ಡಾ.ಪ್ರಣವಾನಂದ ಶ್ರೀ ಪಾದಯಾತ್ರೆ ಸಮಾರೋಪ

ಚಿತ್ತಾಪುರ ಕರದಾಳು ಶಕ್ತೀಪಿಠದ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆಯಲ್ಲಿ ಸತೀಶ ಗುತ್ತೇದಾರ್​, ವೆಂಕಟೇಶ ಕಡೇಚೂರ್​, ಡಾ.ಸದಾನಂದ ಪೆರ್ಲ, ಮಹಾದೇವ ಗುತ್ತೇದಾರ್​, ವೆಂಕಟೇಶ ಗುಂಡಾನೂರು, ಕುಪೇಂದ್ರ ಗುತ್ತೇದಾರ್​ ಇತರರು ಹೆಜ್ಜೆ ಹಾಕಿದರು.
ಚಿತ್ತಾಪುರ ಕರದಾಳು ಶಕ್ತೀಪಿಠದ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆಯಲ್ಲಿ ಸತೀಶ ಗುತ್ತೇದಾರ್​, ವೆಂಕಟೇಶ ಕಡೇಚೂರ್​, ಡಾ.ಸದಾನಂದ ಪೆರ್ಲ, ಮಹಾದೇವ ಗುತ್ತೇದಾರ್​, ವೆಂಕಟೇಶ ಗುಂಡಾನೂರು, ಕುಪೇಂದ್ರ ಗುತ್ತೇದಾರ್​ ಇತರರು ಹೆಜ್ಜೆ ಹಾಕಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಫ್ರೀಡಂ ಪಾರ್ಕ್​ನಲ್ಲಿ 12ರಂದು ಭಾರಿ ಪ್ರತಿಭಟನೆ
  • ಪರಿಹಾರ ಮಾರ್ಗ ಘೋಷಣೆ ಸಮುದಾಯದ ಒತ್ತಡ
ಕಲಬುರಗಿ :ಈಡಿಗ, ಬಿಲ್ಲವ ಸೇರಿ 26 ಪಂಗಡಗಳ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜನವರಿ 6ರಿಂದ ಆರಂಭಗೊಂಡ ಕರದಾಳು ಶಕ್ತೀಪಿಠದ ಡಾ.ಪ್ರಣವಾನಂದ ಸ್ವಾಮೀಜಿ ಐತಿಹಾಸಿಕ ಪಾದಯಾತ್ರೆ ಫೆಬ್ರವರಿ 12ರಂದು ಬೆಂಗಳೂರು ಫ್ರೀಡಂ ಪಾರ್ಕ್​ ತಲುಪಲಿದ್ದು, ಕಲ್ಯಾಣ ಕರ್ನಾಟಕದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಮನವಿ ಮಾಡಿದೆ.
ಬೆಂಗಳೂರಿನ ಯಶವಂತಪುರ ಸಮೀಪದ ದಾಸರಹಳ್ಳಿಯಿಂದ ಫೆಬ್ರವರಿ 12ರಂದು ಬೆಳಗ್ಗೆ 7.30ಕ್ಕೆ ಐತಿಹಾಸಿಕ ಬೃಹತ್​ ಪಾದಯಾತ್ರೆಯು ಹೊರಡಲಿದ್ದು, 10ಕ್ಕೆ ಫ್ರೀಡಂ ಪಾರ್ಕ್​ ತಲುಪಿ ಬೃಹತ್​ ಪ್ರತಿಭಟನೆ ನಡೆಸಲಾಗುವುದು ಎಂದು ಹೋರಾಟ ಸಮಿತಿಯ ಅಧ್ಯ ಸತೀಶ ಗುತ್ತೇದಾರ್​, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್​ತಿಳಿಸಿದ್ದಾರೆ.
ಕಲಬುರಗಿಯ ಜಿಲ್ಲೆಯ ಚಿತ್ತಾಪುರದ ಕರದಾಳ ಶಕ್ತೀಪಿಠದಿಂದ ಅತಿ ಹಿಂದುಳಿದ ಸ್ವಾಮೀಜಿಗಳ ಸಮ್ಮುಖದಲ್ಲಿ ಜನವರಿ 6ರಂದು ಪಾತೆಯಾತ್ರೆಗೆ ಚಾಲನೆ ದೊರೆತಿದ್ದು, ರಾಜ್ಯವ್ಯಾಪಿ ಎಲ್ಲ ಜಿಲ್ಲೆಗಳಲ್ಲಿ ಸರ್ವ ಪಗಳ ಮತ್ತು ಅತೀ ಹಿಂದುಳಿದ ಸಮಾಜದವರ ಭಾರೀ ಜನಬೆಂಬಲದೊಂದಿಗೆ ಸಾಗಿದ ಪಾದಯಾತ್ರೆ ತುಮಕೂರು ಜಿಲ್ಲೆ ಪ್ರವೇಶಿಸಿದ್ದು, ಮುಂದಿನ ಒಂದು ವಾರ ತುಮಕೂರು ಜಿಲ್ಲೆಯಲ್ಲಿ ಪಾದಯಾತ್ರೆ ಸಾಗಲಿದೆ.
