ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಎಸ್.ಬಸವರಾಜು, ಪುರಸಭೆ ಮಾಜಿ ಸದಸ್ಯ ಎಸ್.ಭಾಸ್ಕರ್, ಜೆಡಿಎಸ್ ಸಾಮಾಜಿಕ ಜಾಲತಾಣದ ಹರ್ಷವರ್ಧನ್, ಹಿರಿಯ ಆರೋಗ್ಯ ಸಹಾಯಕಿ ಪುಷ್ಪಾ, ಸಿಬ್ಬಂದಿ ಕಲಾವತಿ, ವರಲಕ್ಷಿ$್ಮ, ಲೋಕೇಶ್, ರಾಜೇಶ್ ಇತರರು ಇದ್ದರು.
Published on:
Copied
Follow Us
ವಿಜಯಪುರ : ದೇಶವು ಪೋಲಿಯೋದಿಂದ ಮುಕ್ತವಾಗಿದ್ದರೂ ಅಕ್ಕಪಕ್ಕದ ದೇಶಗಳಲ್ಲಿ ಇಂದಿಗೂ ಪೋಲಿಯೋ ಪ್ರಕರಣಗಳು ಕಂಡುಬರುತ್ತಿವೆ. ಆದ್ದರಿಂದ ಭಾರತದಲ್ಲಿಯೂ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹಾಕಿಸಬೇಕು ಎಂದು ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಎಸ್.ಬಸವರಾಜು ಹೇಳಿದರು.
ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸೀನಿಯರ್ ಫಾರ್ಮಸಿಸ್ಟ್ ಕುಮದಾ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣ, ಅಂಗನವಾಡಿ ಕೇಂದ್ರಗಳು ಹಾಗೂ ಆಸ್ಪತ್ರೆ ಸೇರಿ ಎಲ್ಲೆಡೆ ಪೋಲಿಯೋ ಹನಿ ವಿತರಿಸಲು ವ್ಯವಸ್ಥೆ ಮಾಡಲಾಗಿದ್ದು, 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಸೋಮವಾರವೂ ಆಸ್ಪತ್ರೆಯಲ್ಲಿ ಪೋಲಿಯೋ ಹನಿ ನೀಡಲಾಗುತ್ತಿದ್ದು, ನಂತರ ಆರೋಗ್ಯ ಕಾರ್ಯಕರ್ತರು ಮನೆಮನೆಗೂ ಭೇಟಿ ನೀಡಿ ಪೋಲಿಯೋ ಹನಿ ಹಾಕಲಿದ್ದಾರೆ ಎಂದರು.
ಆಸ್ಪತ್ರೆ ಸೂಪರ್ಡೆಂಟ್ ಗುರು ಮಂಜುನಾಥ್, ಫಾರ್ಮಸಿಸ್ಟ್ ಬಿಂದು, ಲ್ಯಾಬ್ ಟೆಕ್ನಿಷಿಯನ್ಸ್ಗಳಾದ ಮಂಜುನಾಥ್, ರಾಜೇಶ್ವರಿ, ಸುಮಾ ಇತರರು ಇದ್ದರು.