ಮಹಿಳೆಯರಿಗೆ ಹಸು ವಿತರಣೆ Distribution

ಮಾಗಡಿಯಲ್ಲಿ ರೋಟರಿ ಮಾಗಡಿ ಸೆಂಟ್ರಲ್ ವತಿಯಿಂದ ಹಮ್ಮಿDistributionಕೊಂಡಿದ್ದ ಬಡ ಮಹಿಳೆಯರಿಗೆ ಹಸುಗಳನ್ನು  ಮಾಗಡಿ ಸೆಂಟ್ರಲ್ ಅಧ್ಯಕ್ಷ ಎಚ್.ಎಸ್. ಜಯಶಂಕರ್ ವಿತರಿಸಿದರು. ಮಾಜಿ ಅಧ್ಯಕ್ಷ ಡಾ. ಮಂಜುನಾಥ ಬೆಟಗೇರಿ, ರೋಟರಿಯನ್ ಎ.ಎಸ್.ಶ್ರೀಕಾಂತ್, ಮಾಗಡಿ ಸೆಂಟ್ರಲ್‌ನ ಯೋಜನಾ ಮುಖ್ಯಸ್ಥ ಎಲ್.ಪ್ರಭಾಕರ್ ಇತರರು ಇದ್ದರು.
ಮಾಗಡಿಯಲ್ಲಿ ರೋಟರಿ ಮಾಗಡಿ ಸೆಂಟ್ರಲ್ ವತಿಯಿಂದ ಹಮ್ಮಿDistributionಕೊಂಡಿದ್ದ ಬಡ ಮಹಿಳೆಯರಿಗೆ ಹಸುಗಳನ್ನು ಮಾಗಡಿ ಸೆಂಟ್ರಲ್ ಅಧ್ಯಕ್ಷ ಎಚ್.ಎಸ್. ಜಯಶಂಕರ್ ವಿತರಿಸಿದರು. ಮಾಜಿ ಅಧ್ಯಕ್ಷ ಡಾ. ಮಂಜುನಾಥ ಬೆಟಗೇರಿ, ರೋಟರಿಯನ್ ಎ.ಎಸ್.ಶ್ರೀಕಾಂತ್, ಮಾಗಡಿ ಸೆಂಟ್ರಲ್‌ನ ಯೋಜನಾ ಮುಖ್ಯಸ್ಥ ಎಲ್.ಪ್ರಭಾಕರ್ ಇತರರು ಇದ್ದರು.
Published on
 ಮಾಗಡಿ:300 ಕುಟುಂಬಗಳಿಗೆ ಸುಸ್ಥಿರ ಜೀವನೋಪಾಯ ಕಲ್ಪಿಸುವ ಬೃಹತ್ ಗುರಿ ಮಾಗಡಿ ರೋಟರಿಯದ್ದಾಗಿದೆ ಎಂದು  ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಎಚ್.ಎಸ್. ಜಯಶಂಕರ್ ತಿಳಿಸಿದರು. Distribution
ಪಟ್ಟಣದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ರೋಟರಿ ಮಾಗಡಿ ಸೆಂಟ್ರಲ್ ವತಿಯಿಂದ ಹಮ್ಮಿಕೊಂಡಿದ್ದ 9 ಬಡ ಮಹಿಳೆಯರಿಗೆ ಹಸುಗಳನ್ನು ವಿತರಿಸಿ  ಮಾತನಾಡಿದ ಅವರು, ಮಹಿಳಾ ಸಬಲೀಕರಣ ಮತ್ತು ಸುಸ್ಥಿರ ಗ್ರಾಮೀಣ ಅಭಿವೃದ್ಧಿಯ ಮಹತ್ವಾಕಾಂಕ್ಷೆಯೊಂದಿಗೆ, ಬಡ ಗ್ರಾಮೀಣ ವಿಧವಾ ಮಹಿಳೆಯರಿಗೆ ಉಚಿತವಾಗಿ ಹಸುಗಳನ್ನು ವಿತರಿಸಲಾಗುತ್ತಿದೆ. ಈ ಮೂಲಕ ಬಡ ಕುಟುಂಬಗಳಿಗೆ ಸ್ವಾವಲಂಬಿ ಜೀವನೋಪಾಯ ಕಲ್ಪಿಸಿ, ಹೈನುಗಾರಿಕೆ ಮೂಲಕ ನಿರಂತರ ಆದಾಯ ತಂದುಕೊಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಒಟ್ಟು 300 ಅರ್ಹ ಫಲಾನುಭವಿಗಳಿಗೆ ಹಸು ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ ಕಳೆದ ಸಾಲಿನಲ್ಲಿ 230 ಹಸುಗಳನ್ನು ನೀಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ಉಳಿದ 70 ಹಸುಗಳನ್ನು ಹಂತ ಹಂತವಾಗಿ ನೀಡಲಾಗುತ್ತಿದ್ದು, ಮೊದಲ ಹಂತದಲ್ಲಿ 9 ಅರ್ಹ ಬಡ ವಿಧವಾ ಮಹಿಳೆಯರಿಗೆ ಹಸುಗಳನ್ನು ಹಸ್ತಾಂತರಿಸಲಾಯಿತು ಎಂದರು.
ಮಾಗಡಿ ರೋಟರಿ ಕಾರ್ಯದರ್ಶಿ ಎಂ.ಎನ್. ಪ್ರಸಾದ್ ಮಾತನಾಡಿ, ಹಸುಗಳ ವಿತರಣೆ ಕೇವಲ ದಾನ ಕಾರ್ಯಕ್ರಮವಲ್ಲ. ಇದು ಗ್ರಾಮೀಣ ವಿಧವಾ ಮಹಿಳೆಯರು ಸ್ವಾಭಿಮಾನದಿಂದ ಬದುಕಲು ಮತ್ತು ದೀರ್ಘಕಾಲೀನ ಆರ್ಥಿಕ ಭದ್ರತೆ ಪಡೆಯಲು ರೂಪಿಸಲಾದ ಸುಸ್ಥಿರ ಯೋಜನೆ ಎಂದರು.
ರೋಟೇರಿಯನ್ ಶ್ರೀಧರ್ ಬಿ.ಆರ್. ಹಸುಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. 
ಸಮುದಾಯ ಸೇವಾ ನಿರ್ದೇಶಕ ಎಚ್.ವಿನೋದ್, ಕಾಮಧೇನು ಯೋಜನಾ ನಿರ್ದೇಶಕ ಆರ್.ಎಂ. ನಾಗಭೂಷಣ್, ಕನ್ನಡ ರಾಜು, ರೇಣುಕಾ, ಆರಾಧ್ಯ, ಸುಲ್ತಾನ್ ಬಾಬು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net