ತ್ಯಾಗರಾಜ ಕೋ-ಆಪರೇಟಿವ ಬ್ಯಾಂಕಿನ ಐಸಿರಿ ಸಮೃದ್ಧಿ ಯೋಜನೆಗೆ ಚಾಲನೆ ನೀಡಿದ ಲಿಡ್ಕರ್ ಎಂಡಿ ಡಾ.ವಸುಂಧರಾ

ಶ್ರೀತ್ಯಾಗರಾಜ ಕೋಪರೇಟಿವ್ ಬ್ಯಾಂಕ್ ಆಯೋಜಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ರವಿಸುಬ್ರಮಣ್ಯ ಉದ್ಘಾಟಿಸಿದರು.  ಡಾ.ಎಂ.ಆರ್.ವೆಂಕಟೇಶ ಮತ್ತಿತರರಿದ್ದರು.
ಶ್ರೀತ್ಯಾಗರಾಜ ಕೋಪರೇಟಿವ್ ಬ್ಯಾಂಕ್ ಆಯೋಜಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ರವಿಸುಬ್ರಮಣ್ಯ ಉದ್ಘಾಟಿಸಿದರು. ಡಾ.ಎಂ.ಆರ್.ವೆಂಕಟೇಶ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಹೊಸ ಯೋಜನೆ
  • ಸಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಐಸಿರಿ ಸಮೃದ್ಧಿ ಖಾತೆ
  • ಸಹಕಾರ ಸಪ್ತಾಹ ಸಮಾರೋಪದಲ್ಲಿ ಚಾಲನೆ

ಬೆಂಗಳೂರು: ಜಗತ್ತಿನಹಲವು ರಾಷ್ಟ್ರಗಳು ಆರ್ಥಿಕಮುಗ್ಗಟ್ಟನ್ನು ಎದುರಿಸುತ್ತಿದ್ದರೂ,ಭಾರತ ಆರ್ಥಿಕಸ್ಥಿರತೆಯಿಂದ ಮುಂದೆ ಸಾಗುತ್ತಿದೆ.ದೇಶದ ಆರ್ಥಿಕವ್ಯವಸ್ಥೆಯ ಸುಧಾರಣೆಯಲ್ಲಿಮಹಿಳೆಯರ ಪಾತ್ರ ಪ್ರಮುಖವಾಗಿದೆಎಂದು ಲಿಡ್ಕರ್ ಸಂಸ್ಥೆ ವ್ಯವಸ್ಥಾಪಕನಿರ್ದೇಶಕಿ ಡಾ.ಕೆ.ಎಂ.ವಸುಂಧರಾಹೇಳಿದರು.

ಎಪಿಎಸ್ಕಾಲೇಜು ಸಭಾಂಗಣದಲ್ಲಿ ಶ್ರೀತ್ಯಾಗರಾಜಕೋ-ಆಪರೇಟಿವ್ಬ್ಯಾಂಕ್ ಲಿ.ಹಮ್ಮಿಕೊಂಡಿದ್ದಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪಸಮಾರಂಭದಲ್ಲಿ ಬ್ಯಾಂಕಿನ ‘ಐಸಿರಿಸಮೃದ್ಧಿ’ ಯೋಜನೆಗೆ ಚಾಲನೆ ನೀಡಿಮಾತನಾಡಿದರು.