ಪಾಲ್ಗೊಳ್ಳುವ ಸಮಾಜ ಬಾಂಧವರಿಗೆ ತುಮಕೂರು ಸಿದ್ದಗಂಗಾ ಮಠದ ಕಲ್ಯಾಣ ಮಂಟಪ ಹಾಗೂ ದಾಸರಹಳ್ಳಿಯ ಎಂಟನೇ ಮೈಲಿ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ಬೀದರ್​ನಿಂದ ಮಂಗಳೂರುವರೆಗಿನ ಸಮುದಾಯದ ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸಮುದಾಯದ ಬಂಧುಗಳು ರೈಲು, ಬಸ್​ ಹಾಗೂ ಖಾಸಗಿ ವಾಹನಗಳಲ್ಲಿ ಆಗಮಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಶಕ್ತಿ ಪೀಠದ ಮಾಧ್ಯಮ ಸಂಚಾಲಕ ಡಾ.ಸದಾನಂದ ಪೆರ್ಲ ತಿಳಿಸಿದ್ದಾರೆ.
ಸರ್ಕಾರ ಪಾದಯಾತ್ರೆ ಅಂತ್ಯಗೊಳಿಸಲು ಪರಿಹಾರ ಮಾರ್ಗ ೂಷಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ಡಾ.ಪ್ರಣವಾನಂದ ಶ್ರೀಗಳು ಆಮರಣಾಂತ ಉಪವಾಸ ಮಾಡುವುದಾಗಿ ೂಷಣೆ ಮಾಡಿರುವುದರಿಂದ ತಣ ಪರಿಹಾರ ಕಲ್ಪಿಸಬೇಕೆಂದು ಸತೀಶ ಹೇಳಿದರು. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯರು ಮತ್ತು ಪಾದಯಾತ್ರೆಯ ಸಂಚಾಲನಾ ಸಮಿತಿ ಸದಸ್ಯರು ಫೆಬ್ರವರಿ 12ರಂದು ಬೆಂಗಳೂರಿನ ಕಾರ್ಯಕ್ರಮ ಯಶಸ್ವಿಗೊಳಿಸಲು ಪೂರ್ವ ತಯಾರಿ ನಡೆಸುವಂತೆ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ ಮನವಿ ಮಾಡಿದ್ದಾರೆ. ಹೋರಾಟ ಸಮಿತಿ ಉಪಾಧ್ಯ ಮಹಾದೇವ ಗುತ್ತೇದಾರ್​, ಶಕ್ತೀಪಿಠದ ಟ್ರಸ್ಟಿ ವೆಂಕಟೇಶ ಗುಂಡಾನೂರು, ಮುಖಂಡರಾದ ಕುಪೇಂದ್ರ ಗುತ್ತೇದಾರ ನಾಗೂರ್​, ಎ.ಇ.ತಿಮ್ಮಪ್ಪ ಗಂಗಾವತಿ, ಸುರೇಶ ಗುತ್ತೇದಾರ ಮಟ್ಟೂರು, ಹಂಬಯ್ಯ ಗುತ್ತೇದಾರ, ಮಲ್ಲಿಕಾರ್ಜುನ ಕುಕ್ಕುಂದಿ, ಮಹೇಶ ಹೋಳಕುಂದ, ಅಂಬಯ್ಯ ಗುತ್ತೇದಾರ ಇಬ್ರಾಹಿಂಪುರ, ಪ್ರವಿಣ್​ ಜತ್ತನ್​, ರಾಜೇಶ ದತ್ತು ಗುತ್ತೇದಾರ್​, ಬಿ.ಎಂ.ರಾವೂರ್​, ಸಂತೋಷ ಚೌಧರಿ ಇತರರಿದ್ದರು.
"

ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಸಮಾಜದ ಗಣ್ಯ ನಾಯಕರ ಸಮ್ಮುಖದಲ್ಲಿ ಫೆಬ್ರವರಿ 12ರಂದು ನಡೆಯುವ ಬೃಹತ್​ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲು ಸಮುದಾಯದ ಜನರು ಫೆಬ್ರವರಿ 11ರಂದು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಪ್ರಯಾಣಿಸಬೇಕು. ಅಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.

ಸತೀಶ ಗುತ್ತೇದಾರ್​,

ಅಧ್ಯಕ್ಷ, ಕಕ ಆರ್ಯ ಈಡಿಗ ಸಮಾಜ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net