ಪಟ್ಟಣದ ತೀನಂಶ್ರೀ ಭವನದಲ್ಲಿ ಹೇಮಾವತಿ ನಾಲಾ ಕಾಮಗಾರಿಯ ಭೂಸ್ವಾಧಿನಕ್ಕೆ ಒಳಪಟ್ಟ ರೈತರಿಗೆ ಅವಾರ್ಡ್ ನೋಟಿಸ್ ನೀಡಿ ಮಾತನಾಡಿ, 2011ರಿಂದ ವಿವಿಧ ಸಂಟನೆಗಳ ಹೋರಾಟದಿಂದಾಗಿ ಮಂಜೂರಾದ ಹೇಮಾವತಿ ನಾಲಾ ಕಾಮಗಾರಿಯು ತಾಲೂಕಿನ ಒಂದು ಭಾಗದಲ್ಲಿ ಮುಗಿದಿದೆ. ಇನ್ನೊಂದು ಭಾಗದಲ್ಲಿ ಭೂಸ್ವಾಧಿನ ಪ್ರಕ್ರಿಯೆಯಾಗದೆ ಸಮಸ್ಯೆಯಾಗಿತ್ತು. ಈಗ ದಬ್ಬೇಟ್ಟ ಭಾಗದ ರೈತರ ಭೂಮಿ ಈ ಯೋಜನೆಗೆ ಸೇರ್ಪಡೆಯಾಗಿದ್ದು, ಇಲ್ಲಿ ಭೂ ಸ್ವಾಧಿನಪಡಿಸಿಕೊಂಡ ರೈತರಿಗೆ ಸುಮಾರು 4 ಕೋಟಿ ರೂ. ಪರಿಹಾರ ನೀಡಲಾಗುತ್ತದೆ. ಬಾಕಿ ಉಳಿದ ರೈತರು ಸರಿಯಾದ ದಾಖಲೆ ನೀಡಿ ಭೂ ಪರಿಹಾರದ ಹಣ ಪಡೆಯಬಹುದು ಎಂದರು.