ಭಾರತದಅರ್ಥವ್ಯವಸ್ಥೆಯಲ್ಲಿ ಬಹುಹಿಂದಿನಿಂದಲೂ ಮಹಿಳೆಯರು ಪ್ರತ್ಯಕ್ಷಮತ್ತು ಪರೋಕ್ಷವಾಗಿ ಪಾತ್ರವಹಿಸುತ್ತಾ ಬಂದಿದ್ದಾರೆ.ಜಗತ್ತಿನ ಇತರೆರಾಷ್ಟ್ರಗಳಂತೆ ಭಾರತದಲ್ಲಿಆರ್ಥಿಕ ಅಸ್ಥಿರತೆ ಅಷ್ಟು ಸುಲಭವಾಗಿಸಂಭವಿಸುವುದಿಲ್ಲ.ಇಲ್ಲಿ ಮಹಿಳೆಯರುಹಬ್ಬ, ಜಾತ್ರೆ,ಉತ್ಸವ ಇತ್ಯಾದಿಸಂದರ್ಭಗಳಲ್ಲಿ ಹೂವಿನ ಅಲಂಕಾರದಿಂದಹಿಡಿದು ಒಡವೆ ವಸ ಖರೀದಿಯವರೆಗೆವಹಿವಾಟಿನಲ್ಲಿ ತಮ್ಮನ್ನು ತಾವುತೊಡಗಿಸಿಕೊಳ್ಳುತ್ತಾರೆ.5 ರೂ.ಕೊತ್ತುಂಬರಿಸೊಪ್ಪು ಖರೀದಿಯಿಂದ 5ಲಕ್ಷದ ಬಂಗಾರಖರೀದಿಯವರೆಗೆ ಮಹಿಳೆಯ ಭಾಗವಹಿಸುವಿಕೆಪ್ರಧಾನವಾಗಿರುತ್ತದೆ.ಇದರಿಂದಾಗಿದೇಶದ ಆರ್ಥಿಕತೆ ಉತ್ತಮ ಪಥದಲ್ಲಿಸಾಗುತ್ತಿದೆ.ಸದ್ಯ ದೇಶದಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ಕೂಡಾ ಮಹಿಳೆಯಾಗಿದ್ದಾರೆ ಎಂದುವಸುಂಧರಾ ತಿಳಿಸಿದರು.

ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾಡಿದಶಾಸಕ ರವಿಸುಬ್ರಮಣ್ಯ,ದೇಶದ ಆರ್ಥಿಕತೆಗಟ್ಟಿಯಾಲು ಸಹಕಾರಿ ತತ್ವ ಕಾರಣ.ಗ್ರಾಮೀಣಪ್ರದೇಶಗಳಲ್ಲಿರುವ ಸೊಸೈಟಿಗಳು,ಕೋ-ಆಪರೇಟಿವ್ಬ್ಯಾಂಕುಗಳು,ಹಣಕಾಸು ಸಂಸ್ಥೆಗಳುದೇಶದ ಆರ್ಥಿಕ ಸ್ಥಿತಿಯನ್ನುಸುಧಾರಿತ ಮಟ್ಟದಲ್ಲಿ ಕೊಂಡೊಯ್ಯುತ್ತಿವೆ.ಅಮೆರಿಕಾ,ಚೀನಾದಂತಹದೇಶಗಳಲ್ಲೂ ಆರ್ಥಿಕ ಹಿಂಜರಿತಕಾಣುತ್ತಿರುವುದರ ನಡುವೆ ಭಾರತಆರ್ಥಿಕ ಸ್ಥಿರತೆ ಕಾಪಾಡಿಕೊಂಡಿದೆಎಂದರು.

ಕೋ-ಆಪರೇಟಿವ್ಕ್ಷೇತ್ರದಲ್ಲಿರುವವರು ಯಾವುದೇಮುಲಾಜಿಗೊಳಗಾಗದೆ ನಿರ್ಣಯತೆಗೆದುಕೊಂಡು,ಸಾರ್ವಜನಿಕರಹಣವನ್ನು ದುರ್ಬಳಕೆಯಾಗದಂತೆಎಚ್ಚರ ವಹಿಸಬೇಕೆಂದು ರವಿಸುಬ್ರಮಣ್ಯಕಿವಿಮಾತು ಹೇಳಿದರು.

ಸಮಾರಂಭದಲ್ಲಿಸಹಕಾರ ಸಪ್ತಾಹದ ಹಿನ್ನೆಲೆಯಲ್ಲಿತ್ಯಾಗರಾಜ ಕೋ-ಆಪರೇಟಿವ್ಬ್ಯಾಂಕ್ ಲಿ.ನಡೆಸಿದ್ದ ಕಾಲೇಜುಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿವಿಜೇತರಾದ ವಿದ್ಯಾರ್ಥಿಗಳಿಗೆಬಹುಮಾನ ವಿತರಿಸಲಾಯಿತು.ಹಾಗೂ ಸಹಕಾರಿಸಂಘಗಳ ಮೂಲಕ ಸಾಧನೆಗೈದ ವಿವಿಧಸಂಸ್ಥೆಗಳ ಮುಖ್ಯಸ್ಥರನ್ನುಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿಬ್ಯಾಂಕಿನ ಅಧ್ಯಕ್ಷ ಎಂ.ಆರ್.ವೆಂಕಟೇಶ,ಪತ್ರಕರ್ತ ವಿನಾಯಕಭಟ್, ಎಪಿಎಸ್ಶಿಕ್ಷಣ ಸಂಸ್ಥೆ ಕಾರ್ಯದರ್ಶಿಎ.ಪ್ರಕಾಶಮತ್ತಿತರರು ಉಪಸ್ಥಿತರಿದ್ದರು.

