ಸಂಸದ ಜಿ. ಕುಮಾರ ನಾಯಕ ಅಧ್ಯಕ್ಷತೆಯಲ್ಲಿ ದಿಶಾ ಸಭೆ

ರಾಯಚೂರಿನ ಜಿಪಂ ಸಭಾಂಗಣದಲ್ಲಿ ಸಂಸದ ಜಿ.ಕುಮಾರ ನಾಯಕ ಅಧ್ಯಕ್ಷತೆಯಲ್ಲಿ ಶನಿವಾರ  ದಿಶಾ ಸಭೆ ನಡೆಯಿತು.ಸಚಿವ ಎನ್.ಎಸ್.ಬೋಸರಾಜು, ಶಾಸಕ ಬಸನಗೌಡ ದದ್ದಲ್, ಜಿಲ್ಲಾಧಿಕಾರಿ ಕೆ.ನಿತೀಶ, ಜಿಪಂ ಸಿಇಓ  ಈಶ್ವರ ಕುಮಾರ ಕಾಂದೂ, ಎಸ್ಪಿ ಅರುಣಾಂಗ್ಶು ಗಿರಿ ಇದ್ದರು.
ರಾಯಚೂರಿನ ಜಿಪಂ ಸಭಾಂಗಣದಲ್ಲಿ ಸಂಸದ ಜಿ.ಕುಮಾರ ನಾಯಕ ಅಧ್ಯಕ್ಷತೆಯಲ್ಲಿ ಶನಿವಾರ ದಿಶಾ ಸಭೆ ನಡೆಯಿತು.ಸಚಿವ ಎನ್.ಎಸ್.ಬೋಸರಾಜು, ಶಾಸಕ ಬಸನಗೌಡ ದದ್ದಲ್, ಜಿಲ್ಲಾಧಿಕಾರಿ ಕೆ.ನಿತೀಶ, ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ, ಎಸ್ಪಿ ಅರುಣಾಂಗ್ಶು ಗಿರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಾರದೊಳಗೆ ಜಲಧಾರೆ ಕಾಮಗಾರಿಯ ವರದಿ ಸಲ್ಲಿಸಿ
  • ಜಲಜೀವನ್ ಮಿಷನ್‌ನ ನಲ್ಲಿಗಳಿಗೆ ಜಲದಾರೆ ಯೋಜನೆಯ ಸಂಪರ್ಕ ಕಲ್ಪಿಸುವ ಕಾಮಗಾರಿಗಳು 2024ಕ್ಕೆ ಮುಗಿಯಬೇಕಿತ್ತು.
  • ಕಾಮಗಾರಿಗಳ ಸ್ಥಿತಿಗಳ ಕುರಿತು ಸಂಪೂರ್ಣ ಮಾಹಿತಿ ಮತ್ತು ಪಟ್ಟಿಯನ್ನು ಸಿದ್ದಪಡಿಸಿ
ರಾಯಚೂರು ಜಲಧಾರೆ ಯೋಜನೆ ಸಾವಿರಾರು ಕೋಟಿ ಮೂಲಭೂತವಾದ ಯೋಜನೆಯಾಗಿದ್ದು, ಆದರೆ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗುತ್ತದೆ. ಕೂಡಲೇ ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಗಳ ಸ್ಥಿತಿಗಳ ಕುರಿತು ಸಂಪೂರ್ಣ ಮಾಹಿತಿ ಮತ್ತು ಪಟ್ಟಿಯನ್ನು ಸಿದ್ದಪಡಿಸಿ ವರದಿ ಸಲ್ಲಿಸಬೇಕೆಂದು ಸಂಸದ ಜಿ. ಕುಮಾರ ನಾಯಕ ಜಿಪಂ ಸಿಇಓಗೆ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ದಿಶಾ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು, ಕುಡಿಯುವ ನೀರಿನ ಯೋಜನೆಗಳ ಸ್ಥಿತಿಗಳ ಪಟ್ಟಿ ಅನುಸಾರ ಸಿಇಓ ಅವರು ಯದೃಚ್ಚಿಕವಾಗಿ ಹಳ್ಳಿಗಳಿಗೆ ಭೇಟಿ ನೀಡಿ, ಕಾಮಗಾರಿಗಳ ಮರುಪರಿಶೀಲನೆ ನಡೆಸಬೇಕು. ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿ ಕೊಳ್ಳಬೇಕು ಎಂದರು. ದೇವದುರ್ಗ ಶಾಸಕಿ ಜಿ.ಕರೆಮ್ಮ ನಾಯಕ ಮಾತನಾಡಿ, ಜಲಜೀವನ್ ಮಿಷನ್ ಹಾಗೂ ಜಲಧಾರೆ ಕಾಮಗಾರಿಗಳು ಸಂಪೂರ್ಣ ವಿಫಲವಾಗಿದ್ದು, ಕೂಡಲೇ ಆ ಕಾಮಗಾರಿಗಳ ಕುರಿತು ತನಿಖೆಗೆ ಆದೇಶ ಮಾಡಬೇಕು. ದೇವದುರ್ಗದಲ್ಲಿ ಜಲಧಾರೆ ಯೋಜನೆಯಿದೆ ಎಂಬ ಬಗ್ಗೆಯೂ ನಮಗೆ ಮಾಹಿತಿಯಲ್ಲ. ಜಲಜೀವನ್ ಮತ್ತು ಜಲಧಾರೆ ಯೋಜನೆಯ ಕುರಿತು ಸಮಗ್ರ ತನಿಖೆಯಾಗಬೇಕು ಎಂದರು.
ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಬೇಸಿಗೆಯಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಸಿಗದೇ ಇದ್ದರೆ. ನಮ್ಮ ಸರ್ಕಾರವಿದೆ ಎಂದು ನೋಡುವುದಿಲ್ಲ.
ಗ್ರಾಮೀಣ ಕ್ಷೇತ್ರದ ಜನರ ಜೊತೆಗೆ ಜಿಲ್ಲಾ ಪಂಚಾಯತ್ ಕಚೇರಿ ಎದುರು ಕೂತು ಪ್ರತಿಭಟನೆ ನಡೆಸಲಾಗುತ್ತದೆ ಕೂಡಲೇ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. ಜಲ ಜೀವನ ಮೀಷನ್ ಯೋಜನೆಯಡಿ ಕಾಮಗಾರಿಗಳು ಅಪೂರ್ಣ ವಾಗಿ ಉಳಿದಿದೆ. ಅಧಿಕಾರಿಗಳು ಹಾಗೂ ಕುಡಿಯುವ ನೀರಿನ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ಅಧಿಕಾರಿಗಳು ಸಭೆಯಲ್ಲಿ ಸರಿಯಾದ ಮಾಹಿತಿ ನೀಡುತ್ತಿಲ್ಲ ಮತ್ತು ಕಾಮಗಾರಿ ಪೂರ್ಣಗೊಳಿಸದೇ ಪೂರ್ಣ ಗೊಳಿಸಿದ್ದೇವೆ ಎಂದು ಉತ್ತರ ನೀಡುತ್ತಿದ್ದು, ಸರಿಯಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.
ಜಲಜೀವನ್ ಮಿಷನ್‌ನ ನಲ್ಲಿಗಳಿಗೆ ಜಲದಾರೆ ಯೋಜನೆಯ ಸಂಪರ್ಕ ಕಲ್ಪಿಸುವ ಕಾಮಗಾರಿಗಳು 2024ಕ್ಕೆ ಮುಗಿಯಬೇಕಿತ್ತು. ಆದರೆ ಎರಡು ವರ್ಷ ಕಳೆದರೂ ಇನ್ನೂ ಮುಗಿದಿಲ್ಲ. ಕೆಲವು ಕಡೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಗುತ್ತಿಗೆದಾರರು ಪಂಚಾಯತಿಗಳಿಗೆ ಹಸ್ತಾಂತರಿಸಿದ್ದು, ಆದರೆ ಆಯಾ ಗ್ರಾಮಗಳಲ್ಲಿ ಮನೆಗಳ ನಲ್ಲಿಗಳಲ್ಲಿ ನೀರೆ ಬರುತ್ತಿಲ್ಲ. ಪ್ರತಿ ತಾಲೂಕಿನ ಆಯಾ ತಾಲೂಕು ಪಂಚಾಯತ್ ಇಓಗಳು ಕಾಮಗಾರಿಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ಯೇ ’ಕಾಮಗಾರಿಗಳನ್ನು ಹಸ್ತಾಂತರಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ ಚೌಹಾಣ್ ಸಭೆಗೆ ಮಾಹಿತಿ ನೀಡಿ, ಮಣ್ಣು ಆರೋಗ್ಯ ಕಾಡರ್ರ್ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 2025 -26ನೇ ಸಾಲಿನಲ್ಲಿ ಒಟ್ಟು 13,756 ಮಣ್ಣುಮಾದರಿ ಸಂಗ್ರಹಿಸಲಾಗಿದ್ದು, ಒಟ್ಟು 12,848 ಮಣ್ಣು ಆರೋಗ್ಯ ಚೀಟಿಯನ್ನು ವಿತರಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2024-25ನೇ ಸಾಲಿನ ಮುಂಗಾರಿನಲ್ಲಿ 1731 ಫಲಾನುಭವಿಗಳಿಗೆ 11.80ಕೋಟಿ ವಿಮೆ ಮೊತ್ತ ಪಾವತಿಸಬೇಕಿತ್ತು. ಈಗಾಗಲೇ 1669 ಫಲಾನುಭವಿಗಳಿಗೆ 11.75 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಉಳಿದ 62 ಫಲಾನುಭವಿಗಳಿಗೆ 5.68 ಲಕ್ಷ ಬೆಳೆ ವಿಮೆ ಪಾವತಿಸಬೇಕಿದ್ದು, ಕೆಲವು ತಾಂತ್ರಿಕ ಮತ್ತು ಆಧಾರ್ ಜೋಡಣೆ, ದಾಖಲೆಗಳ ಪೆಂಡಿಂಗ್ ಸೇರಿ ಅನೇಕ ಕಾರಣಗಳಿಂದ ಬಾಕಿ ಉಳಿದಿವೆ ಎಂದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಜಿಲ್ಲಾಧಿಕಾರಿ ಕೆ.ನಿತೀಶ, ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ, ಎಸ್ಪಿ ಅರುಣಾಂಗ್ಶು ಗಿರಿ, ದಿಶಾ ಸಭೆಯ ನಾಮನಿರ್ದೇಶಿತ ಸದಸ್ಯರಾದ ತಿಪ್ಪಣ್ಣ, ರಜೀಯಾ ಸುಲ್ತಾನ, ರಾಘವೇಂದ್ರ, ಹನುಮಂತ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net