ಬಿಜೆಪಿ ಬಲಪಡಿಸಲು ಜಿಲ್ಲಾ ಪ್ರವಾಸ: ಯಡಿಯೂರಪ್ಪ

yadiyurappa,
yadiyurappa,
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿ ವಾರ ಒಂದೊಂದು ಜಿಲ್ಲೆಗೆ ಪ್ರವಾಸ
  • ಶೃಂಗೇರಿಯ ಜನರಿಗೆ ಅಭಿನಂದನೆ ಸಲ್ಲಿಸುವೆ.
ಬೆಂಗಳೂರು:
ಬಿಜೆಪಿ ಪಕ್ಷ ಬಲಪಡಿಸಲು ಜಿಲ್ಲಾ ಪ್ರವಾಸ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವಾರ ಒಂದೊಂದು ಜಿಲ್ಲೆಗೆ ಪ್ರವಾಸ ಮಾಡಿ ಪಕ್ಷ ಬಲಪಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು.
ಪಕ್ಷಾತೀತವಾಗಿ ನೂರಾರು ಸ್ವಾಮೀಜಿಗಳು, ಅನೇಕ ಹಿರಿಯರನ್ನು ಕರೆದು ಮೇ 9ರಂದು ಚಿತ್ರದುರ್ಗದಲ್ಲಿ ಅಭಿಮಾನೋತ್ಸವ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂದು ಬರುತ್ತಿರುವುದು ವಿಶೇಷ ಎಂದು ಹೇಳಿದರು.
ಕಾರ್ಯಕರ್ತರು ತಮ್ಮ ಮೇಲೆ ಅಭಿಮಾನದೊಂದಿಗೆ ಶ್ರಮಪಟ್ಟು ಈ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದು ಅಭೂತಪೂರ್ವ ಕಾರ್ಯಕ್ರಮವಾಗಲಿದೆ ಎಂದರು.
ಶೃಂಗೇರಿಯ ಜನರಿಗೆ ಅಭಿನಂದನೆ ಸಲ್ಲಿಸುವೆ. ಮುಂಬರುವಂಥ ದಿನಗಳಲ್ಲಿ ಜೀವರಾಜ್ ಇನ್ನೂ ದೊಡ್ಡ ಶಕ್ತಿಯುತವಾಗಿ ಬೆಳೆಯಲಿ ಎಂದು ಅವರು ಆಶಿಸಿದರು

*ಪ್ರತಿ ವಾರ ಒಂದೊಂದು ಜಿಲ್ಲೆಗೆ ಪ್ರವಾಸ ಮಾಡಿ ಪಕ್ಷ ಬಲಪಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು

- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net