ಅಮೆಜಾನ್ ದೀಪಾವಳಿ ಸೇಲ್ ಆರಂಭ

ಶೇ.80ರವರೆಗೆ ರಿಯಾಯಿತಿ, ಪ್ರೈಮ್ ಸದಸ್ಯರಿಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್
Diwali offers begin on Amazon
ಅಮೆಜಾನ್ ನಲ್ಲಿ ದೀಪಾವಳಿ ಆಫರ್ ಆರಂಭreporting
Published on: 

ಬೆಂಗಳೂರು : ದೀಪಾವಳಿ ಹಬ್ಬದ ಅಂಗವಾಗಿ ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ದೀಪಾವಳಿ ಆವೃತ್ತಿಯನ್ನು ಬುಧವಾರ (ಅ.28)ರಿಂದ ಆರಂಭಿಸಿದ್ದು, ಮೊಬೈಲ್, ಎಲೆಕ್ಟ್ರಾನಿಕ್ಸ್ ಹಾಗೂ ವಿವಿಧ ಗೃಹೋಪಯೋಗಿ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಇಎಂಐ ವಹಿವಾಟುಗಳಿಗೆ ಶೇ.10 ತ್ವರಿತ ರಿಯಾಯಿತಿ ಲಭ್ಯವಿದ್ದು, ಪ್ರೈಮ್ ಸದಸ್ಯರು ಆಯ್ದ ಲಕ್ಷಾಂತರ ಉತ್ಪನ್ನಗಳ ಖರೀದಿಗೆ ಹೆಚ್ಚುವರಿಯಾಗಿ 250 ರೂ. ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ಮೊಬೈಲ್ ಮತ್ತು ಸಂಬಂಧಪಟ್ಟ ಪರಿಕರಗಳ ಮೇಲೆ ಶೇ.40ರವರೆಗೆ, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಹಾಗೂ ಸೌಂದರ್ಯ ಉತ್ಪನ್ನಗಳ ಮೇಲೆ ಶೇ.80ರವರೆಗೆ ರಿಯಾಯಿತಿ ನೀಡಲಾಗಿದೆ. ಗೃಹಬಳಕೆಯ ಒಂದು ಲಕ್ಷಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಶೇ.50ರಷ್ಟು ರಿಯಾಯಿತಿ ಘೋಷಿಸಲಾಗಿದೆ.

ಅಮೆಜಾನ್ ಪೇ ಮೂಲಕ ಹೆಚ್ಚುವರಿ ಉಳಿತಾಯ

ಅಮೆಜಾನ್ ಪೇ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಹೆಚ್ಚುವರಿ ಶೇ.5 ಕ್ಯಾಶ್‌ಬ್ಯಾಕ್ ಸೌಲಭ್ಯವಿದೆ. ಅಮೆಜಾನ್ ಪೇ ಲೇಟರ್ ಮೂಲಕ ಖರೀದಿಸುವವರಿಗೆ ಶೇ.10 ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಅರ್ಹ ಗ್ರಾಹಕರು 3.5 ಲಕ್ಷ ರೂ.ವರೆಗೆ ಶಾಪಿಂಗ್ ಸಾಲ ಪಡೆಯುವ ಅವಕಾಶವಿದ್ದು, 24 ತಿಂಗಳವರೆಗಿನ ಮರುಪಾವತಿ ಅವಧಿ ಆಯ್ಕೆಯೂ ಇದೆ.

ಪ್ರವಾಸಿಗರಿಗೆ ವಿಮಾನ ಟಿಕೆಟ್‌ಗಳ ಮೇಲೆ ಶೇ.22ರವರೆಗೆ, ಹೋಟೆಲ್ ಬುಕಿಂಗ್‌ಗಳ ಮೇಲೆ ಶೇ.75ರವರೆಗೆ ಮತ್ತು ಬಸ್ ಟಿಕೆಟ್‌ಗಳ ಮೇಲೆ ಶೇ.17ರವರೆಗೆ ರಿಯಾಯಿತಿ ಲಭ್ಯವಿದೆ. ಅರ್ಹ ಬಿಲ್ ಪಾವತಿ, ರೀಚಾರ್ಜ್ ಹಾಗೂ ಡಿಜಿಟಲ್ ಚಿನ್ನದ ಖರೀದಿಗಳಿಗೂ ಬಹುಮಾನಗಳ ಕೊಡುಗೆ ಪ್ರಕಟಿಸಲಾಗಿದೆ.

ವೇಗದ ವಿತರಣೆಗೆ ಆದ್ಯತೆ

ಅಮೆಜಾನ್ ನೌ ಸೇವೆಯ ಮೂಲಕ ಭಾರತದ 120ಕ್ಕೂ ಹೆಚ್ಚು ನಗರಗಳಲ್ಲಿ ದಿನಸಿ, ದೈನಂದಿನ ಅಗತ್ಯ ವಸ್ತುಗಳು ಹಾಗೂ ಉಡುಗೊರೆಗಳನ್ನು ಕೆಲವೇ ನಿಮಿಷಗಳಲ್ಲಿ ವಿತರಿಸುವ ವ್ಯವಸ್ಥೆ ಇದೆ. 10 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳಿಗೆ ಅದೇ ದಿನ ಹಾಗೂ 40 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳಿಗೆ ಮರುದಿನದ ವಿತರಣೆ ಸೌಲಭ್ಯ ಲಭ್ಯವಿದೆ.

ಗ್ರಾಹಕರಿಗೆ ಸೂಕ್ತ ಉತ್ಪನ್ನಗಳನ್ನು ಹುಡುಕಲು ರುಫಸ್ ಎಐ ಸಹಾಯಕ ಮತ್ತು ಲೆನ್ಸ್ ಎಐ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಫೋಟೊ ಮೂಲಕ ಉತ್ಪನ್ನಗಳನ್ನು ಪತ್ತೆಹಚ್ಚುವುದು, ಹಿಂದಿನ 30ರಿಂದ 90 ದಿನಗಳ ಬೆಲೆ ಇತಿಹಾಸ ಪರಿಶೀಲಿಸುವುದು ಹಾಗೂ ಬೆಲೆ ಇಳಿಕೆಯಾದಾಗ ಎಚ್ಚರಿಕೆ ಪಡೆಯುವ ಸೌಲಭ್ಯಗಳಿವೆ.

ರಿಯಾಯಿತಿ, ಕ್ಯಾಶ್‌ಬ್ಯಾಕ್, ವೇಗದ ವಿತರಣೆ ಮತ್ತು ಎಐ ಆಧಾರಿತ ಸೇವೆಗಳ ಮೂಲಕ ಹಬ್ಬದ ಖರೀದಿಯನ್ನು ಸುಲಭಗೊಳಿಸುವುದು ಈ ಮಾರಾಟ ಮೇಳದ ಉದ್ದೇಶವಾಗಿದೆ.