ಹೆಣ್ಣುಮಕ್ಕಳಿಗಾಗಿಐಸಿರಿ ಸಮೃದ್ಧಿ ಯೋಜನೆ

ಕೇಂದ್ರಸರ್ಕಾರದ ಸುಖನ್ಯ ಸಮೃದ್ಧಿಯೋಜನೆಯಿಂದ ಪ್ರೇರಿತವಾಗಿರುವತ್ಯಾಗರಾಜ ಕೋ-ಆಪರೇಟಿವ್ಬ್ಯಾಂಕ್ ಸರ್ಕಾರಿ ಶಾಲೆಯಲ್ಲಿಓದುತ್ತಿರುವ 5ನೇತರಗತಿ ವಿದ್ಯಾರ್ಥಿಗಳಿಗೆಬ್ಯಾಂಕಿನಿಂದಲೇ 500ರೂ.ಠೇವಣಿ ಹಣವನ್ನುನೀಡಿ ಖಾತೆಯನ್ನು ತೆರೆಯುವ ಯೋಜನೆಜಾರಿಗೆ ತಂದಿದೆ.ಈ ಖಾತೆಯ ಮೂಲಕ5 ವರ್ಷಗಳುಸಕ್ರೀಯ ವ್ಯವಹಾರ ನಡೆಸಿದವಿದ್ಯಾರ್ಥಿಗಳಿಗೆ ಅವರ ಉನ್ನತವಿದ್ಯಾಭ್ಯಾಸಕ್ಕೆ ಯಾವುದೇಭದ್ರತೆ ಇಲ್ಲದೆ 5ಲಕ್ಷದವರೆಗೆಸಾಲ ನೀಡಲಾಗುತ್ತದೆ.ಕಾಲೇಜುವಿದ್ಯಾರ್ಥಿಗಳಿಗೆ ಶೂನ್ಯ ಠೇವಣಿಖಾತೆ ತೆರೆಯಲು ಅವಕಾಶ ನೀಡುವಮೂಲಕ ವಿದ್ಯಾರ್ಥಿಗಳಿಗೆ ವಿಶೇಷಯೋಜನೆಗಳನ್ನು ಪ್ರಾರಂಭಿಸಿದೆ.

ಸಹಕಾರಿ ಕ್ಷೇತ್ರವು ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಿದ್ದು, ಯುವಕರು ಸಹಕಾರಿ ಕ್ಷೇತ್ರದ ಮೂಲಕ ದೇಶದ ಆರ್ಥಿಕ ವ್ಯವಸ್ಥೆಗೆ ವಿಶೇಷ ಕೊಡುಗೆ ನೀಡಲು ಅವಕಾಶವಿದೆ. ಗುಜರಾತಿನಲ್ಲಿ ಸ್ಥಾಪನೆಯಾಗಿರುವ ತ್ರಿಭುವನದಾಸ್ ಸಹಕಾರ ವಿವಿಯಲ್ಲಿ ಸಹಕಾರಿ ಕ್ಷೇತ್ರದ ಸಂಶೋಧನೆಗಳಿಗೆ ವಿಶೇಷ ಅವಕಾಶ ನೀಡಲಾಗಿದೆ. ಸಹಕಾರಿ ಕ್ಷೇತ್ರದ ಬಗ್ಗೆ ಹೆಚ್ಚು ಆಕರ್ಷಿಸಲು ಶಾಲಾ ಪಠ್ಯದಲ್ಲಿ ಸಹಕಾರಿ ವಿಷಯಗಳನ್ನು ಸೇರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net