ವಿದ್ಯುತ್ ಮಾರ್ಗಗಳ ಮೇಲೆ ಡ್ರೋನ್ ನಿಗಾ

ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ೆಟೋ
ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ೆಟೋ
Published on
ಬೆಂಗಳೂರು: ಹೈ-ವೋಲ್ಟೇಜ್ ಮತ್ತು ಎಕ್ಸಿ ್ಟ್ರೀಮ್ ಹೈ ವೋಲ್ಟೇಜ್ (ಇಎಚ್‌ವಿ) ವಿದ್ಯುತ್ ಪ್ರಸರಣ ಮಾರ್ಗಗಳ ಮೇಲೆ ಅತ್ಯಾಧುನಿಕ ಡ್ರೋನ್ ಕ್ಯಾಮರಾಗಳ ಮೂಲಕ ನಿಗಾವಹಿಸುವ ತಂತ್ರಜ್ಞಾನವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಅಳವಡಿಸಿಕೊಂಡಿದೆ.
ಇದರಿಂದ 11 ಸಾವಿರಕ್ಕೂ ಹೆಚ್ಚು ಟವರ್‌ಗಳನ್ನು ತಪಾಸಣೆ ನಡೆಸಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಿ ಸರಿಪಡಿಸಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿರುವ ವಿದ್ಯುತ್ ಮಾರ್ಗಗಳ ತಪಾಸಣೆ ಮತ್ತು ನಿರ್ವಹಣೆಗಾಗಿ ವಿಶೇಷ ಡ್ರೋನ್‌ಗಳು ಹೈ-ರೆಸಲ್ಯೂಶನ್ ಕ್ಯಾಮರಾಗಳು, ಥರ್ಮಲ್ ಇಮೇಜಿಂಗ್ (ಉಷ್ಣತೆ ಅಳೆಯುವ ತಂತ್ರಜ್ಞಾನ) ಮತ್ತು ಲಿಡಾರ್ ಸೆನ್ಸಾರ್‌ಗಳನ್ನು ಹೊಂದಿವೆ. ದಟ್ಟವಾದ ಅರಣ್ಯ, ಗುಡ್ಡಗಾಡು ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಹಾದುಹೋಗಿರುವ ಪ್ರಸರಣ ಟವರ್, ವಾಹಕ ಮತ್ತು ಇನ್ಸುಲೇಟರ್‌ಗಳನ್ನು ಅತಿ ಸಮೀಪದಿಂದ ನಿಖರವಾಗಿ ತಪಾಸಣೆ ಮಾಡಲು ನೆರವಾಗಿವೆ.
ವಿದ್ಯುತ್ ತಂತಿಗಳು ಅಥವಾ ಉಪಕರಣಗಳಲ್ಲಿ ಸಡಿಲವಾದ ಸಂಪರ್ಕದಿಂದ ಉಂಟಾಗುವ ವಿಪರೀತ ಶಾಖ ಅಥವಾ ಹಾಟ್‌ಸ್ಪಾಟ್‌ಗಳನ್ನು ಥರ್ಮಲ್ ಕ್ಯಾಮರಾಗಳು ಪತ್ತೆಹಚ್ಚುತ್ತವೆ. ಡ್ರೋನ್‌ನಿಂದ ಸಂಗ್ರಹಿಸಲಾದ ದತ್ತಾಂಶವು ಕೆಪಿಟಿಸಿಎಲ್ನ ಇಂಜಿನಿಯರ್‌ಗಳಿಗೆ ಲಭ್ಯವಾಗುತ್ತಿದೆ. ತಕ್ಷಣ ಸುರಕ್ಷತಾ ಕ್ರಮಗಳನ್ನು ವಹಿಸಲಾಗುತ್ತಿದೆ. ಈ ಎಲ್ಲ ಡಿಜಿಟಲ್ ಟ್ವಿನ್ ಪ್ಲಾಟ್‌ಫಾರ್ಮ್‌ನೊಂದಿಗೆ ಸಂಯೋಜನೆ ಮಾಡಿ ಇಂಧನ ಭವನದ ನಿಯಂತ್ರಣ ಕೊಠಡಿಯಿಂದ ಮೇಲ್ವಿಚಾರಣೆ ನಡೆಸಲು ಅನುವು ಮಾಡಿಕೊಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಗ್ಗಿದ ವಿದ್ಯುತ್ ವ್ಯತ್ಯಯ

