ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆ

ಪಾಂಡವಪುರದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಿಸಿದರು.
ಪಾಂಡವಪುರದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸುಧಾರಿತ ಉಪಕರಣ ಯೋಜನೆ, ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ
  • 2025-26ನೇ ಸಾಲಿನ ವೃತ್ತಿಪರ ಗ್ರಾಮೀಣ ಕುಶಲಕರ್ಮಿಗಳಿಗೆ
ಪಾಂಡವಪುರ: ಸುಧಾರಿತ ಉಪಕರಣ ಯೋಜನೆ, ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ 2025-26ನೇ ಸಾಲಿನ ವೃತ್ತಿಪರ ಗ್ರಾಮೀಣ ಕುಶಲಕರ್ಮಿಗಳಿಗೆ ಖಾದಿ ಮತ್ತು ಗ್ರಾಮಾಂತರ ಕೈಗಾರಿಕೆ ಇಲಾಖೆ ಹಾಗೂ ಜಿಪಂ ವತಿಯಿಂದ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಮರಗೆಲಸ, ಗಾರೆಕೆಲಸ, ಕ್ಷೌರಿಕ ಹಾಗೂ ಧೋಬಿಗಳಿಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಇತ್ತೀಚೆಗೆ ಉಪಕರಣ ವಿತರಿಸಿದರು.
ಎಲ್ಲ ಅರ್ಹ ಫಲಾನುಭವಿಗಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಲಾಗಿತ್ತು. ಆಯ್ಕೆಯಾದ ಫಲಾನುಭವಿಗಳ ಪೈಕಿ ಪರಿಶಿಷ್ಟ ಜಾತಿ 16, ಪರಿಶಿಷ್ಟ ಪಂಗಡ 6, ಅಂಗವಿಕಲರು 03, ಅಲ್ಪಸಂಖ್ಯಾತರು 3, ಸಾಮಾನ್ಯ ವರ್ಗ 38 ಸೇರಿದಂತೆ ಒಟ್ಟು 66 ಫಲಾನುಭವಿಗಳಿಗೆ ವಿದ್ಯುತ್‌ಚಾಲಿತ ಹೊಲಿಗೆ ಯಂತ್ರಗಳನ್ನು ಶಾಸಕರು ವಿತರಿಸಿದರು.
ಇನ್ನು ಮರಗೆಲಸ 4, ಗಾರೆ ಕೆಲಸ 4, ಕ್ಷೌರಿಕ 2 ಹಾಗೂ ಧೋಬಿ 2 ಸೇರಿದಂತೆ ಒಟ್ಟು 12 ಫಲಾನುಭವಿಗಳಿಗೆ ಪವರ್ ಟೂಲ್ಸ್ ಉಪಕರಣಗಳನ್ನು ವಿತರಿಸಲಾಯಿತು. ತಹಸೀಲ್ದಾರ್ ಜಿ.ಆದರ್ಶ, ಉಪ ತಹಸೀಲ್ದಾರ್ ಲಕ್ಷ್ಮೀಕಾಂತ್, ತಾಪಂ ಇಒ ಎಂ.ಎಸ್.ವೀಣಾ, ಖಾದಿ ಮತ್ತು ಗ್ರಾಮಾಂತರ ಕೈಗಾರಿಕೆ ಇಲಾಖೆಯ ಸಿಬ್ಬಂದಿ ಶಿವಣ್ಣ, ಗುಣವತಿ, ಆದರ್ಶ, ಪಿ.ಗಿರಿಸ್ವಾಮಿ, ಕೃಷ್ಣಮೂರ್ತಿ, ರಾಜಶೇಖರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net