ಹೆಂಡತಿ ಜೊತೆ ಕಿರಿಕ್​ : ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದ ಪಾಪಿ ತಂದೆ

,
,
Published on

ಪ್ರಮುಖ ಮುಖ್ಯಾಂಶಗಳು

  • ಯಾದಗಿರಿ ಜಿಲ್ಲೆಯ ಗೋಗಿ ಸಮೀಪ ಘಟನೆ
ಶಹಾಪುರ: ಹೆಂಡತಿ ಜೊತೆ ಜಗಳ ಮಾಡಿಕೊಂಡ ಕೋಪದಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಗೋಗಿ ಬಳಿ ಇರುವ ಕ್ಯಾನಲ್ ಗೆ ಎಸೆದಿರುವ ಆಘಾತಕಾರಿ ಘಟನೆ ತಾಲೂಕಿನ ಗಂಗನಾಳ್ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
 ಶಾಂತಪ್ಪ ಎಂಬ ಪಾಪಿ ತಂದೆಯಿಂದ ಈ ಕೃತ್ಯ ನಡೆದಿದೆ.  ಸಾನ್ವಿ (9) ಸೃಜನ್ (2) ವರ್ಷದ ಮಕ್ಕಳೇ ಕ್ಯಾನಲ್ ನ ಪಾಲಾಗಿದ್ದಾರೆ.
ರೇಣುಕಾ ಗಂಡ ಶಾಂತಪ್ಪ ಬಿರೆದಾರ್ ದಂಪತಿಗಳಿಗೆ ಮೂರು ಜನ ಮಕ್ಕಳಿದ್ದು, ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳು, ಎರಡು ವರ್ಷದ ಒಂದು ಗಂಡು ಮಗುವಿದೆ.
ಪಾಪಿ ತಂದೆ ಶಾಂತಪ್ಪನು ಮೂಲತ ತಾಲೂಕಿನ ಕಕ್ಕಸಗೇರ ಗ್ರಾಮದವನಾಗಿದ್ದು, ಹೆಂಡತಿಯ ತವರೂರು ಗಂಗನಾಳ್ ಗ್ರಾಮದಲ್ಲಿಯೇ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಂಗಳವಾರ ಸಂಜೆ ವೇಳೆ ಗಂಡ ಹೆಂಡತಿ ನಡುವೆ ಕಲಹ ಉಂಟಾಗಿದ್ದು, ಏಕಾಏಕಿ ಮೂವರು ಮಕ್ಕಳನ್ನು ತನ್ನ ದ್ವಿಚಕ್ರ ವಾಹನದ ಮೇಲೆ ಕೂರಿಸಿಕೊಂಡು ಹೋಗಿ ಇಬ್ಬರು ಮಕ್ಕಳನ್ನು ಕಾಲುವೆಯಲ್ಲಿ ಎಸೆದಿದ್ದೇನೆ ಎಂದು ಪೋಲೀಸರ ಮುಂದೆ  ಬಾಯಿ ಬಿಟ್ಟಿದ್ದಾನೆ. 
ಇನ್ನೊರ್ವ ಮಗಳನ್ನು ತಾಯಿ ಆಶ್ರಯಕ್ಕೆ ಒಪ್ಪಿಸಲಾಗಿದೆ, ಈಗಾಗಲೇ ಶೋಧ ಕಾರ್ಯ ನಡೆದಿದೆ, ಮತ್ತು ನಾಪತ್ತೆಯಡಿ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.

ಇನ್ನೂ ಪತ್ತೆ ಆಗದ ದೇಹ 

ಪತ್ತೆಯಾಗದ ಮಕ್ಕಳ ದೇಹ

ಇಬ್ಬರ ಮಕ್ಕಳ ದೇಹ ಇನ್ನೂ ಪತ್ತೆಯಾಗಿಲ್ಲ, ಸಿಬ್ಬಂದಿಗಳಿಂದ ಶೋಧ ನಡೆಯುತ್ತಿದೆ. ಕೌಟುಂಬಿಕ ಕಲಹ ಮತ್ತು ಹೆಂಡತಿ ಮೇಲಿನ ಕೋಪಕ್ಕೆ ಆರೋಪಿ ಹೀಗೆ ಮಾಡಿದ್ದಾನೆ. ಈ ಕುರಿತು ತನಿಖೆ ನಡಿಯುತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net