ಅರೇಹಳ್ಳಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಗೆ ತೃಪ್ತಿ ಗಿರೀಗೌಡ ಲೋಟ-ತಟ್ಟೆ ವಿತರಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅರೇಹಳ್ಳಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ
ಮಾಜಿ ಶಾಸಕ ದಿ.ವೈ.ಎನ್.ರುದ್ರೇಶ್‌ಗೌಡ ಅವರ ಪುತ್ರಿ ಅಂಶೃತಾ ರುದ್ರೇಶಗೌಡ ಹಾಗೂ ಕುಟುಂಬ
ಬೇಲೂರು:
ತಾಲೂಕಿನ ಅರೇಹಳ್ಳಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳಿಗೆ ಮಾಜಿ ಶಾಸಕ ದಿ.ವೈ.ಎನ್.ರುದ್ರೇಶ್‌ಗೌಡ ಅವರ ಪುತ್ರಿ ಅಂಶೃತಾ ರುದ್ರೇಶಗೌಡ ಹಾಗೂ ಕುಟುಂಬ ಸದಸ್ಯರ ಸಹಕಾರದಿಂದ 550 ನೀರಿನ ಲೋಟ, ಊಟದ ತಟ್ಟೆ ಉಚಿತವಾಗಿ ವಿತರಿಸಲಾಯಿತು.
ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಲು ಪ್ರತಿದಿನ ಮನೆಯಿಂದ ತಟ್ಟೆ-ಲೋಟ ತರಬೇಕಿತ್ತು. ಈ ಕೊಡುಗೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದುಪ್ರೌಢಶಾಲಾ ವಿಭಾಗದ ಪ್ರಾಂಶುಪಾಲ ಶಿವಕುಮಾರ್.ಎಸ್.ಎನ್ ಹೇಳಿದರು.
ಗಿರೀಗೌಡ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯದ ರೂವಾರಿಗಳು, ಸಿಕ್ಕಿರುವ ಪ್ರತಿಯೊಂದು ಅವಕಾಶ ಬಳಸಿಕೊಂಡು ಸಾಧಕರಾಗಬೇಕು ಎಂದು ಕಿವಿಮಾತು ಹೇಳಿದರು.
ಮುಖಂಡ ಸೋಮನಾಥ್, ಪಿಡಿಒ ಚಂದ್ರಯ್ಯ, ಎಸ್‌ಡಿಎಂಸಿ ಉಪಾಧ್ಯಕ್ಷ ಜನಾರ್ದನ್, ಸದಸ್ಯ ರಾಜೇಶ್ ಇತರರಿದ್ದರು.