ಚಾಲಕರೇ, ತಪ್ಪದೆ ಸಂಚಾರ ನಿಯಮ ಅನುಸರಿಸಿ

ಸರಗೂರು ಪಟ್ಟಣದಲ್ಲಿ ಚಾಮುಂಡೇಶ್ವರಿ ಮತ್ತು ಚಿಕ್ಕ ದೇವಮ್ಮ ತಾಯಿಗೆ ವಾಹನ ಚಾಲಕರು ವಿಶೇಷ ಪೂಜೆ ಸಲ್ಲಿಸಿದರು.
ಸರಗೂರು ಪಟ್ಟಣದಲ್ಲಿ ಚಾಮುಂಡೇಶ್ವರಿ ಮತ್ತು ಚಿಕ್ಕ ದೇವಮ್ಮ ತಾಯಿಗೆ ವಾಹನ ಚಾಲಕರು ವಿಶೇಷ ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಾಹನ ಚಾಲಕರ ಸಂಘ
  • ತಾಯಿ ಚಾಮುಂಡೇಶ್ವರಿ ಹಾಗೂ ಶ್ರೀ ಚಿಕ್ಕದೇವಮ್ಮ ಭಾವಚಿತ್ರಗಳಿಗೆ ವಿಶೇಷ ಪೂಜೆ

ಸರಗೂರು:

ಅಂಗವಾಗಿ ಪಟ್ಟಣದಲ್ಲಿ ವಾಹನ ಚಾಲಕರ ಸಂಘದಿಂದ ತಾಯಿ ಚಾಮುಂಡೇಶ್ವರಿ ಹಾಗೂ ಶ್ರೀ ಚಿಕ್ಕದೇವಮ್ಮ ಭಾವಚಿತ್ರಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ವಾಹನ ಚಾಲಕರ ಸಂಘದ ಅಧ್ಯಕ್ಷ ಬಿರ್ವಾಳ್ ಚಿಕ್ಕಣ್ಣ ಮಾತನಾಡಿ, ವಾಹನ ಚಾಲಕರು ಸಮಾಜ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ನಿತ್ಯ ಸಾವಿರಾರು ಜನರನ್ನು ಸುರಕ್ಷಿತವಾಗಿ ಅವರವರ ಸ್ಥಾನಕ್ಕೆ ತಲುಪಿಸುತ್ತಿದ್ದಾರೆ. ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಸಾರ್ವಜನಿಕರೊಂದಿಗೆ ಸೌಹಾರ್ದವಾಗಿ ನಡೆದುಕೊಳ್ಳಬೇಕು. ಸಂಘದ ಸದಸ್ಯರು ಪರಸ್ಪರ ಸಹಕಾರ ಮತ್ತು ಐಕ್ಯತೆಯಿಂದ ಕಾರ್ಯನಿರ್ವಹಿಸಿದರೆ ಸಂಘ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಹೇಳಿದರು.
ಸಮಾಜಸೇವಕ ಹಾಗೂ ದಾನಿ ಮುಳ್ಳೂರು ಮಂಜುನಾಥ್ ವಾಹನ ಚಾಲಕರಿಗೆ ಖಾಕಿ ಸಮವಸ್ತ್ರಗಳನ್ನು ವಿತರಿಸಿದರು. ಪೂಜೆ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸಂಘದ ವತಿಯಿಂದ ಚಾಲಕರಲ್ಲಿ ಶಿಸ್ತು, ಸೇವಾ ಮನೋಭಾವ ಮತ್ತು ಸುರಕ್ಷಿತ ವಾಹನ ಚಾಲನೆ ಕುರಿತು ಅರಿವು ಮೂಡಿಸುವ ಸಂದೇಶವನ್ನು ನೀಡಲಾಯಿತು.
ಸ್ಥಳೀಯರಾದ ಚಾಮರಾಜು, ಮುಳ್ಳೂರು ಮಂಜುನಾಥ್, ನಾಗರಾಜು, ಲೋಕೇಶ್, ಅಭಿ, ಜಯೇಂದ್ರ, ಪ್ರಕಾಶ್, ಅರವಿಂದ್, ರವಿ, ಶ್ರೀಕಾಂತ್, ಸತೀಶ್, ನವೀನ್, ಕುಮಾರ್, ರಮೇಶ್, ನಿಂಗಪ್ಪ, ಪಟೇಲ್, ಹರೀಶ್, ನಾಗೇಶ್, ದಿಲೀಪ್, ರಾಜೇಶ್, ವರದರಾಜು, ಗೋಪಾಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net