14ಕ್ಕೆ ಡಾ.ಅಂಬೇಡ್ಕರ್​ ಜಯಂತಿ Ambedkar Jayanti

14ಕ್ಕೆ ಡಾ.ಅಂಬೇಡ್ಕರ್​ ಜಯಂತಿ Ambedkar Jayanti
14ಕ್ಕೆ ಡಾ.ಅಂಬೇಡ್ಕರ್​ ಜಯಂತಿ Ambedkar Jayanti
Published on
ಮುಳಬಾಗಿಲು: ಬಾಬು ಜಗಜೀವನ್​ ರಾಮ್​ ಮತ್ತು ಡಾ.ಬಿ.ಆರ್​.ಅಂಬೇಡ್ಕರ್​ ಅವರ ಜಯಂತಿಯನ್ನು ಏ.14ರಂದು ಸರಳವಾಗಿ ಆಚರಿಸಿ, ಮುಂದಿನ ದಿನಗಳಲ್ಲಿ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಸಮೃದ್ಧಿ ವಿ. ಮಂಜುನಾಥ್​ ಹೇಳಿದರು.Ambedkar Jayanti
ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್​. ಅಂಬೇಡ್ಕರ್​ ಮತ್ತು ಬಾಬು ಜಗಜೀವನ್​ ರಾಮ್​ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಗರದಲ್ಲಿ ಅಂಬೇಡ್ಕರ್​ ಸಮುದಾಯದ ಭವನ ನಿಮಾರ್ಣವಾಗುತ್ತಿದೆ. ವಸತಿ ನಿಲಯ ಲೋಕಾರ್ಪಣೆಗೆ ಸಿದ್ಧವಾಗಿದೆ. ಅಲ್ಲದೆ ಅಂಬೇಡ್ಕರ್​ ಪ್ರತಿಮೆ ಕಾಮಗಾರಿ ನಡೆಯುತ್ತಿದೆ, ಹೀಗಾಗಿ ಏ.14ರಂದು ತಾಪಂ ಸಭಾಂಗಣದಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತದೆ ಎಂದರು.
ದಲಿತ ಸಂಘಟನೆ ಮುಖಂಡರಾದ ಶ್ರೀನಿವಾಸ್​, ವರದಗಾನಗಳ್ಳಿ ಮುನಿವೆಂಕಟಪ್ಪ, ಕೀಲುಹೊಳಲಿ ಸತೀಶ್​, ಕಾರ್​ ಶ್ರೀನಿವಾಸ್​, ಚಿನ್ನಪ್ಪಯ್ಯ, ಗಣೇಶಪಾಳ್ಯ ಕಿಟ್ಟಿ, ಮುನಿವೆಂಕಟಪ್ಪ, ಜಗದೀಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net