ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ 'ಕೈ' ಶಾಸಕರಲ್ಲಿ ಅಸಮಾಧಾನ ಸ್ಪೋಟ; ಶುರುವಾಯ್ತು ರಾಜೀನಾಮೆ ಬೆದರಿಕೆ

 'ಕೈ' ಶಾಸಕರಲ್ಲಿ ಅಸಮಾಧಾನ ಸ್ಪೋಟ
'ಕೈ' ಶಾಸಕರಲ್ಲಿ ಅಸಮಾಧಾನ ಸ್ಪೋಟ
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಸಂಪುಟ ವಿಸ್ತರಣೆಯಲ್ಲಿ 19 ನೂತನ ಶಾಸಕರಿಂದ ಸಚಿವರಾಗಿ ಪದಗ್ರಹಣ
  • ರಾಜ್ಯ ಕಾಂಗ್ರೆಸ್​ ಪಾಳಯದಲ್ಲಿ ಹಿರಿಯ ಶಾಸಕರು ತೀವ್ರ ಮುನಿಸು
  • ಅಸಮಾಧಾನ ಸ್ಫೋಟ ಬೆನ್ನಲ್ಲೇ ಕೆಲವರಿಂದ ರಾಜೀನಾಮೆ ಬೆದರಿಕೆ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟ ವಿಸ್ತರಣೆಯು (Cabinet Expansion) ಕಡೆಗೂ ಮುಕ್ತಾಯಗೊಂಡಿದ್ದು, ಸೋಮವಾರ (ಆ.03) ಸಂಜೆ 5 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ 19 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಸ್ತರಣೆ ಏನೋ ಪೂರ್ಣಗೊಂಡಿದ್ದೇ ಆದರೂ ಸಚಿವ ಸ್ಥಾನ ಕೈತಪ್ಪಿದ ಶಾಸಕರಲ್ಲಿ ಇದೀಗ ಅಸಮಾಧಾನ ಸ್ಫೋಟಗೊಂಡಿದೆ. 
ಆರಂಭದಲ್ಲಿ ಎಐಸಿಸಿ ಬಿಡುಗಡೆ ಮಾಡಿದ 20 ಸಚಿವರ ಪಟ್ಟಿಯಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಹಾಗೂ ವಿಧಾನ ಪರಿಷತ್​ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಹೆಸರಿತ್ತು. ಆದರೆ, ಕೊನೇ ಕ್ಷಣದಲ್ಲಿ ಟ್ವಿಸ್ಟ್​ ಎನ್ನುವಂತೆ ಮಂಕಾಳ ವೈದ್ಯರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟು, ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್​ ಶಾಸಕ ಎಸ್​.ಎಸ್​. ಮಲ್ಲಿಕಾರ್ಜುನ್​ ಅವರಿಗೆ ಹಾಗೂ ಗಾಯತ್ರಿ ಅವರ ಸ್ಥಾನವನ್ನು ಮಾಜಿ ಸಚಿವ ಎನ್​.ಎಸ್​. ಬೋಸರಾಜು ಅವರಿಗೆ ನೀಡಲಾಯಿತು. ಇದಾದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್​ ಪಾಳಯದಲ್ಲಿ ಹಿರಿಯ ಶಾಸಕರು ತೀವ್ರ ಮುನಿಸಿಕೊಂಡಿದ್ದಾರೆ. 
ಹಲವು ಹಿರಿಯ ನಾಯಕರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ವಿಶೇಷವಾಗಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ತಮಗಾದ ಅನ್ಯಾಯ ಮತ್ತು ನಿರಾಶೆಯನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ. ಕಾರಣವೇ ತಿಳಿಸದೆ ಕೈಬಿಟ್ಟಿದ್ದಕ್ಕೆ ದಿನೇಶ್ ಗುಂಡೂರಾವ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. 