45 ಸಾವಿರ ಕಿ.ಮೀ ಉದ್ದದ ವಿದ್ಯುತ್ ಮಾರ್ಗಗಳನ್ನು ಸಿಬ್ಬಂದಿ ಖುದ್ದಾಗಿ ಪರಿಶೀಲಿಸುವುದು ಹೆಚ್ಚು ಸಮಯ ತೆಗೆದುಕೊಳ್ಳುವ ಹಾಗೂ ಅಪಾಯಕಾರಿ ಕೆಲಸವಾಗಿದೆ. ಡ್ರೋನ್ ಬಳಸುವ ಮೂಲಕ, ಕಡಿಮೆ ಸಮಯದಲ್ಲಿ ನಮ್ಮ ಬೃಹತ್ ಟವರ್‌ಗಳ 360-ಡಿಗ್ರಿ ತಪಾಸಣೆ ನಡೆಸಬಹುದು. ಬರಿಗಣ್ಣಿಗೆ ಕಾಣಿಸದ ದೋಷಗಳನ್ನೂ ಗುರುತಿಸಲು ಈ ತಂತ್ರಜ್ಞಾನ ಇಂಜಿನಿಯರ್‌ಗಳಿಗೆ ಶಕ್ತಿ ನೀಡುತ್ತದೆ. ತಪಾಸಣೆಯಿಂದಲೇ ಶೇ.85 ವಿದ್ಯುತ್ ವ್ಯತ್ಯಯ ತಗ್ಗಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಸಮಸ್ಯೆ ಎದುರಾದಾಗ ದುರಸ್ತಿ ಮಾಡುವುದಕ್ಕಿಂತ ಸಮಸ್ಯೆ ಬರುವ ಮುನ್ನವೇ ಎಚ್ಚೆತ್ತುಕೊಳ್ಳುವ ವ್ಯವಸ್ಥೆಯಿಂದಾಗಿ ವಿದ್ಯುತ್ ಗ್ರಿಡ್ ಸದೃಢವಾಗಿದೆ. ನಿರಂತರ ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸಲಾಗುತ್ತಿದೆ.
ಡಾ.ವಿ.ರಾಮ್ ಪ್ರಸಾತ್ ಮನೋಹರ್, ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್.
ಡ್ರೋನ್ ಬಳಕೆಯ ಉಪಯೋಗಗಳು
-220ಕೆವಿ ಸಾಮರ್ಥ್ಯದ 2,500+ ಕಿ.ಮೀ. ಹಾಗೂ 400 ಕೆವಿ ಸಾಮರ್ಥ್ಯದ 843 ಕಿ.ಮೀ. ಮಾರ್ಗಗಳನ್ನು ಕರಾರುವಾಕ್ಕಾಗಿ ತಪಾಸಣೆ.
-ಪ್ರಸರಣ ಜಾಲದ 11,000+ ಬೃಹತ್ ಟವರ್‌ಗಳ ಮತ್ತು ಸ್ಪ್ಯಾನ್‌ಗಳ ಸಂಪೂರ್ಣ ಭೌತಿಕ ಮೌಲ್ಯಮಾಪನ.
-1,50,000+ ದೋಷಗಳ ಪತ್ತೆ ಡಿಜಿಟಲ್ ಟ್ರ್ಯಾಕಿಂಗ್ ಮೂಲಕ ಸಂಭಾವ್ಯ ಮತ್ತು ನಿರ್ಣಾಯಕ ಸಮಸ್ಯೆಗಳನ್ನು ವಿದ್ಯುತ್ ಕಡಿತಗೊಳ್ಳುವ ಮುನ್ನವೇ ಪತ್ತೆ ಮಾಡುವುದು
-ವೆಬ್ ಹಾಗೂ ಸಿಬ್ಬಂದಿ ಮೊಬೈಲ್ ಆ್ಯಪ್ ಮೂಲಕ ನೈಜ-ಸಮಯದಲ್ಲಿ ಟ್ರ್ಯಾಕ್, ನಿಖರವಾದ ಲೊಕೇಷನ್‌ನಿಂದ ದೋಷಗಳನ್ನು ಪತ್ತೆ ಮಾಡಿ ಸರಿಪಡಿಸಲಾಗುತ್ತದೆ.
-ನಿಖರ ದತ್ತಾಂಶ ಆಧರಿಸಿ 200ಕ್ಕೂ ಹೆಚ್ಚು ನಿರ್ಣಾಯಕ ಸಮಸ್ಯೆಗಳನ್ನು ಕೇವಲ 5 ಬ್ಯಾಚ್ ನಿರ್ವಹಣಾ ವಿಂಡೋಗಳಲ್ಲಿ ಶೀಘ್ರ ಪರಿಹರಿಸಲಾಗಿದೆ. ದತ್ತಾಂಶವು ಜಿಐಎಸ್, ಇಆರ್‌ಪಿ ವ್ಯವಸ್ಥೆಗಳೊಂದಿಗೆ ಸಂಯೋಜನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net