ಬದುಕಿನಲ್ಲಿ ಶಿಸ್ತು, ಸಮಯಪಾಲನೆ ಅಗತ್ಯ

ಆಳಂದನ ಸಮತಾ ಲೋಕ ಶಿಕ್ಷಣ ಸಮಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸೇನಾ ಪೂರ್ವ ತರಬೇತಿ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್​.ಪಾಟೀಲ್​, ಕಲಬುರಗಿ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಢಗೆ, ಪ್ರಮುಖರಾದ ಆರ್​.ಕೆ.ಪಾಟೀಲ್​, ರಾಜು ಸಿಂಗೆ ಇತರರಿದ್ದರು.
ಆಳಂದನ ಸಮತಾ ಲೋಕ ಶಿಕ್ಷಣ ಸಮಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸೇನಾ ಪೂರ್ವ ತರಬೇತಿ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್​.ಪಾಟೀಲ್​, ಕಲಬುರಗಿ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಢಗೆ, ಪ್ರಮುಖರಾದ ಆರ್​.ಕೆ.ಪಾಟೀಲ್​, ರಾಜು ಸಿಂಗೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಅನಿಸಿಕೆ
  • ಆಳಂದನಲ್ಲಿ ಸೇನಾ ಪೂರ್ವ ತರಬೇತಿ ಸಮಾರೋಪ
ಆಳಂದ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಭವಿಷ್ಯ ನಿರ್ಧರಿಸುವುದು ಅಂಕಗಳಲ್ಲ. ಭವಿಷ್ಯದ ದಾರಿ ದೊಡ್ಡದಾಗಿದ್ದು, ಪ್ರತಿಯೊಂದರಲ್ಲಿ ಸ್ಪರ್ಧೆ ಇದೆ. ಹೀಗಾಗಿ ಮಕ್ಕಳು ಶಿಸ್ತು, ಶ್ರೇಷ್ಠ ಗುರಿಯೊಂದಿಗೆ ಸಾಗಬೇಕು ಎಂದು ಕಲಬುರಗಿ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​. ಢಗೆ ಹೇಳಿದರು.
ಸಮತಾ ಲೋಕ ಶಿಕ್ಷಣ ಸಮಿತಿ ಆವರಣದಲ್ಲಿ ಆಳಂದ ಸೈನಿಕರ ಅಭಿವೃದ್ಧಿ ಸಂದಿಂದ ಶುಕ್ರವಾರ ಆಯೋಜಿಸಿದ್ದ 45 ದಿನಗಳ ಉಚಿತ ಸೇನಾ ಪೂರ್ವ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸತತ 16 ವರ್ಷಗಳಿಂದ ಪೊಲೀಸ್​ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇಲಾಖೆ ನೀಡುವ ಜವಾಬ್ದಾರಿಯನ್ನು ಗೌರವದಿಂದ ನಿಭಾಯಿಸುತ್ತಿದ್ದೇನೆ. ನಮ್ಮ ಭವಿಷ್ಯ ನಿರ್ಧಾರವಾಗುವುದು ತರಬೇತಿ, ಸಮಯ ಪಾಲನೆ, ಶಿಸ್ತು ವರ್ತನೆಯಿಂದ ಮಾತ್ರ ಎಂದರು.
ಬದುಕಿನಲ್ಲಿ ಸೋಲು ಅನುಭವಿಸದೆ ಯಾರೊಬ್ಬರೂ ಗೆಲುವು ಕಂಡಿಲ್ಲ. ಸೋಲು ಗೆಲುವಿಗೆ ಪ್ರೇರಣೆಯಾಗಿದೆ. ಸುಮಾರು 250ಕ್ಕೂ ಹೆಚ್ಚು ಶಿಬಿರಾರ್ಥಿಗಳು ಸೇನಾ ಪೂರ್ವ ತರಬೇತಿಯಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ. ಸಮತಾ ಲೋಕ ಶಿಕ್ಷಣ ಸಮಿತಿಯಲ್ಲಿ ಸತತ 3 ವರ್ಷಗಳಿಂದ ಉಚಿತವಾಗಿ ತರಬೇತಿ ನಡೆಸುತ್ತಿದ್ದು ಶ್ಲಾನೀಯ, ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಬಣ್ಣಿಸಿದರು.
ಕಲಬುರಗಿ, ಬೀದರ್​ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟದ ಅಧ್ಯಕ್ಷ ಆರ್​.ಕೆ.ಪಾಟೀಲ್​ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯಿಂದ ನಡೆಸುತ್ತಿರುವ ಉಚಿತ ಸೇನಾ ಪೂರ್ವ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದ ಹಲವು ಶಿಬಿರಾರ್ಥಿಗಳು ಸೇನೆ ಸೇರಿ ವಿವಿಧ ಇಲಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಸಂಸ್ಥೆಯ ಕೀರ್ತಿ ಹೆಚ್ಚಿಸುವುದರ ಜತೆಗೆ ನಮ್ಮ ಕಾರ್ಯಕ್ಕೆ ತೃಪ್ತಿ ದೊರೆತಂತೆ. ಮುಂದಿನ ದಿನಗಳಲ್ಲೂ ಈ ಸೇವೆ ಮುