ಕೆಲಸಕ್ಕೆ ಮಧ್ಯವರ್ತಿಗಳ ಮೊರೆ ಹೋಗದಿರಿ work

ಕೆಲಸಕ್ಕೆ ಮಧ್ಯವರ್ತಿಗಳ ಮೊರೆ ಹೋಗದಿರಿ work
ಕೆಲಸಕ್ಕೆ ಮಧ್ಯವರ್ತಿಗಳ ಮೊರೆ ಹೋಗದಿರಿ work
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ವೈ.ನಂಜೇಗೌಡ ಸಲಹೆ
  • ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಲು ಸೂಚನೆ
ಲಕ್ಕೂರು: ಸರ್ಕಾರಿ ಕಚೇರಿಗಳಲ್ಲಿ ಮತ್ತು ಗ್ರಾಮಗಳಲ್ಲಿ ಜನರು ಮಧ್ಯವರ್ತಿಗಳ ಮೊರೆ ಹೋಗದೆ ತಮಗೆ ಬೇಕಾದ ಮೂಲ ಸೌಲಭ್ಯವನ್ನು ನೇರವಾಗಿ ಪಡೆಯಬೇಕು. ವೃದ್ಧಾಪ್ಯ ವೇತನ, ಪಡಿತರ ಚೀಟಿ, ನಿವೇಶನಕ್ಕೆ ಅರ್ಜಿ, ಚರಂಡಿ, ರಸ್ತೆ, ಬೀದಿದೀಪ ಸೇರಿ ಹಲವಾರು ಸರ್ಕಾರಿ ಸೌಲಭ್ಯವನ್ನು ಗ್ರಾಪಂ ಮಟ್ಟದಲ್ಲಿ ಪಡೆಯಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.work
ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ "ಶಾಸಕರು ಮತ್ತು ತಾಲೂಕು ಆಡಳಿತದ ನಡೆ ಗ್ರಾಮದ ಕಡೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಕಾರ್ಯಕ್ರಮವನ್ನು ತಾಲೂಕಿನ 28 ಗ್ರಾಪಂಗಳಲ್ಲಿ 32 ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿಕೊಂಡು ಬರುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಕುಂದು&ಕೊರತೆಗಳನ್ನು ಗ್ರಾಪಂ ಮಟ್ಟದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ತಿಳಿಸಿದರೆ ಪರಿಹಾರ ಕಲ್ಪಿಸಲಾಗುತ್ತದೆ. ರೈತರು, ಮಹಿಳೆಯರು, ಅಧಿಕಾರಿಗಳ ಸಂಪರ್ಕ ಇಲ್ಲದೆ ಮಧ್ಯವರ್ತಿಗಳ ಮೂಲಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಧ್ಯವರ್ತಿಗಳನ್ನು ತಪ್ಪಿಸುವ ಸಲುವಾಗಿ ಹಾಗೂ ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ತಮಗಾಗಿರುವ ತೊಂದರೆ ಬಗೆ ಹರಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿವೆ ಬೆಟ್ಟದಷ್ಟು ಸಮಸ್ಯೆ: ಪಡಿತರ ಚೀಟಿ ಸಮಸ್ಯೆ, ಸಂಧ್ಯಾ ಸುರಕ್ಷಾ ಯೋಜನೆ, ನಿವೇಶನ ಇದ್ದರೂ ಇ-&ಖಾತೆ ಸಮಸ್ಯೆ, ಸ್ಮಶಾನ ಸಮಸ್ಯೆ, ಬಂಡಿ ದಾರಿ ಸಮಸ್ಯೆ, ಬಸ್​ ಸಂಚಾರ, ವಿದ್ಯುತ್​ ಸಂಪರ್ಕ ಇಲ್ಲದಿರುವುದು. ಶುದ್ಧಕುಡಿಯುವ ನೀರಿನ ಘಟಕ ಇಲ್ಲದಿರುವುದು ಹೀಗೆ ಹಲವು ಸಮಸ್ಯೆಗಳು ಗ್ರಾಮವನ್ನು ಭಾದಿಸುತ್ತಿವೆ.
ಅಧಿಕಾರಿಗಳಿಂದ ಪರಿಹಾರ: ಹಲವು ಗ್ರಾಮಗಳ ಸಮೀಪ ನೂತನವಾಗಿ ನಿಮಾರ್ಣವಾಗಿರುವ ಬಡಾವಣೆಗಳನ್ನು ಉಪಗ್ರಾಮಗಳಾಗಿ ಆಯ್ಕೆ ಹಾಗೂ ಘೋಷಣೆ, ಹೊಸ ಪಡಿತರ ಚೀಟಿಗಳು, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರಿಗೆ ಪಿಂಚಣಿ ಹಾಗೂ ವಾಹನ ವಿತರಣೆ, ವಿಧವಾ ವೇತನ, ವಿದ್ಯುತ್​ ಸಂಪರ್ಕ, ಹೈಮಾಸ್ಟ್​ ದೀಪ ಅಳವಡಿಕೆ, ಸಿಸಿ ರಸ್ತೆ ನಿಮಾರ್ಣ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಸ್ಥಳದಲ್ಲಿಯೇ ನಿವಾರಣೆ ಮಾಡಲಾಯಿತು.
ಉಪತಹಸೀಲ್ದಾರ್​ ಚೇತನ್​, ಆರೋಗ್ಯಾಧಿಕಾರಿ ರಮೇಶ್​ಬಾಬು, ಬೆಸ್ಕಾಂ ಏಇಇ ಅನ್ಸ್​ರ್​ ಪಾಷ, ಆಹಾರ ಶಿರಸ್ತೇದಾರ್​ ಅಭಿಜಿತ್​, ಕೆಎಸ್​ಆರ್​ಟಿಸಿ ನಿರ್ವಾಹಕ ಗೋಪಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net