

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಹವ್ಯಕ ಪ್ರತಿಷ್ಠಾನದಪ್ರತಿಭಾ ಪುರಸ್ಕಾರ ಮತ್ತು ಹವ್ಯಕಶಿರೋಮಣಿ ಪ್ರಶಸ್ತಿ ಪ್ರಧಾನಸಮಾರಂಭವು ಇಂದು (ಭಾನುವಾರ)ಹಮ್ಮಿಕೊಳ್ಳಲಾಗಿದೆ.
ರಾಜರಾಜೇಶ್ವರಿನಗರದ ಬಿಇಎಂಎಲ್ 3ನೇಹಂತದಲ್ಲಿರುವ ವೈಟ್ ಪರ್ಲ್ಕನ್ವೆನ್ಷನ್ ಹಾಲ್‌ನಲ್ಲಿಮಧ್ಯಾಹ್ನ 2.30ಕ್ಕೆಕಾರ್ಯಕ್ರಮ ನಡೆಯಲಿದ್ದು,ರಾಜಾಜಿನಗರದಕ್ಷೇತ್ರದ ಶಾಸಕ ಎಸ್.ಸುರೇಶಕುಮಾರ್, ವೈದ್ಯಸಾಹಿತಿಡಾ.ನಾ.ಸೋಮೇಶ್ವರ,ಮಾಜಿ ನಗರಸಭಾಸದಸ್ಯ ಎಂ.ಮಂಜುಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಪ್ರತಿಷ್ಠಾನದಅಧ್ಯಕ್ಷ ಗೋಪಾಲಕೃಷ್ಣ ಹೆಗಡೆಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿವಿಜಯನವಾಣಿ ಸಂಸ್ಕೃತ ಗುರುಕುಲಅಂಕಣದ ಅಂಕಣಕಾರ ಡಾ.ಗಣಪತಿ ಹೆಗಡೆಯಲ್ಲಾಪುರ ಅವರಿಗೆ ಹವ್ಯಕ ಶಿರೋಮಣಿಪ್ರಶಸ್ತಿ ಪ್ರದಾನ ಮಾಡಲಾಗುವುದು.ಹಾಗೂ ಸಾಧಕವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ವಿತರಿಸಲಾಗುವುದು.