ಶ್ರೀನಿವಾಸಪುರ: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸಮುದಾಯದ ಹಿರಿಯ ರಾಜಕಾರಣಿ. ಊಹಾಪೋಹಗಳಿಗೆ ಕಿವಿಗೊಡದೆ ಕಾಂಗ್ರೆಸ್ ವರಿಷ್ಠರು ಪಕ್ಷದಲ್ಲಿ ಉಳಿಸಿಕೊಂಡು ಮುಂದುವರಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಷರೀಫ್ ಹೇಳಿದರು.speculation
ಪಟ್ಟಣದ ಪಿಎಲ್ಡಿ ಬ್ಯಾಂಕ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ 130 ಸ್ಥಾನ ಗಳಿಸಿ ಅಧಿಕಾರಕ್ಕೆ ಬರಬೇಕಾದರೆ ಅಲ್ಪಸಂಖ್ಯಾತದ್ದೂ ಪಾಲಿದೆ. ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಸೀರ್ ಅಹ್ಮದ್ಗೆ ಬಾಗಲಕೋಟೆ ಜವಾಬ್ದಾರಿ ನೀಡಲಾಗಿತ್ತು. ಅವರು ಅಲ್ಲಿಯೇ 7 ದಿನ ಇದ್ದು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಜನ ವೊಟ್ ಹಾಕಿಲ್ಲ ಎಂದು ಅಪಪ್ರಚಾರ ಮಾಡಿ ರಾಜೀನಾಮೆ ನೀಡುವಂತೆ ಹೈಕಮಾಂಡ್ ಒತ್ತಡ ತರುತ್ತಿರುವುದು ಶೋಭೆ ತರುವುದಿಲ್ಲ. ನಸೀರ್ ಅಹ್ಮದ್ ಒಬ್ಬ ಪ್ರಶ್ನಾತಿತ ನಾಯಕ. ಅವರನ್ನು ರಾಜಕೀಯವಾಗಿ ತುಳಿಯುವ ಹುನ್ನಾರ ನಡೆಯುತ್ತಿದೆ ಇದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ, ನಸೀರ್ ಅಹ್ಮದ್ ಪಕ್ಷ ಅಧಿಕಾರಕ್ಕೆ ಬರಲು ಹಗಲು&-ಇರುಳು ದುಡಿದಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಅವರು ದೊಡ್ಡ ಶಕ್ತಿ ಎಂಬುದನ್ನ ಹೈಕಮಾಂಡ್ ಮರೆಯಬಾರದು. ಯಾವುದೇ ಕಾರಣಕ್ಕೂ ಅವರಿಂದ ರಾಜೀನಾಮೆ ಪಡೆಯಬಾರದು ಎಂದರು.
ಕೆಎಂಎಫ್ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ ಮಾತನಾಡಿ, ಕಾಂಗ್ರೆಸ್ನಲ್ಲಿ ಸುಮಾರು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ, ಪ್ರತಿ ಚುನಾವಣೆಯಲ್ಲೂ ಪ್ರಮಾಣಿಕವಾಗಿ ಕಾಂಗ್ರೆಸ್ ಗೆಲುವಿಗೆ ಬೆನ್ನು ಕೊಟ್ಟು ಕೆಲಸ ಮಾಡಿದವರು ನಸೀರ್ ಅಹ್ಮದ್. ಅಂಥವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ಭೂ ಮಂಜೂರಾತಿ ಸಮಿತಿ ಸದಸ್ಯ ನಾಗದೇನಹಳ್ಳಿ ಸೀತಾರಾಮರೆಡ್ಡಿ, ಮುತ್ತಕಪಲ್ಲಿ ಸರ್ದಾರ್, ತವಕಲ್ ಸಿರಿಜ್ ಅಮ್ಜದ್ ಖಾನ್, ನಾಗದೇನಹಳ್ಳಿ ಶ್ರೀನಿವಾಸ್, ಕಲ್ಲೂರು ವೆಂಕಟರಾಮ ರೆಡ್ಡಿ, ಬಯ್ಯಪ್ಪಲ್ಲಿ ಹುಸೇನ್ ಇದ್ದರು.