ಡಾ.ಜಿ.ಪರಮೇಶ್ವರ ಮುಖ್ಯಮಂತ್ರಿ ಆಗಲಿ

Dr. G. Parameshwara should be the Chief Minister.
Dr. G. Parameshwara should be the Chief Minister.
Published on

ಮಾಗಡಿ:

ಡಾ.ಬಿ.ಆರ್​.ಅಂಬೇಡ್ಕರ್​ ಆಶಯಗಳು ಈಡೇರಬೇಕಾದರೆ ಡಿಸಿಎಂ ಡಾ.ಜಿ. ಪರಮೇಶ್ವರ ಮುಖ್ಯಮಂತ್ರಿ ಆಗಬೇಕು ಎಂದು ಬೆಸ್ಕಾಂ ಮಾಜಿ ನಿರ್ದೇಶಕ ಮುಮ್ಮೆನಹಳ್ಳಿ ಬಿ.ವಿ. ಜಯರಾಮು ಹೇಳಿದರು.

ಡಾ.ಜಿ.ಪರಮೇಶ್ವರ ಜನ್ಮದಿದ ಪ್ರಯುಕ್ತ ಅಭಿಮಾನಿ ಬಳಗದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿದರು.
ಡಾ.ಜಿ.ಪರಮೇಶ್ವರ ಮುಖ್ಯಮಂತ್ರಿಯಾದರೆ ರಾಜ್ಯ ಸುಭಿಕ್ಷವಾಗಿರುತ್ತದೆ, ಎಲ್ಲ ವರ್ಗದ ಸಮುದಾಯಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ. ಪರಮೇಶ್ವರ ಮುಖ್ಯಮಂತ್ರಿ ಆಗಬೇಕು ಎಂಬುದು ಜನರ ಆಸೆ. ಇದನ್ನು ಈಡೇರಿಸಲು ಎಐಸಿಸಿ, ಡಿ.ಕೆ.ಶಿವಕುಮಾರ್​, ಸಿದ್ದರಾಮಯ್ಯ ಮುಂದಾಗಲಿ ಎಂದರು.

ಅಭಿವೃದ್ಧಿ ಪರ್ವ ಆರಂಭ

ಡಾ.ಜಿ.ಪರಮೇಶ್ವರ ಅವರು ಶೋಷಿತರು, ಬಡವರು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವನ್ನು ಹತ್ತಿರದಿಂದ ಕಂಡವರು. ಬುದ್ಧ ಹಾಗೂ ಡಾ. ಬಿ.ಆರ್​. ಅಂಬೇಡ್ಕರ್​ ಅವರ ತತ್ವ&ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆದ ನಾಯಕರಾಗಿದ್ದಾರೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬೆಳ್ಳಿಯಪ್ಪ ಹೇಳಿದರು. ನೂತನ ಸಚಿವ ಎಚ್​.ಸಿ. ಬಾಲಕೃಷ್ಣ ಸಾರಥ್ಯ ಹಾಗೂ ದಣ ಜಿಲ್ಲೆಯ ನಾಯಕರ ನೇತೃತ್ವದಲ್ಲಿ ಮಾಗಡಿ ತಾಲೂಕು ಉನ್ನತ ಮಟ್ಟದ ಅಭಿವೃದ್ಧಿ ಕಾಣಲಿದೆ ಎಂಬ ಭರವಸೆ ಇದೆ. ಮುಂಬರುವ ದಿನಗಳಲ್ಲಿ ಮಾಗಡಿಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದರು.

ರಾಜ್ಯ ಕಂಡ ಸರಳ, ಸಜ್ಜನಿಕೆಯ ರಾಜಕಾರಣಿ ಡಾ.ಜಿ.ಪರಮೇಶ್ವರ. ಅವರ 35 ವರ್ಷಗಳ ರಾಜಕಾರಣದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದು, ಕಾಂಗ್ರೆಸ್​ ಪಕ್ಷ$ವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್​ ಮುಖಂಡ ಸುಗ್ಗನಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಡಾ. ಜಿ. ಪರಮೇಶ್ವರ ಅವರ ಆಲೋಚನೆ, ದೂರದೃಷ್ಟಿ ನಾಡಿನ ಅಭಿವೃದ್ಧಿಗೆ ಪೂರಕವಾಗಿದೆ, ಇಂಥ ನಾಯಕರು ಸಿಎಂ ಆದರೆ ನಾಡಿನ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net