ಮಾ.4ಕ್ಕೆ ಹೊಸಕೋಟೆಯಲ್ಲಿ ಸವಲತ್ತು ವಿತರಣೆ / HOSAKOTE

ಹೊಸಕೋಟೆ ಚನ್ನ ಬೈರೇಗೌಡ ಕ್ರೀಡಾಂಗಣದಲ್ಲಿ ಮಾ.4 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಸವಲತ್ತು ವಿತರಣೆ ಕಾರ್ಯಕ್ರಮದ ರೂಪುರೇಷೆಗಳನ್ನು ಶಾಸಕ ಶರತ್​ ಬಚ್ಚೇಗೌಡ, ಜಿಲ್ಲಾಧಿಕಾರಿ ಬಸವರಾಜು ಪರಿಶೀಲಿಸಿದರು.  ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಹೊಸಕೋಟೆ ಚನ್ನ ಬೈರೇಗೌಡ ಕ್ರೀಡಾಂಗಣದಲ್ಲಿ ಮಾ.4 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಸವಲತ್ತು ವಿತರಣೆ ಕಾರ್ಯಕ್ರಮದ ರೂಪುರೇಷೆಗಳನ್ನು ಶಾಸಕ ಶರತ್​ ಬಚ್ಚೇಗೌಡ, ಜಿಲ್ಲಾಧಿಕಾರಿ ಬಸವರಾಜು ಪರಿಶೀಲಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Published on
ಹೊಸಕೋಟೆ : ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಮಾ.4 ರಂದು ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.
ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ರೂಪುರೇಷಗಳ ಬಗೆ ಜಿಲ್ಲಾಧಿಕಾರಿ ಬಸವರಾಜು ಹಾಗೂ ಅಧಿಕಾರಿಗಳೊಂದಿಗೆ ಗುರುವಾರ ಸ್ಥಳ ಪರಿಶೀಲಿಸಿ ಮಾತನಾಡಿ, ಜಿಲ್ಲೆಯ ನಾಲ್ಕು ತಾಲೂಕುಗಳ ಗ್ರಾಮಗಳನ್ನು ಪೋಡಿ ಮುಕ್ತ ಮಾಡಬೇಕು ಎಂಬ ಉದ್ದೇಶದಿಂದ ನಮೂನೆ 53 ಅರ್ಜಿಗಳನ್ನು ಸಲ್ಲಿಸಿರುವ ಸುಮಾರು 3.500 ರೈತ ಫಲಾನುಭವಿಗಳಿಗೆ ಆಕಾರ್​ಬಂದ್​ ಸೇರಿದಂತೆ ಭೂಮಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳೊಂದಿಗೆ ಹಕ್ಕು ವರ್ಗಾವಣೆ ಪತ್ರಗಳನ್ನು ನೀಡಲಾಗುವುದು ಎಂದರು.
ಜಿಲ್ಲೆಯಾದ್ಯಂತ ಪೌತಿ ಖಾತೆ ಆಂದೋಲನವನ್ನು ಕೈಗೊಂಡಿದ್ದು, ಸುಮಾರು 10 ಸಾವಿರ ಫಲಾನುಭವಿಗಳಿಗೆ ಪೌತಿ ಖಾತೆ ಪತ್ರಗಳು ಹಾಗೂ ಸಾಮಾಜಿಕ ಭದ್ರತೆ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಗುವುದು. ಜಿಲ್ಲೆಯ ಪ್ರತಿ ತಾಲೂಕಿನಿಂದಲೂ ಕಂದಾಯ ಇಲಾಖೆಯವರು ಅರ್ಹ ಫಲಾನುಭವಿಗಳನ್ನು ಸಾರಿಗೆ ಬಸ್​ಗಳಲ್ಲಿ ಕರೆ ತಂದುಕಾರ್ಯಕ್ರಮದಲ್ಲಿ ಅವರಿಗೆ ದಾಖಲೆ ಪತ್ರಗಳನ್ನು ಕೊಡಿಸಿ, ನಂತರ ಅವರನ್ನು ಸುರತವಾಗಿ ವಾಪಸ್​ ಅವರ ಗ್ರಾಮಗಳಿಗೆ ಇಲಾಖೆ ಅಧಿಕಾರಿಗಳು ತಲುಪಿಸಲಿದ್ದಾರೆ ಎಂದರು.
ಕಾಂಗ್ರೆಸ್​ ಸರ್ಕಾರದ ಮಹತ್ವಕಾಂೆ ಯೋಜನೆ ಇದಾಗಿದ್ದು, ಜನರ ಕೋಟ್ಯಂತರ ರೂ.ಬೆಲೆ ಬಾಳುವ ಆಸ್ತಿ ಹಕ್ಕುಗಳನ್ನು ಪೌತಿ ಖಾತೆ, ಪೋಡಿ ಮುಕ್ತ ಗ್ರಾಮ ಕಾರ್ಯಕ್ರಮದಡಿಯಲ್ಲಿ ನೀಡುವಂತಹ ಕಾರ್ಯವನ್ನು ಮಾಡಲಾಗುತ್ತಿದೆ.10 ಸಾವಿರ ಪೌತಿ ಖಾತೆಯಲ್ಲಿ 5 ಸಾವಿರ ಪೌತಿ ಖಾತೆ ಹೊಸಕೋಟೆ ತಾಲೂಕಿನಲ್ಲಿದ್ದು, ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ ಎಚ್​ ಮುನಿಯಪ್ಪ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ನಾಲ್ಕು ತಾಲೂಕಿನ ಶಾಸಕರು ಭಾಗವಹಿಸಲಿದ್ದಾರೆ ಎಂದರು. ಜಿಲ್ಲಾಧಿಕಾರಿ ಎ.ಬಿ ಬಸವರಾಜು, ತಹಸೀಲ್ದಾರ್​ ಸೋಮಶೇಖರ್​, ನಗರಾಯುಕ್ತ ನೀಲ ಲೋಚನ ಪ್ರಭು, ಡಿವೈಎಸ್​ಪಿ ಮಲ್ಲೇಶ್​, ಬಮುಲ್​ ನಿರ್ದೇಶಕ ಬಿ.ವಿ ಸತೀಶ್​ ಗೌಡ, ಯುವ ಮುಖಂಡ ಬಿ.ಜಿ. ನಾರಾಯಣಗೌಡ, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ.ಎಚ್​.ಎಂ ಸುಬ್ಬರಾಜ್​, ಟಿಎಪಿಎಂಎಸ್​ ಅಧ್ಯಕ್ಷ ಕೋಡಿಹಳ್ಳಿ ಸುರೇಶ್​, ಬಿಇಒ ಪದ್ಮನಾಬ್​, ಇಒ ಮುನಿಯಪ್ಪ ಸೇರಿದಂತೆ ಹಲವಾರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net