ಅಭಿವೃದ್ಧಿ ಕೆಲಸದಲ್ಲಿ ತಾರತಮ್ಯ Bhumi Puja

ಹುಳಿಯಾರು Bhumi Puja ಸಮೀಪದ ಶೆಟ್ಟಿಕೆರೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಬಿ.ಸುರೇಶ್​ ಬಾಬು ಭೂಮಿಪೂಜೆ ನೆರವೇರಿಸಿದರು. ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಎಚ್​.ಆರ್​.ಶಶಿಧರ್​, ಮುಖಂಡರಾದ ಮಹೇಶ್​, ದಯಾನಂದ್​, ಚಂದ್ರಕಾಂತ್​, ಬೈರೇಶ್​, ಜಿಲ್ಲಾ ಪತ್ರಬರಹಗಾರ ಎಸ್​.ಎಂ.ಪ್ರಕಾಶ್​, ಸಿದ್ದರಾಮಯ್ಯ ಇದ್ದರು.

Published on
ಹುಳಿಯಾರು: ರಾಜ್ಯ ಸರ್ಕಾರವು ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡುತ್ತಿದೆ. Bhumi Puja ಆಡಳಿತ ಪಕ್ಷದ ಶಾಸಕರಿಗೆ 50 ಕೋಟಿ ಅನುದಾನ ನೀಡಿದರೆ, ವಿರೋಧ ಪಕ್ಷದ ಶಾಸಕರಿಗೆ ಕೇವಲ 25 ಕೋಟಿ ರೂ. ನೀಡುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್​ ಬಾಬು ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆಯಲ್ಲಿ 5.30 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಅನುದಾನದ ಕೊರತೆಯ ನಡುವೆಯೂ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದು, ರಸ್ತೆ ನಿಮಾರ್ಣದ ವೇಳೆ ಸುತ್ತಮುತ್ತಲಿನ ರೈತರು ಮತ್ತು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು, ಈ ಬಗ್ಗೆ ನೀವೂ ಸಹ ಗಮನಹರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಲೋಕೋಪಯೋಗಿ ಇಲಾಖೆಯ ಜೆಇಇ ತಿಮ್ಮಯ್ಯ ಮಾತನಾಡಿ, ಶೆಟ್ಟಿಕೆರೆಯಿಂದ ವಡೇರಹಳ್ಳಿ, ಬಾಚಿಹಳ್ಳಿ ಮತ್ತು ಸಿದ್ದರಾಮನಗರದವರೆಗೆ ಒಟ್ಟು 3.1 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ 1.1 ಕಿ.ಮೀ ನಷ್ಟು ಕಾಂಕ್ರೀಟ್​ ರಸ್ತೆ ಹಾಗೂ 2 ಕಿ.ಮೀ ನಷ್ಟು ಡಾಂಬರ್​ ರಸ್ತೆ ನಿಮಾರ್ಣವಾಗಲಿದೆ. ರಸ್ತೆಯು ಒಟ್ಟು 7 ಮೀಟರ್​ ಅಗಲವಿರಲಿದೆ ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net