ಕಾರಣವಿಲ್ಲದ ನಿರ್ಧಾರಕ್ಕೆ ಮುನಿಸು

"ಪಕ್ಷ ಮತ್ತು ರಾಜ್ಯಕ್ಕೆ ಇಷ್ಟು ವರ್ಷ ಸೇವೆ ಸಲ್ಲಿಸಿದ ಮೇಲೂ ನನ್ನನ್ನು ಸಂಪುಟಕ್ಕೆ ಪರಿಗಣಿಸದಿರುವುದು ತೀವ್ರ ಬೇಸರ ಮೂಡಿಸಿದೆ. ನನ್ನನ್ನು ಸಂಪುಟದಿಂದ ಹೊರಗಿಡಲು ಕಾರಣವೇನು ಎಂಬುದನ್ನು ಕನಿಷ್ಠ ಪಕ್ಷ ನನಗಾದರೂ ತಿಳಿಸಬೇಕಿತ್ತು. ನಾನು ಸಚಿವನಾಗಿ ತೋರಿದ ಕಳಪೆ ಸಾಧನೆ ಏನು? ನನ್ನ ಮೇಲೆ ಭ್ರಷ್ಟಾಚಾರದ ಆರೋಪಗಳಿವೆಯೇ ಅಥವಾ ನಾನು ಪಕ್ಷಕ್ಕೆ ಸರಿಯಾಗಿ ಕೆಲಸ ಮಾಡಿಲ್ಲವೇ?" ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

ಬಂಡಾಯದ ಕಾವು, ಸರಣಿ ರಾಜೀನಾಮೆ ಬೆದರಿಕೆ

ಸಂಪುಟ ವಿಸ್ತರಣೆಯು ಸದ್ಯ ಕಾಂಗ್ರೆಸ್ ಒಳಗೆ ಭಾರಿ ಅಸಮಾಧಾನ ಹಾಗೂ ಶಾಸಕರ ರಾಜೀನಾಮೆ ಬೆದರಿಕೆಗೆ ಕಾರಣವಾಗಿದೆ.  ಇಂಡಿ ಕ್ಷೇತ್ರದ ಹಿರಿಯ ಶಾಸಕ ಯಶವಂತ ರಾಯಗೌಡ ಪಾಟೀಲ್ ಅವರು ತಮಗೆ ಕೊನೇ ಕ್ಷಣದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರ ಹೊರಹಾಕಿದ್ದು, ರಣದೀಪ್ ಸುರ್ಜೆವಾಲ ಅವರ ಮಾತಿಗೂ ಬಗ್ಗದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಹೈಕಮಾಂಡ್​ಗೆ ತಲೆಬಿಸಿ ತಂದಿಟ್ಟಿದೆ. 
ಯಶವಂತ ಮಾತ್ರವಲ್ಲದೇ, ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಭದ್ರಾವತಿ ಶಾಸಕ ಸಂಗಮೇಶ್ ಅವರೂ ಸಹ ಸಚಿವ ಸ್ಥಾನ ಸಿಗದಿರುವುದಕ್ಕೆ ಭಾರಿ ಅಸಮಾಧಾನ ಹೊರಹಾಕಿದ್ದಾರೆ. ಡಿಕೆ ಶಿವಕುಮಾರ್​ ಮತ್ತು ಕಾಂಗ್ರೆಸ್​ ಹೈಕಮಾಂಡ್​ ನಿರ್ಧಾರಕ್ಕೆ ಹಲವು ಹಿರಿಯ ನಾಯಕರ ಬೆಂಬಲಿಗರು ಸಿಟ್ಟಿಗೆದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಸಿಎಂ ಡಿಕೆಶಿ ಕಿವಿಮಾತು

ಸಂಪುಟ ವಿಸ್ತರಣೆಯಿಂದ ಉಂಟಾಗಿರುವ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೇಸರಗೊಂಡ ಆಕಾಂಕ್ಷಿಗಳು ಮತ್ತು ನಾಯಕರು ಸಮಾಧಾನ ಹಾಗೂ ತಾಳ್ಮೆಯಿಂದ ಇರಬೇಕು. ನನ್ನನ್ನು ಸಚಿವ ಸಂಪುಟದಿಂದ ಹೊರಗಿಡಲಾಗಿತ್ತು. ಆದರಿಂದು, ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಸಮಾಧಾನ ಇರಬೇಕು ಎಂದು ಶಾಸಕರಿಗೆ ತಿಳಿಸಿದ್ದಾರೆ. 

