

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಮಾಜಿರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂಅವರ ಆತ್ಮಚರಿತ್ರೆ ವಿಂಗ್ಸ್ ಆಫ್ಫೈರ್ ಕೃತಿಯ ಕನ್ನಡ ಅನುವಾದಅಗ್ನಿಯ ರೆಕ್ಕೆಗಳು ಪುಸ್ತಕವನ್ನುಗುರುವಾರ ಲೋಕಭವನದಲ್ಲಿ ನಡೆದಸರಳ ಸಮಾರಂಭದಲ್ಲಿ ರಾಜ್ಯಪಾಲಥಾವರ್ ಚಂದ್ ಗೆಹಲೋತ್ ಬಿಡುಗಡೆಮಾಡಿದರು.
ಕೆ.ಜಯಪ್ರಕಾಶ್ರಾವ್ ಕನ್ನಡಕ್ಕೆ ಅನುವಾದಿಸಿರುವಈ ಕೃತಿ, ಡಾ.ಕಲಾಂ ಅವರ ಜೀವನಸಾಧನೆಗಳು,ಚಿಂತನೆಗಳುಮತ್ತು ರಾಷ್ಟ್ರ ನಿರ್ಮಾಣದಕುರಿತಾದ ಅವರ ದೃಷ್ಟಿಕೋನವನ್ನುಕನ್ನಡ ಓದುಗರಿಗೆ ತಲುಪಿಸುವಮಹತ್ವದ ಪ್ರಯತ್ನವಾಗಿದೆ.
ಕೃತಿಬಿಡುಗಡೆ ಮಾಡಿ ಮಾತನಾಡಿದರಾಜ್ಯಪಾಲರು,ಜನರ ರಾಷ್ಟ್ರಪತಿಎಂದು ಖ್ಯಾತರಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂಅವರು ತಮ್ಮ ಸರಳತೆ,ವೈಜ್ಞಾನಿಕಸಾಧನೆಗಳು ಹಾಗೂ ರಾಷ್ಟ್ರಸೇವೆಯಮೂಲಕ ಇಂದಿಗೂ ಯುವಜನತೆಗೆಸ್ಫೂರ್ತಿಯಾಗಿದ್ದಾರೆ.ಅವರಂತಹ ಮಹಾನ್ವ್ಯಕ್ತಿಯ ಜೀವನಾಧಾರಿತ ಕೃತಿಯನ್ನುಕನ್ನಡದಲ್ಲಿ ಪ್ರಕಟಿಸುವುದುರಾಜ್ಯದಲ್ಲಿ ಕನ್ನಡ ಸಾಹಿತ್ಯಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆಮತ್ತಷ್ಟು ಉತ್ತೇಜನ ನೀಡಲಿದೆಎಂದರು.
ಕಾರ್ಯಕ್ರಮದಲ್ಲಿವಾಸನ್ ಪಬ್ಲಿಕೇಷನ್ಸ್‌ನ ರಘುನಾಥ್,ಶ್ರೀನಿವಾಸ್,ಎಚ್‌ಎಎಲ್‌ನಮಾಜಿ ಮುಖ್ಯ ವ್ಯವಸ್ಥಾಪಕಕೃಷ್ಣರಾವ್,ಕೃತಿಯ ಅನುವಾದಕಕೆ. ಜಯಪ್ರಕಾಶ್ರಾವ್ ಮತ್ತಿತರರಿದ್ದರು.