ಇಂಡಿ ತಾಲೂಕಿನ ನಾದ ಕೆ.ಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಹ್ಯೂಮನ್ ಪ್ಯಾಪಿಲೋಮಯನ್ ವ್ಯಾಕ್ಸಿನ್ ಅರಿವು ಕಾರ್ಯಕ್ರಮದಲ್ಲಿ ವೈ.ಎಂ. ಪೂಜಾರ ಮಾತನಾಡಿದರು. ಸಿ.ಎಂ. ಬಂಡಗಾರ, ಎ.ಬಿ. ಗುಗದಡ್ಡಿ, ಶ್ರೀಶೈಲ ಪಾಟೀಲ ಮತ್ತಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ. ಪೂಜಾರ ಸಲಹೆ
ಹ್ಯೂಮನ್ ಪ್ಯಾಪಿಲೋಮಯನ್ ವ್ಯಾಕ್ಸಿನ್ ಅರಿವು
ಇಂಡಿ:ಎಚ್‌ಪಿವಿ ಲಸಿಕೆ ಕ್ಯಾನ್ಸರ್ ತಡೆಗೆ ಸಹಕಾರಿಯಾಗಿದೆ. ಈ ಲಸಿಕೆಯನ್ನು 14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನ ಒಳಗಿನ ಹೆಣ್ಣು ಮಕ್ಕಳಿಗೆ (ಕಿಶೋರಿಯರಿಗೆ) ಭಾರತ ಸರ್ಕಾರದ ಮಾರ್ಗಸೂಚಿ ಅನುಸಾರ ನೀಡಲಾಗುವುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ. ಪೂಜಾರ ತಿಳಿಸಿದರು.
ತಾಲೂಕಿನ ನಾದ ಕೆ.ಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮಯನ್ ವ್ಯಾಕ್ಸಿನ್) ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಚ್‌ಪಿವಿ ಲಸಿಕೆ ಪಡೆದರೆ ಸಂತತಿ ಆಗುವುದಿಲ್ಲ ಎಂಬ ತಪ್ಪು ಸಂದೇಶಗಳು ಹರಿದಾಡುತ್ತಿವೆ. ಅದಕ್ಕೆ ಯಾರೂ ಕಿವಿಗೊಡಬೇಡಿ, ಪ್ರಜ್ಞಾವಂತ ನಾಗರಿಕರು ಸಮಾಜದಲ್ಲಿನ ತಪ್ಪು ಕಲ್ಪನೆ-ಮೂಢನಂಬಿಕೆ ಹೋಗಲಾಡಿಸಿ ಭವಿಷ್ಯದ ಹೆಣ್ಣು ಮಕ್ಕಳ ಭದ್ರತೆಗೆ ಈ ಲಸಿಕೆಯು ಸಂಜೀವಿನಿ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಮಾನ್ಯತೆ ಪಡೆದ ಎಚ್‌ಪಿವಿ ಲಸಿಕೆ ಗರ್ಭಕಂಠನಾಳ, ಕ್ಯಾನ್ಸರ್ ತಡೆಗಟ್ಟಲು ಸಂಜೀವಿನಿ ಆಗಿದೆ. ಇದರ ಬಗ್ಗೆ ತಪ್ಪು ಕಲ್ಪನೆ ಬೇಡ. ಸಂಶೋಧಕರು ಅಧ್ಯಯನ ಮಾಡಿ ಐಸಿಎಂಆರ್ ಎಸ್.ಒ.ಪಿ. ಮಾರ್ಗದರ್ಶನದಲ್ಲಿ ಭಾರತ ಸರ್ಕಾರ ದೇಶಾದ್ಯಂತ ಲಸಿಕೆ ನೀಡಿದೆ.
ಈ ಲಸಿಕೆಯನ್ನು ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಮಾರ್ಗಸೂಚಿ ಅನುಸಾರ ಆಯೋಜನೆ ಮಾಡಲಾಗುತ್ತಿದೆ. ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಂದ ಲಸಿಕೆ ನೀಡಲಾಗುವುದು. ಲಸಿಕೆ ಪಡೆದ ಮಕ್ಕಳಿಗೆ ಯೂ-ವಿನ್ ತಂತ್ರಾಂಶದಲ್ಲಿ ನೋಂದಣಿ ಮಾಡಿ ಪ್ರಮಾಣ ಪತ್ರ ನೀಡಲಾಗುತ್ತದೆ. ಈ ಹಿನ್ನೆಲೆ ಎಲ್ಲಾ ಲಾನುಭವಿಗಳು ಅಗತ್ಯ ಸೂಕ್ತ ಗುರುತಿನ ಚೀಟಿಯೊಂದಿಗೆ ಮೊಬೈಲ್ ನಂ. ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ ಎಂದರು.