ನಾಟಕಗಳಿಗಿದೆ ಬದುಕು ರೂಪಿಸುವ ಶಕ್ತಿ / ANEKAL

ಆನೇಕಲ್​ ಸಮೀಪದ ಕಾವಲಹೊಸಹಳ್ಳಿಯ ಅಂಬೇಡ್ಕರ್​ ಭವನದಲ್ಲಿ ಬೇರು ರಂಗಶಾಲೆ ಆಯೋಜಿಸಿದ್ದ ಜಂಗಮದ ಬದುಕು ನಾಟಕ ಅಭಿನಯಿಸುತ್ತಿರುವ ಕಲಾವಿದರು.
ಆನೇಕಲ್​ ಸಮೀಪದ ಕಾವಲಹೊಸಹಳ್ಳಿಯ ಅಂಬೇಡ್ಕರ್​ ಭವನದಲ್ಲಿ ಬೇರು ರಂಗಶಾಲೆ ಆಯೋಜಿಸಿದ್ದ ಜಂಗಮದ ಬದುಕು ನಾಟಕ ಅಭಿನಯಿಸುತ್ತಿರುವ ಕಲಾವಿದರು.
Published on

ಆನೇಕಲ್​ :

ನಾಟಕಗಳು ಕೇವಲ ಪಾತ್ರವಲ್ಲದೆ, ಬದುಕು ರೂಪಿಸುವ ಮಾಹಿತಿ ಆಧರಿಸಿವೆ. ಇಂತಹ ಕಲೆಗಳು ನಿರಂತರವಾಗಿ ಉಳಿಯಬೇಕು ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸತ ಡಾ.ವೈ.ಚಿನ್ನಪ್ಪ ಚಿಕ್ಕ ಹಾಗಡೆ ಹೇಳಿದರು.

ಇಲ್ಲಿಗೆ ಸಮೀಪದ ಕಾವಲಹೊಸಹಳ್ಳಿಯ ಅಂಬೇಡ್ಕರ್​ ಭವನದಲ್ಲಿ ಬೇರು ರಂಗಶಾಲೆ ಮತ್ತು ಜಂಗಮರಾಟದ ಅಂಗವಾಗಿ ಪ್ರಸನ್ನ ಅವರ ರಚನೆಯ ಯತೀಶ್​.ಎನ್​. ಕೊಳ್ಳೇಗಾಲ ನಿರ್ದೇಶನದ ಜಂಗಮದ ಬದುಕು ನಾಟಕ ಪ್ರದರ್ಶನ ಬಳಿಕ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್​ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜನ ತಮ್ಮ ದೈನಂದಿನ ಜೀವನವನ್ನು ಹೆಚ್ಚು ಸಮಯ ಕಳೆಯುವಂತಾಗಿದೆ. ಇಂತಹ ಸಂದರ್ಭದಲ್ಲಿ ನಾಟಕ ಹಾಗೂ ಜೀವನ ರೂಪಿಸುವ ಕಾರ್ಯಕ್ರಮಗಳು ಜನರಿಗೆ ಅತ್ಯವಶ್ಯವಾಗಿದ್ದು, ಒತ್ತಡದಿಂದ ಹೊರಬರಲು ಹಾಗೂ ಬದುಕನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಈ ನಾಟಕವು ಮಹಿಳೆಯ ಶೈಣಿಕ ಮತ್ತು ಸಾಮಾಜಿಕ ಸಬಲೀಕರಣದ ಮಹತ್ವ ಸಾರಿದ್ದು, ಪತಿ ಪತ್ನಿಯರ ಸಂಬಂಧ, ವೃತ್ತಿ ಜೀವನ, ವೈಯಕ್ತಿಕ ಮತ್ತು ವೈವಾಹಿಕ ಜೀವನದಲ್ಲಿ ಮಹಿಳೆಯ ಮನಸ್ಥಿತಿ, ಶೈಣಿಕ ಬದುಕಿಗೆ ಮಹಿಳೆಗೆ ಅಡ್ಡಿ ಆಗುವ ಸಮಸ್ಯೆಗಳಿಗೆ ಕನ್ನಡಿ ಹಿಡಿದಿದೆ.ಸಾಕಷ್ಟು ಜನ ತಮ್ಮ ಜೀವನದಲ್ಲಿ ನಡೆಯುವ ಹೇಳಿಕೊಳ್ಳಲು ಸಾಧ್ಯವಾಗದೆ ಮನಸ್ಸಿನಲ್ಲಿ ಕೊರಗುತ್ತಾರೆ. ಈ ನಾಟಕದಲ್ಲಿ ಅದೆಲ್ಲ ವಿಚಾರಗಳನ್ನು ಮುಕ್ತವಾಗಿ ಹೇಗೆ ಜೀವನದಲ್ಲಿ ನಡೆದುಕೊಳ್ಳಬೇಕು ಎಂಬುದನ್ನು ತೋರಿಸಲಾಗಿದೆ ಎಂದರು.

ಕಾರ್ಯಕ್ರಮದ ಆಯೋಜಿಕಿ ಬೇರು ರಂಗಶಾಲೆಯ ಮಮತಾ ಮಾತನಾಡಿ, ನಮ್ಮ ಸಮಾಜದಲ್ಲಿ ಪುರುಷ ಹಾಗೂ ಮಹಿಳೆಯ ನಡುವೆ ಇರುವ ಕೆಲ ಅಂತರಗಳು ಬದಲಾವಣೆ ಆಗಬೇಕು. ಎಲ್ಲ ವಿಚಾರಗಳು ಮುಕ್ತವಾಗಿ ಚರ್ಚೆ ಆದಾಗ ಮಾತ್ರ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ. ಆದರೆ, ಇಂತಹ ಕಾರ್ಯಕ್ರಮ ಹಾಗೂ ನಾಟಕಗಳು ಜನರು ವೀಣೆ ಮಾಡಿದಾಗ ಬದಲಾವಣೆ ಅವರಲ್ಲೆ ಪ್ರಾರಂಭ ಆಗುತ್ತದೆ ಎಂದರು.

ವಕೀಲ ಪುರುಷೋತ್ತಮ್​, ಪ್ರಾಧ್ಯಾಪಕರಾದ ರವಿ, ನೇತ್ರಾವತಿ, ಹೋರಾಟಗಾರರಾದ ವಿಜಯರಾಮು, ಸ್ವಾಭಿಮಾನಿ ಸತೀಶ್​, ಮಂಜುಳಾ ಗುಡಹಟ್ಟಿ, ರಾಮಕೃಷ್ಣ, ಪಾಪಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net