ವೈದ್ಯರೂ ಆರೋಗ್ಯ ಕಾಪಾಡಿಕೊಳ್ಳಲಿ

ಮಹಾರಾಷ್ಟ್ರದ ವೆಂಗುರ್ಲಾದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಡಾ.ಚಂದ್ರಶೇಖರ ಹಳಿಂಗಳೆ, ಡಾ.ರಾಜೇಶ್ವರ ಉಬಾಳೆ, ಡಾ.ಸಂಜೀವ ಲಿಂಗವತ, ಡಾ.ಸುರೇಖಾ ಕಾಳೆ, ಡಾ.ವಾಮನ ಕಶಾಳಿಕರ, ಡಾ.ಜ್ಞಾನೇಶ್ವರ ಶಿವಚರಣ ಇತರರಿದ್ದರು.
ಮಹಾರಾಷ್ಟ್ರದ ವೆಂಗುರ್ಲಾದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಡಾ.ಚಂದ್ರಶೇಖರ ಹಳಿಂಗಳೆ, ಡಾ.ರಾಜೇಶ್ವರ ಉಬಾಳೆ, ಡಾ.ಸಂಜೀವ ಲಿಂಗವತ, ಡಾ.ಸುರೇಖಾ ಕಾಳೆ, ಡಾ.ವಾಮನ ಕಶಾಳಿಕರ, ಡಾ.ಜ್ಞಾನೇಶ್ವರ ಶಿವಚರಣ ಇತರರಿದ್ದರು.
Published on
ಕಾಗವಾಡ: ವೈದ್ಯಕಿಯ ೇತ್ರದಲ್ಲಿ ಹೆಚ್ಚುತ್ತಿರುವ ಒತ್ತಡ ನಿಭಾಯಿಸಲು, ವೈದ್ಯರು ತಮ್ಮ ಮಾನಸಿಕ ಆರೋಗ್ಯ ಕಾಳಜಿ ವಹಿಸುವುದು ಬಹಳ ಮುಖ್ಯ. ಮಾನಸಿಕವಾಗಿ ಸಮರ್ಥ ಮತ್ತು ಸದೃಢ ವೈದ್ಯರು ರೋಗಿಗಳಿಗೆ ಗುಣಮಟ್ಟ ಆರೋಗ್ಯ ಸೇವೆ ಒದಗಿಸಲು ಸಾಧ್ಯ ಎಂದು ಮಿರಜ್​ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ಮನೋವೈದ್ಯ ಡಾ.ಚಂದ್ರಶೇಖರ ಹಳಿಂಗಳೆ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದ ವೆಂಗುರ್ಲಾದಲ್ಲಿ ವೈದ್ಯರಿಗಾಗಿ ಈಚೆಗೆ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಕುರಿತು ಶಿಬಿರದಲ್ಲಿ ಮಾತನಾಡಿ, ರೋಗಿಗಳ 24 ಗಂಟೆಗಳ ಸೇವೆಗೆ ಲಭ್ಯ, ತುರ್ತು ಪರಿಸ್ಥಿತಿಯಲ್ಲಿ ವೈದ್ಯರಲ್ಲಿ ಮಾನಸಿಕ ಆಯಾಸ ಮತ್ತು ಒತ್ತಡ ಉಂಟುಮಾಡುತ್ತಿದೆ. ಇದನ್ನು ಪರಿಹರಿಸಲು ವೈದ್ಯರು ನಿಯಮಿತ ವ್ಯಾಯಾಮ, ಯೋಗ, ಧ್ಯಾನ ಅವಶ್ಯ ಎಂದರು. ವೆಂಗುರ್ಲಾ ಮೆಡಿಕಲ್​ ಅಸೋಸಿಯೇಷನ್​ ಅಧ್ಯ ಡಾ.ರಾಜೇಶ್ವರ ಉಬಾಳೆ, ಕಾರ್ಯದರ್ಶಿ ಡಾ.ಸಂಜೀವ ಲಿಂಗವತ, ಡಾಕ್ಟರ್ಸ್​ ್ರೆಟರ್ನಿಟಿ ಕ್ಲಬ್​ನ ಅಧ್ಯೆ ಡಾ.ಸುರೇಖಾ ಕಾಳೆ, ಡಾ.ವಾಮನ ಕಶಾಳಿಕರ, ಡಾ.ಜ್ಞಾನೇಶ್ವರ ಶಿವಚರಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net