ಜೋಡೆತ್ತಿನ ಕೃಷಿಗೆ ಪ್ರೋತ್ಸಾಹ ಧನ ವಿತರಿಸಿ

ಕೂಡಲಸಂಗಮದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ನಂದಿ ಕೂಗು ಅಭಿಯಾನ ಪಾದಯಾತ್ರೆ ಮುಕ್ತಾಯ ಸಮಾರಂಭದಲ್ಲಿ ಸಂಚಾಲಕ ಬಸವರಾಜ ಬಿರಾದಾರ ಮಾತನಾಡಿದರು. ಅಭಿಯಾನದ ರೂವಾರಿ ಸೋಮಲಿಂಗ ಪಾಟೀಲ, ಗುರುಮಹಾಂತ ಸ್ವಾಮೀಜಿ, ಜಿ.ಜಿ. ಪಾಟೀಲ, ಮಹೇಶ ಅಥಣಿ ಇತರರಿದ್ದರು.
ಕೂಡಲಸಂಗಮದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ನಂದಿ ಕೂಗು ಅಭಿಯಾನ ಪಾದಯಾತ್ರೆ ಮುಕ್ತಾಯ ಸಮಾರಂಭದಲ್ಲಿ ಸಂಚಾಲಕ ಬಸವರಾಜ ಬಿರಾದಾರ ಮಾತನಾಡಿದರು. ಅಭಿಯಾನದ ರೂವಾರಿ ಸೋಮಲಿಂಗ ಪಾಟೀಲ, ಗುರುಮಹಾಂತ ಸ್ವಾಮೀಜಿ, ಜಿ.ಜಿ. ಪಾಟೀಲ, ಮಹೇಶ ಅಥಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಸವರಾಜ ಬಿರಾದಾರ ಒತ್ತಾಯ
  • ನಂದಿ ಕೂಗು ಅಭಿಯಾನದ ಪಾದಯಾತ್ರೆ ಸಂಪನ್ನ
ಕೂಡಲಸಂಗಮ: ಜೋಡೆತ್ತಿನ ಕೃಷಿಯನ್ನು ಸಂರಕ್ಷಿಸಿ ರೈತರ ಆರ್ಥಿಕ ಸ್ಥಿರತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಪ್ರತಿ ತಿಂಗಳು 11 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ನಂದಿ ಕೂಗು ಅಭಿಯಾನದ ಪಾದಯಾತ್ರೆ ಸಂಚಾಲಕ ಬಸವರಾಜ ಬಿರಾದಾರ ಒತ್ತಾಯಿಸಿದರು.
ಕೂಡಲಸಂಗಮದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ನಂದಿ ಕೂಗು ಅಭಿಯಾನ ಪಾದಯಾತ್ರೆ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಏಪ್ರಿಲ್ 30ರಂದು ಬೀದರ ಜಿಲ್ಲೆ ಬಸವ ಕಲ್ಯಾಣದಿಂದ ಆರಂಭಗೊಂಡ ಪಾದಯಾತ್ರೆ ಸಮಾರೋಪಗೊಂಡಿದೆ. ನಂದಿಯನ್ನು ರಾಷ್ಟ್ರೀಯ ಶಕ್ತಿಯಾಗಿ ಘೋಷಿಸಿ ರಾಜ್ಯವಾರು ಶೇಕಡಾ 10ರಷ್ಟು ಅನುದಾನ ಮೀಸಲಿಡುವಂತೆ ಕಾನೂನು ಜಾರಿಗೆ ತರಬೇಕು ಎಂದು ಹೇಳಿದರು. ಜೋಡೆತ್ತಿನ ಕಷಿಯ ಮಹತ್ವವನ್ನು ಪಾದಯಾತ್ರೆ ಮೂಲಕ ರೈತರಿಗೆ ತಿಳಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.
ಅಭಿಯಾನದ ರೂವಾರಿ ಸೋಮಲಿಂಗ ಪಾಟೀಲ ಮಾತನಾಡಿ, ಯಂತ್ರಾಧಾರಿತ ಕಷಿಯಿಂದ ಭೂಮಿಯ ಲವತ್ತತೆ ಕುಂಠಿತಗೊಂಡಿದ್ದು, ಜೋಡೆತ್ತಿನ ಕೃಷಿಯತ್ತ ಮತ್ತೆ ರೈತರನ್ನು ತಿರುಗಿಸುವ ಅಗತ್ಯವಿದೆ ಎಂದರು.
ರಾಜ್ಯ ಕಷಿ ತಂತ್ರಜ್ಞರ ಸಂಸ್ಥೆಯ ನಿರ್ದೇಶಕ ವೆಂಕನಗೌಡ ಪಾಟೀಲ, ರೈತರ ಅಭಿವದ್ಧಿಗೆ ಅಧಿಕಾರಿಗಳು ಹೊಣೆ ಹೊತ್ತು ಕಾರ್ಯನಿರ್ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ವಿಭಕ್ತ ಕುಟುಂಬ ವ್ಯವಸ್ಥೆಯಿಂದ ಕಷಿ ಕುಸಿಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇಳಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ದೇಶದ ಅಭಿವದ್ಧಿ ರೈತರಿಂದ ಇದೆ. ಕಷಿ ಸಂಸ್ಕೃತಿ ಉಳಿಸಿ, ಬೆಳೆಸುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದರು.
ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಜಿ.ಜಿ. ಪಾಟೀಲ, ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ಮಹೇಶ ಅಥಣಿ, ಆಕಾಶ್ ಮೊಳಕೇರಿ ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net