ಚಾಲಕರೇ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿ / ANEKAL

ಅತ್ತಿಬೆಲೆ ಆರ್​ಟಿಒ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಉಚಿತ "ಅಭಯ್​ ಹೆಲ್ತ್​ ಕ್ಯಾಂಪ್​' ಹಾಗೂ ವಿವಿಧ ವಿಮಾ ಯೋಜನೆಗಳ ಜಾಗೃತಿ ಕಾರ್ಯಕ್ರಮದಲ್ಲಿ ಟಿಟಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಜಿ.ಸಿ.ರಾಜು, ಅಭಯ್​ ಹೆಲ್ತ್​ ಕ್ಯಾಂಪ್​ ಮುಖ್ಯಸ್ಥೆ ಮಾತೃಶ್ರೀ ಶೆಟ್ಟಿ, ಆರ್​ಟಿಒ ಇಲಾಖೆಯ ನಾಸಿರ್​ ಅಹಮದ್​, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್​ ದೇವು ಇತರರು ಇದ್ದರು.
ಅತ್ತಿಬೆಲೆ ಆರ್​ಟಿಒ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಉಚಿತ "ಅಭಯ್​ ಹೆಲ್ತ್​ ಕ್ಯಾಂಪ್​' ಹಾಗೂ ವಿವಿಧ ವಿಮಾ ಯೋಜನೆಗಳ ಜಾಗೃತಿ ಕಾರ್ಯಕ್ರಮದಲ್ಲಿ ಟಿಟಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಜಿ.ಸಿ.ರಾಜು, ಅಭಯ್​ ಹೆಲ್ತ್​ ಕ್ಯಾಂಪ್​ ಮುಖ್ಯಸ್ಥೆ ಮಾತೃಶ್ರೀ ಶೆಟ್ಟಿ, ಆರ್​ಟಿಒ ಇಲಾಖೆಯ ನಾಸಿರ್​ ಅಹಮದ್​, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್​ ದೇವು ಇತರರು ಇದ್ದರು.
Published on

ಆನೇಕಲ್​ :

ಪ್ರಸ್ತುತ ಸರಕು ಸಾಗಣೆ ವಾಹನಗಳ ಸಂಚಾರ ಹೆಚ್ಚುತ್ತಿದೆ. ಲಾರಿ ಚಾಲಕರ ದೈಹಿಕ ಆರೋಗ್ಯ ಹಾಗೂ ಮಾನಸಿಕ ಕ್ಷಮತೆ ರಸ್ತೆ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಾಲಕರು ದೈಹಿಕ ಆರೋಗ್ಯವಾಗಿದ್ದು, ಮಾನಸಿಕವಾಗಿ ಒತ್ತಡಮುಕ್ತರಾಗಿದ್ದರೆ ರಸ್ತೆ ಅಪಘಾತಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಸಂಸದ ಡಾ.ಸಿ.ಎನ್​.ಮಂಜುನಾಥ್​ ಹೇಳಿದರು.

ಅತ್ತಿಬೆಲೆಯ ಆರ್​ಟಿಒ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಾರಿಗೆ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಲಾರಿ ಚಾಲಕರಿಕೆ ಆಯೋಜಿಸಿದ್ದ ಉಚಿತ "ಅಭಯ್​ ಹೆಲ್ತ್​ ಕ್ಯಾಂಪ್​' ಹಾಗೂ ವಿವಿಧ ವಿಮಾ ಯೋಜನೆಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಾರಿ ಚಾಲಕರು ನಿರಂತರವಾಗಿ ವಾಹನ ಚಲಾಯಿಸುವುದರಿಂದ ಆಯಾಸ, ನಿದ್ರಾಹಿನತೆ, ದೃಷ್ಟಿ ಸಮಸ್ಯೆ, ರಕ್ತದೊತ್ತಡ ಹಾಗೂ ಮಧುಮೇಹ ಸೇರಿ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಚಾಲನೆ ವೇಳೆ ಏಕಾಗ್ರತೆ ಕಡಿಮೆಯಾಗಿ ಅಪಘಾತಗಳಿಗೆ ಕಾರಣವಾಗಬಹುದು. ಕಾಲಕಾಲಕ್ಕೆ ಆರೋಗ್ಯ, ದೃಷ್ಟಿ, ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಮಾಡಿಸಿಕೊಳ್ಳುವುದು ಚಾಲಕರಿಗೆ ಅಗತ್ಯ ಎಂದರು.

ಕೇಂದ್ರದ ಅಭಯ ಸುರಕ್ಷಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ್​ ಜ್ಯೋತಿ ವಿಮಾ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಚಾಲಕರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಾಹನ ಸವಾರರು ಹಾಗೂ ಚಾಲಕರು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸರಕು ಸಾಗಣೆ ವಾಹನಗಳ ಮುಂಭಾಗ ಮತ್ತು ಹಿಂಭಾಗದಲ್ಲಿ ಆರ್​ಟಿಒ ಅಧಿಕಾರಿಗಳು ಕಡ್ಡಾಯವಾಗಿ ರೇಡಿಯಂ ಟೇಪ್​ ಅಳವಡಿಸುವುದರಿಂದ ರಾತ್ರಿ ವೇಳೆ ವಾಹನಗಳು ಸುಲಭವಾಗಿ ಗೋಚರಿಸಿ ಅಪಘಾತಗಳ ಪ್ರಮಾಣ ಕಡಿಮೆಯಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಇತ್ತೀಚೆಗೆ ಜೀವನಶೈಲಿ ಆಧಾರಿತ ಕಾಯಿಲೆಗಳು ಹೆಚ್ಚುತ್ತಿದ್ದು, ಒತ್ತಡವೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ ಒಂದು ಗಂಟೆ ವ್ಯಾಯಾಮ, ಕ್ರೀಡೆ ಅಥವಾ ಯೋಗಾಭ್ಯಾಸಕ್ಕೆ ಸಮಯ ಮೀಸಲಿಡಬೇಕು. ವಾಯುಮಾಲಿನ್ಯದಿಂದಲೂ ಹೃದಯಾಘಾತ ಸೇರಿ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಹೀಗಾಗಿ ಪರಿಸರ ಸಂರಕ್ಷಣೆ ಹಾಗೂ ವಾಯುಮಾಲಿನ್ಯ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಂಸದರು ಕರೆ ನೀಡಿದರು.

ಯುವ ಘಟಕದ ಅಧ್ಯಕ್ಷ ಸಿಂಗೇನ ಅಗ್ರಹಾರ ಗೌರೀಶ್​, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸತ ಡಾ.ಚಿನ್ನಪ್ಪ ಚಿಕ್ಕಹಾಗಡೆ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net