗೌಡ ಮಾಲಿಪಾಟೀಲï, ಬಸವಲಿಂಗಪ್ಪ ಹವಾಲ್ದಾರ್, ಬಸವರಾಜ ಹವಾಲ್ದಾರ್, ಕೃಷ್ಣಪ್ಪ ನಾಯ್ಕೊಡಿ, ಗುರುರಾಜ ಕುಲಕರ್ಣಿ, ಗುರಣ್ಣ ಬಡಕಲï, ಚನ್ನಬಸಪ್ಪ, ಶ್ರೀಶೈಲಪ್ಪ ಸಾಹು, ಮಲ್ಲಿಕಾರ್ಜುನ ಹೂಸಳ್ಳಿ, ದ್ಯಾವಣ್ಣ ಕುನ್ನೂರು, ಮೈಲಾರಿ ಪೂಜÁರಿ, ವೆಂಕಣ್ಣ ಯಾದವ್, ಹಣಮಂತ ಗಡಂಗ ಇತರರಿದ್ದರು.

ಶಹಾಪುರ ತಾಲೂಕು ಬರಪೀಡಿತ ಘೋಷಿಸಿ

ಶಹಾಪುರ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಹತ್ತಿ, ತೊಗರಿ ಸೇರಿ ಮುಂಗಾರು ಬೆಳೆಗಳು ಬಾಡುತ್ತಿವೆ. ಹೀಗಾಗಿ ತಾಲೂಕು ಬರಪೀಡಿತ ಘೋಷಿಸುವಂತೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಮುಡಬೂಳ ಗ್ರಾಮದ ಅಶೋಕ ಮ¯್ಲÁಬಾದಿ ಮನವಿ ಸಲ್ಲಿಸಿದರು. ಎಕರೆಗೆ ಸುಮಾರು ೨೫ ಸಾವಿರ ರೂ. ವೆಚ್ಚ ಮಾಡಿದ್ದರೂ ಬೆಳೆ ಹಾನಿಗೀಡಾಗಿದ್ದು, ಎಕರೆಗೆ ೫೦ ಸಾವಿರ ರೂ. ಪರಿಹಾರ ಜತೆ ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net