ಆರಂಭಿಕ ಹಂತದಲ್ಲಿ ರೋಗ ನಿರ್ಣಯ ಮಾಡಿದರೆ ಚಿಕಿತ್ಸೆ ಸುಲಭವಾಗಲಿದ್ದು, ಹಾನಿ ಕಡಿಮೆ ಮಾಡಬಹುದು. ಸಾಮಾನ್ಯ ಸಮಸ್ಯೆಗೆ ಔಷಧ, ವ್ಯಾಯಾಮ, ಕ್ಯಾಲ್ಶಿಯಂ, ನೋವು ನಿವಾರಕ ಮಾತ್ರೆ, ಫಿಜಿಯೋಥೆರಪಿ ಮತ್ತು ಇಂಜೆಕ್ಷನ್ಗಳನ್ನು ನೀಡಲಾಗುತ್ತದೆ. ಇದರಿಂದ ಸಮಸ್ಯೆಯ ಗಂಭೀರತೆಯನ್ನು ಕೆಲ ಸಮಯ ಮುಂದೂಡಬಹುದಾಗಿದೆ. ಆದರೆ ಶಸ್ತ್ರಚಿಕಿತ್ಸೆ ಅಂತಿಮ ಪರಿಹಾರ. ಸಮಸ್ಯೆ ಕಡಿಮೆ ಇದ್ದಾಗ ಶಸ್ತ್ರಚಿಕಿತ್ಸೆ ಇಲ್ಲದೆಯೇ ಸಂಧಿವಾತ ಕಾರ್ಟಿಲೆಜ್ ಬಲಪಡಿಸ ಬಹುದಾದ ಪೌಷ್ಟಿಕಾಂಶಭರಿತ ಒಳಕೀಲಿನ ಚುಚ್ಚುಮದ್ದು ಸ್ಟೆರಾಯ್್ಡಳು, ಸೋಡಿಯಂ ಹ್ಯಾಲುರೋನೇಟ್, ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ (ಪಿಆರ್ಪಿ) ನೀಡಿ ನೋವು ನಿಯಂತ್ರಿಸಬಹುದಾಗಿದೆ.