

33 ಪ್ರಶ್ನೆಗಳಲ್ಲಿ ಮಾಹಿತಿ
ಜನಗಣತಿಯು ಸಂವಿಧಾನಾತ್ಮಕ ಮತ್ತು ಶಾಸನಬದ್ಧ ಚಟುವಟಿಕೆಯಾಗಿದ್ದು, ಏ.16 ರಿಂದ ಮೇ 15 ರವರೆಗೆ ಮನೆ ಮನೆಗೆ ಭೇಟಿ ನೀಡುವ ಜನಗಣತಿ ಕಾಯ್ದೆ 1948 ಸೆಕ್ಷನ್ 8 ರಂತೆ ಮತ್ತು ಕರ್ನಾಟಕ ಸರ್ಕಾರದ ಅಧಿಸೂಚನೆ ಆರ್ಡಿ. 119.ಟಿಎನ್ಆರ್.2026, ದಿನಾಂಕ 6&3&2026 ರ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ವಸತಿ ಗುಣಮಟ್ಟ, ಸೌಕರ್ಯಗಳು (ನೀರು, ವಿದ್ಯುತ್ ಮತ್ತು ಶೌಚಗೃಹ, ಸ್ವತ್ತುಗಳು ಸೇರಿ ಇತರ ವಿಚಾರಗಳಿಗೆ ಸಂಬಂಧಿಸಿದಂತೆ 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ.ಜನಗಣತಿಯ ಮೊದಲನೇ ಹಂತವು ಪ್ರತಿಯೊಂದು ಕುಟುಂಬ ರಚನೆ ಮತ್ತು ಮ್ಯಾಪ್ಅನ್ನು ಒಳಗೊಂಡಿದ್ದು, 2027ನೇ ಸಾಲಿನಲ್ಲಿ ಫೆಬ್ರವರಿಯಿಂದ 2ನೇ ಹಂತದ ಜನಸಂಖ್ಯಾ ಗಣತಿ ಪ್ರಕ್ರಿಯೆ ನಡೆಯಲಿದೆ.
ಸ್ವ ಜನಗಣತಿ
ಜನಗಣತಿ ಕಾರ್ಯದ ಮೊದಲನೇ ಹಂತವಾಗಿ ಸ್ವಯಂ ಜನಗಣತಿ ಕಾರ್ಯವು ಏ.1 ರಿಂದ ಏ.15 ರವರೆಗೆ ನಡೆದಿದೆ. ಸ್ವಯಂ ಗಣತಿಯಲ್ಲಿ ಸಾರ್ವಜನಿಕರು ನೇರವಾಗಿ ಜನಗಣತಿ ನಿರ್ದೇಶನಾಲಯದ ಸ್ವಗಣತಿ ಪೋರ್ಟಲ್ ಮೂಲಕ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ ಆಗಿ, ಅಗತ್ಯ ಮಾಹಿತಿ ನಮೂದಿಸಿದ್ದಾರೆ. ಇದಕ್ಕೆ ಸೃಜನೆಯ ಐಡಿ ಪಡೆದುಕೊಂಡಿದ್ದಾರೆ. ಇನ್ನು ಗಣತಿದಾರರು ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗೆ ಏ.16ರಿಂದ ಮೇ 15 ರವರೆಗೆ ಮನೆ ಮನೆಗೆ ಭೇಟಿ ನೀಡಲಿದ್ದಾರೆ.
ಜನಗಣತಿಯ ಮಾಹಿತಿಗಳು ಯೋಜನೆ, ಸಮಾಜ ಕಲ್ಯಾಣ ಯೋಜನೆಗಳು, ಸಂಪನ್ಮೂಲ ಹಂಚಿಕೆ ಮತ್ತು ಕ್ಷೇತ್ರಗಳ ಗಡಿ ರ್ನಿಣಯಕ್ಕೆ ಅಡಿಪಾಯವನ್ನು ರೂಪಿಸುತ್ತವೆ.ಇದಕ್ಕೆ ಜಿಲ್ಲೆಯ ಜನರು ಮಾಹಿತಿ ನೀಡಬೇಕು. ಸ್ವಯಂ ಗಣತಿ ಪೂರ್ಣಗೊಂಡಿರುವ ಸಾರ್ವಜನಿಕರು ಗಣತಿ ಗುರುತಿನ ಸಂಖ್ಯೆಯನ್ನು ಕಡ್ಡಾಯವಾಗಿ ಗಣತಿದಾರರಿಗೆ ನೀಡಿ, ಕಾರ್ಯ ಯಶಸ್ವಿಗೊಳಿಸಬೇಕು.
> ಜಿ.ಪ್ರಭು, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