ಡಿಕೆಶಿ ಸಚಿವ ಸಂಪುಟದ ಜಾತಿ ಸಮೀಕರಣ

1. ಡಿಕೆ ಶಿವಕುಮಾರ್
2. ಡಾ. ಜಿ ಪರಮೇಶ್ವರ (ದಲಿತ ಪರಿಶಿಷ್ಟ ಜಾತಿ)
3. ಎಂಬಿ ಪಾಟೀಲ್ (ಲಿಂಗಾಯತ) 
4. ರಾಮಲಿಂಗಾ ರೆಡ್ಡಿ
5. ಕೃಷ್ಣ ಬೈರೇಗೌಡ (ಒಕ್ಕಲಿಗ)
10. ಸತೀಶ್ ಜಾರಕಿಹೊಳಿ (ವಾಲ್ಮೀಕಿ ಪರಿಶಿಷ್ಟ ಪಂಗಡ)
11. ಈಶ್ವರ್ ಖಂಡ್ರೆ (ಲಿಂಗಾಯತ)
15 ಪಿ.ಎಂ.ನರೇಂದ್ರಸ್ವಾಮಿ (ದಲಿತ ಬಲಗೈ)
16. ಶಿವರಾಜ್ ತಂಗಡಗಿ (ದಲಿತ ಭೋವಿ)
17 ರುದ್ರಪ್ಪ ಲಮಾಣಿ (ದಲಿತ ಲಂಬಾಣಿ)
18. ಕೆ.ಎಸ್.ಬಸವಂತಪ್ಪ (ದಲಿತ ಎಡಗೈ)
19. ಬಿ.ನಾಗೇಂದ್ರ (ಪರಿಶಿಷ್ಟ ಪಂಗಡ)
20. ಟಿ.ರಘುಮೂರ್ತಿ(ಪರಿಶಿಷ್ಟ ಪಂಗಡ)
21. B. Z. ಜಮೀರ್ ಅಹಮದ್ ಖಾನ್ (ಮುಸ್ಲಿಂ)
22. ರಿಜ್ವಾನ್ ಅರ್ಷದ್ (ಮುಸ್ಲಿಂ)
23. ಸಂತೋಷ್ ಲಾಡ್ (ಮರಾಠ)
24. ಮಧು ಬಂಗಾರಪ್ಪ (ಈಡಿಗ)
25. ಪುಟ್ಟರಂಗಶೆಟ್ಟಿ (ಉಪ್ಪಾರ)
26. ಎಸ್​ಎಸ್​ ಮಲ್ಲಿಕಾರ್ಜುನ್​​ (ಸಾದರ ಲಿಂಗಾಯತ)
27. ಡಾ. ಅಜಯ್ ಸಿಂಗ್ (ಕ್ಷತ್ರಿಯ)
28. ಎನ್. ಚಲುವರಾಯ ಸ್ವಾಮಿ (ಒಕ್ಕಲಿಗ)
29. ಕೆ.ಎಂ.ಶಿವಲಿಂಗೇಗೌಡ (ಒಕ್ಕಲಿಗ)
30. ಎಚ್.ಸಿ.ಬಾಲಕೃಷ್ಣ (ಒಕ್ಕಲಿಗ)
31. ಬಸವರಾಜ ರಾಯರೆಡ್ಡಿ (ರಡ್ಡಿ ಲಿಂಗಾಯಿತ)
32. ವಿಜಯಾನಂದ ಕಾಶಪ್ಪನವರ್ (ಪಂಚಮಸಾಲಿ ಲಿಂಗಾಯತ)
33. ಲಕ್ಷ್ಮಣ ಸವದಿ (ಗಾಣಿಗ ಲಿಂಗಾಯತ) 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net