ಶುದ್ಧ ನೀರು ಕುಡಿರಿ, ಶುಚಿ ಆಹಾರ ಸೇವಿಸಿ

ಆಳಂದ ತಾಲೂಕಿನ ಪಡಸಾವಳಿ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರ ವಿತರಿಸಲಾಯಿತು. ಟಿಎಚ್​ಒ ಡಾ.ಉಸ್ಮಾನ್​ ಸುತಾರ್​, ಶಿವರಾಜ ಕೆ., ಅಬ್ದುಲ್​ ರೌಫ್​ ಇತರರಿದ್ದರು.
ಆಳಂದ ತಾಲೂಕಿನ ಪಡಸಾವಳಿ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರ ವಿತರಿಸಲಾಯಿತು. ಟಿಎಚ್​ಒ ಡಾ.ಉಸ್ಮಾನ್​ ಸುತಾರ್​, ಶಿವರಾಜ ಕೆ., ಅಬ್ದುಲ್​ ರೌಫ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಟಿಎಚ್​ಒ ಡಾ.ಉಸ್ಮಾನ್​ ಸುತಾರ್​ ಕರೆ
  • ಪಡಸಾವಳಿಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ
ಆಳಂದ: ವಿದ್ಯಾರ್ಥಿಗಳ ಆರೋಗ್ಯದ ಕಡೆ ಪ್ರತಿಯೊಬ್ಬರೂ ಗಮನಹರಿಸಬೇಕು. ಜಂತುಹುಳು ಸಮಸ್ಯೆಯಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿಯೇ ಸರ್ಕಾರ ಯೋಜನೆ ಹಮ್ಮಿಕೊಂಡಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಉಸ್ಮಾನ್​ ಸುತಾರ್​ ತಿಳಿಸಿದರು.
ಪಡಸಾವಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಲ್ಬೆಂಡಜೋಲ್​ ಮಾತ್ರ ನುಂಗಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಆರೋಗ್ಯಕರ ಜೀವನ ನಡೆಸಬೇಕು. ನಿತ್ಯವೂ ಸಾಬೂನಿನಿಂದ ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳಬೇಕು. ಶುದ್ಧ ನೀರು ಕುಡಿಯುವುದು, ಶುಚಿ ಆಹಾರ ಸೇವಿಸಬೇಕು. ಶೌಚಗೃಹ ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಂತುಹುಳು ರೋಗದಿಂದ ಹೊಟ್ಟೆನೋವು, ಹಸಿವಿನ ಕೊರತೆ, ರಕ್ತಹಿನತೆ, ದೌರ್ಬಲ್ಯ ಮತ್ತು ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಸರ್ಕಾರ ಜಂತುಹುಳು ನಿವಾರಣೆ ಕಾರ್ಯಕ್ರಮದಡಿ ಅರ್ಹ ಮಕ್ಕಳಿಗೆ ಅಲ್ಬೆಂಡಜೋಲ್​ ಮಾತ್ರೆ ನೀಡುತ್ತಿದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಬ್ದುಲ್​ ರೌಫ್​, ಮುಖ್ಯಗುರು ಶಿವಾಜಿ ಕೆ., ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಂಬಿಕಾ,  ಆಶಾ ಕಾರ್ಯಕರ್ತೆ ಬೋರಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net