ಎಸ್‌ಐಆರ್ ಅರ್ಜಿ ಭರ್ತಿಗೆ ಭಯ ಬೇಡ

ಪಿರಿಯಾಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಸ್ವ-ಸಹಾಯ ಸಂಘದ ಸದಸ್ಯರಿಂದ ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಜಾಗೃತಿ ಜಾಥಾಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಿ.ಬಿ.ಸುನಿಲ್ ಕುಮಾರ್ ಚಾಲನೆ ನೀಡಿದರು. ತಹಶೀಲ್ದಾರ್ ನಿಸರ್ಗ ಪ್ರಿಯ, ಪ್ರಾಧ್ಯಾಪಕ ಶಾಕೀರ್ ಇತರರು ಇದ್ದಾರೆ.
ಪಿರಿಯಾಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಸ್ವ-ಸಹಾಯ ಸಂಘದ ಸದಸ್ಯರಿಂದ ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಜಾಗೃತಿ ಜಾಥಾಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಿ.ಬಿ.ಸುನಿಲ್ ಕುಮಾರ್ ಚಾಲನೆ ನೀಡಿದರು. ತಹಶೀಲ್ದಾರ್ ನಿಸರ್ಗ ಪ್ರಿಯ, ಪ್ರಾಧ್ಯಾಪಕ ಶಾಕೀರ್ ಇತರರು ಇದ್ದಾರೆ.
Published on

ಪಿರಿಯಾಪಟ್ಟಣ: ಎಸ್‌ಐಆರ್ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಅರ್ಜಿ ಭರ್ತಿ ಮಾಡಲು ಭಯಬೇಡ ಜಾಗೃತಿಯಿರಲಿ ಎಂದು ತಾಲೂಕುಪಂಚಾಯಿತಿ ಕಾರ್ಯನಿರ್ವಾಹಕಅಧಿಕಾರಿ ಡಿ.ಬಿ.ಸುನಿಲ್ಕುಮಾರ್ ತಿಳಿಸಿದರು.

ತಾಪಂಮತ್ತು ತಾಲೂಕು ಸ್ವೀಪ್ ಸಮಿತಿವತಿಯಿಂದ ಸೋಮವಾರ ಪಟ್ಟಣದ ತಾಲೂಕುಪಂಚಾಯಿತಿ ಆವರಣದಲ್ಲಿ ಸ್ವ
-ಸಹಾಯಸಂಘದ ಸದಸ್ಯರಿಂದ ಆಯೋಜಿಸಿದ್ದಮತದಾರರ ಪಟ್ಟಿ ವಿಶೇಷ ಸಮಗ್ರಪರಿಷ್ಕರಣೆ (ಎಸ್‌ಐಆರ್)ಜಾಗೃತಿ ಜಾಥಾಗೆ ಚಾಲನೆನೀಡಿ ಮಾತನಾಡಿದರು.

ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಅರ್ಜಿ
(ಎಸ್‌ಐಆರ್)ಭರ್ತಿ ಸಂಬಂಧ ಅನೇಕರಲ್ಲಿಗೊಂದಲವುಂಟಾಗಿ ಭಯಪಟ್ಟಿದ್ದಾರೆ.ಆ ಭಯವನ್ನು ಹೋಗಲಾಡಿಸುವಉದ್ದೇಶದಿಂದ ಸ್ವ-ಸಹಾಯಸಂಘದ ಮಹಿಳೆಯರಿಗೆ ವಿಶೇಷವಾಗಿಈ ದಿನ ತರಬೇತಿ ನೀಡಲಾಗಿದೆ.ಮಹಿಳೆಯರು ಮಾಹಿತಿಪಡೆದುಕೊಂಡರೆ ಇಡೀ ಕುಟುಂಬವೇಮತದಾರರ ಪಟ್ಟಿಯಿಂದ ಹೊರಗುಳಿಯುವುದರಿಂದತಪ್ಪುತ್ತದೆ ಎಂದರು.

ತಹಸೀಲ್ದಾರ್ನಿಸರ್ಗ ಪ್ರಿಯ ಮಾತನಾಡಿ
,ಎಸ್‌ಐಆರ್ ಸಂಬಂಧಿಸಿದಂತೆಸಂಪೂರ್ಣವಾಗಿ ತಿಳಿದುಕೊಳ್ಳುವಮೂಲಕ ನಿಮ್ಮ ಸ್ವ-ಸಹಾಯಸಂಘದ ಸದಸ್ಯರಿಗೂ ಹಾಗೂ ನಿಮ್ಮಸುತ್ತಮುತ್ತಲಿನ ಜನರಿಗೂ ಈ ಕುರಿತುಜಾಗೃತಿ ಮೂಡಿಸಿ ಎಂದು ಸಲಹೆನೀಡಿದರು.

ಬೆಟ್ಟದಪುರಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕಶಾಕೀರ್ ಮಾತನಾಡಿ
, ಮೃತಪಟ್ಟವರು,ಶಾಶ್ವತವಾಗಿ ಬೇರೆ ಕಡೆನೆಲೆಸಿದವರು, ಎರಡುಕಡೆಗಳಲ್ಲಿ ಮತದಾನ ಹಕ್ಕುಹೊಂದಿದವರನ್ನು ಮಾತ್ರವೇ ಮತದಾರರಪಟ್ಟಿಯಿಂದ ತೆಗೆದು ಹಾಕಲಾಗುವುದುಎಂದರು.

ಮತದಾನಎಲ್ಲರ ಹಕ್ಕಾಗಿದ್ದು
, ಎಸ್‌ಐಆರ್ಅರ್ಜಿ ಭರ್ತಿ ಮಾಡದೇ ಹೋದರೆಮತದಾರರ ಪಟ್ಟಿಯಲ್ಲಿ ನಿಮ್ಮಹೆಸರು ಕೈಬಿಡಲಾಗುವುದು.ಹೀಗಾಗಿ, ಪ್ರತಿಯೊಬ್ಬರುಎಸ್‌ಐಆರ್ ಅರ್ಜಿಯನ್ನು ದಾಖಲೆಗಳನ್ನುಪರಿಶೀಲಿಸಿ ಭರ್ತಿ ಮಾಡುವುದುಕಡ್ಡಾಯ ಎಂದು ಸಲಹೆ ನೀಡಿದರು.

ತಾಲೂಕುಪಂಚಾಯಿತಿ ಸಭಾಂಗಣದಿಂದ ನಗರದಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ ಸಂಬಂಧಿಸಿದಂತೆ ಎಸ್‌ಐಆರ್ ಬಗ್ಗೆಜಾಗೃತಿ ಮೂಡಿಸುವ ವಿವಿಧಘೋಷವಾಕ್ಯಗಳಿಂದ ಕೂಡಿದ ಪ್ಲೇಕಾರ್ಡ್‌ಗಳನ್ನು ಪ್ರದರ್ಶಿಸುವಮೂಲಕ ಸಾರ್ವಜನಿಕರಿಗೆ ಜಾಗೃತಿಮೂಡಿಸಲಾಯಿತು
. ಜಾಥದಲ್ಲಿಎನ್‌ಆರ್‌ಎಲ್‌ಎಂ ವಲಯ ಮೇಲ್ವಿಚಾರಕರಾದರೋಸಿ, ಐಇಸಿ ಸಂಯೋಜಕರವಿಕುಮಾರ್, ತಾಲೂಕಿನ34 ಗ್ರಾಮ ಪಂಚಾಯಿತಿಗಳಎಂಬಿಕೆ, ಎಲ್‌ಸಿಆರ್‌ಪಿ,ಕೃಷಿ ಸಖಿ, ಪಶುಸಖಿ ಸೇರಿದಂತೆ 100ಕ್ಕೂಹೆಚ್ಚು ಮಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net