ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸಿ

ತಲ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಅಭಿಯಾನದ ಪೂರ್ವಸಿದ್ಧತಾ ಸಭೆಯಲ್ಲಿ ಡಾ.ಮಲ್ಲಮ್ಮನೇಸರಗಿ ಮಾತನಾಡಿದರು. ವಸಂತ ಚೌಹಾಣ, ಆರತಿ ಹೊಳ್ಳಿಕೇರಿ, ಗೀತಾ ಪೋಳ, ಸವಿತಾ ಚನ್ನಮೇತ್ರಿ ಇತರರಿದ್ದರು.
ತಲ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಅಭಿಯಾನದ ಪೂರ್ವಸಿದ್ಧತಾ ಸಭೆಯಲ್ಲಿ ಡಾ.ಮಲ್ಲಮ್ಮನೇಸರಗಿ ಮಾತನಾಡಿದರು. ವಸಂತ ಚೌಹಾಣ, ಆರತಿ ಹೊಳ್ಳಿಕೇರಿ, ಗೀತಾ ಪೋಳ, ಸವಿತಾ ಚನ್ನಮೇತ್ರಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ತಲ್ಲೂರ
ಮಕ್ಕಳಲ್ಲಿನ ಅಂಗವೈಕಲ್ಯ ನಿರ್ಮೂಲನೆಗೆ ಸರ್ಕಾರ ಪಲ್ಸ್ ಪೋಲಿಯೋ ಅಭಿಯಾನ ಹಮ್ಮಿಕೊಂಡಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಲಿಯೋ ಹನಿ ಹಾಕಿಸಬೇಕು ಎಂದು ವೈದ್ಯಾಧಿಕಾರಿ ಡಾ.ಮಲ್ಲಮ್ಮ ನೇಸರಗಿ ಮನವಿ ಮಾಡಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಅಭಿಯಾನದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ತೋಟದ ಮನೆ, ಇಟ್ಟಂಗಿ ಭಟ್ಟಿ, ಬಸ್ ನಿಲ್ದಾಣ, ಬೇರೆ ರಾಜ್ಯ ಹಾಗೂ ಜಿಲ್ಲೆಯಿಂದ ಬಂದ ಕಾರ್ಮಿಕ ಮಕ್ಕಳು ಹಾಗೂ ದೂರದ ಪ್ರದೇಶಗಳಲ್ಲಿರುವ ಯಾವುದೇ ಮಗು ಪೋಲಿಯೋ ಹನಿಯಿಂದ ವಂಚಿತವಾಗದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಶ್ರಮಿಸಬೇಕು ಎಂದರು.
ಸಮುದಾಯ ಆರೋಗ್ಯಾಧಿಕಾರಿ ವಸಂತ ಚೌಹಾಣ ಮಾತನಾಡಿದರು. ಾರ್ಮಸಿ ಅಧಿಕಾರಿ ಆರತಿ ಹೊಳ್ಳಿಕೇರಿ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸುಲೋಚನಾ ಪತ್ತಾರ, ಸವಿತಾ ಚನ್ನಮೇತ್ರಿ, ಸಮುದಾಯ ಆರೋಗ್ಯಾಧಿಕಾರಿ ಗೀತಾ ಪೋಳ, ಮಲ್ಲವ್ವ ಕಟ್ಟಿಮನಿ, ಸುವರ್ಣಾ ಬೈಲಹೊಂಗಲ, ಭೀಮವ್ವ ಭಜಂತ್ರಿ, ಶಾಂತಾ ಬೆನಕಟ್ಟಿ, ಲಕ್ಷ್ಮೀ ತಳವಾರ, ಶಂಕರ ಲಮಾಣಿ, ನೀಲವ್ವ ಬೆನಕಟ್ಟಿ, ಶೋಭಾ ಚುಳಕಿ ಹಾಗೂ ಆಶಾ ಕಾರ್ಯಕರ್ತೆಯರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net