ವೈದ್ಯರು ರೋಗಿಗಳ ಜೀವ ರಕ್ಷಿಸುವ ದೇವರು

ಯಾದಗಿರಿ ಆರೋಗ್ಯ ಇಲಾಖೆಯಲ್ಲಿ ಬುಧವಾರ ಹಮ್ಮಿಕೊಂಡ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಎಚ್​ಒ ಡಾ.ಮಹೇಶ ಬಿರಾದಾರ, ಡಾ.ಸಾಜಿದ್​, ಡಾ.ಸಂಜೀವಕುಮಾರ, ಡಾ. ಜ್ಯೋತಿ ಕಟ್ಟಿಮನಿ, ಡಾ.ಹಣಮಂತರೆಡ್ಡಿ ಇತರರಿದ್ದರು.
ಯಾದಗಿರಿ ಆರೋಗ್ಯ ಇಲಾಖೆಯಲ್ಲಿ ಬುಧವಾರ ಹಮ್ಮಿಕೊಂಡ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಎಚ್​ಒ ಡಾ.ಮಹೇಶ ಬಿರಾದಾರ, ಡಾ.ಸಾಜಿದ್​, ಡಾ.ಸಂಜೀವಕುಮಾರ, ಡಾ. ಜ್ಯೋತಿ ಕಟ್ಟಿಮನಿ, ಡಾ.ಹಣಮಂತರೆಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಎಚ್​ಒ ಡಾ.ಮಹೇಶ ಬಿರಾದಾರ ಹೇಳಿಕೆ
  • ರಾಷ್ಟ್ರೀಯ ವೈದ್ಯರ ದಿನಾಚರಣೆ
ಯಾದಗಿರಿ: ಸಮಾಜದಲ್ಲಿ ವೈದ್ಯರ ಪಾತ್ರ ಮತ್ತು ರೋಗಿಗಳ ಜೀವ ರಸುವಲ್ಲಿ ಅವರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದಾರ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ ನಿಮಿತ್ತ ವೈದ್ಯಕಿಯ ಕ್ಷೇತ್ರದ ಡಾ. ಬಿ.ಸಿ.ರಾಯ್​ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ವೈದ್ಯರ ವೃತ್ತಿ ಅತ್ಯಂತ ಪವಿತ್ರವಾದದ್ದು, ರೋಗಿಗಳ ಜೀವ ಉಳಿಸಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಮೂಲಕ ಚಿಕಿತ್ಸೆ ನೀಡುವ ವೈದ್ಯರು ಸಮಾಜದ ಪಾಲಿಗೆ ಎರಡನೇ ದೇವರಾಗಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಸಾಜಿದ್​ ಮಾತನಾಡಿ, ವೈದ್ಯಕಿಯ ವೃತ್ತಿಯು ರೋಗಿಗಳಿಗೆ ಮರುಜೀವ ನೀಡುವುದರ ಜತೆಗೆ ಅವರಿಗೆ ಆತ್ಮಸ್ಥೆರ್ಯ ತುಂಬುತ್ತದೆ ಎಂದರು. ಜಿಲ್ಲಾ ಯ ರೋಗ ನಿಮೂರ್ಲಾಧಿಕಾರಿ ಡಾ. ಸಂಜೀವಕುಮಾರ್​ ರಾಯಚೂರಕರ್​ ಮಾತನಾಡಿ, ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ಶ್ರಮಿಸುತ್ತಿರುವ ಕಾರ್ಯ ಶ್ಲಾಘಸಿ, ಡಾ.ಬಿ.ಸಿ.ರಾಯ್​ ಅವರ ವೃತ್ತಿ ಜೀವನ ಹಾಗೂ ಆದರ್ಶಗಳನ್ನು ನಾವು ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯರೋಗ ನಿಮೂರ್ಲಾಧಿಕಾರಿ ಡಾ. ಜ್ಯೋತಿ ಕಟ್ಟಿಮನಿ, ತಾಲೂಕು ಆರೋಗ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಡಾ. ಸುನಿತಾ ನಿನ್ನೆಕರ್​, ಲಕ್ಷ್ಮೀ ಮುಂಡಾಸ್​, ತುಳಸಿರಾಮ, ಸಾಹೇಬಗೌಡ, ಕಚೇರಿ ಅಧೀಕ ಜ್ಯೋತಿ ಹಪ್ಪಳ, ಮಹಿಪಾಲರೆಡ್ಡಿ, ಮುನಿಯಪ್ಪ, ಹಣಮಂತರಾವ ಕುಲಕರಣಿ, ಪ್ರದಿಪ, ಮಲ್ಲಿನಾಥ ಚಂದ್ರಕಾಂತ, ಅನ್ಸಾರಿ, ಹಣಮಂತ, ಫಾರ್ಮಸಿ ಅಧಿಕಾರಿ ಮಲ್ಲಿಕಾರ್ಜುನ, ಅಂಬಾದಾಸ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net