ಸಾಯಿಬಾಬಾ ದೇಗುಲದಲ್ಲಿ ಹುಂಡಿ ಹಣ ಕಳವು

Donation box money stolen from Saibaba temple
Donation box money stolen from Saibaba temple
Published on
ಚಿಂತಾಮಣಿ: ಹಿರಣ್ಯಹಳ್ಳಿಯ ಶಿರಡಿ ಸಾಯಿ ಬಾಬಾ ದೇವಾಸ್ಥಾನದ ಹುಂಡಿ ಹಣ ಕಳುವಾಗಿದೆ.
ಕಾಗತಿ ಗ್ರಾಮದ ಶಿರಡಿ ಸಾಯಿ ಬಾಬಾ ಸೇವಾ ಟ್ರಸ್ಟ್​ಯಿಂದ ನಿರ್ವಹಿಸಲ್ಪಡುತ್ತಿರುವ ದೇವಾಸ್ಥಾನದಲ್ಲಿ ಜು.20ರಂದು ಬೆಳಗ್ಗೆ ಪೂಜಾರಿಗಳು ಮತ್ತು ದೇಗುಲದ ಉಸ್ತುವಾರಿ ದಿಲೀಪ್​ ಕುಮಾರ್​ ಬಂದು ನೋಡಿದಾಗ ಹುಂಡಿ ನಾಪತ್ತೆಯಾಗಿರುವುದು ಗೊತ್ತಾಗಿದೆ. ಹಣ ದೋಚಿ ದೇವಸ್ಥಾನದ ಹಿಂಭಾಗದಲ್ಲಿ ಹುಂಡಿ ಎಸೆದು ಹೋಗಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net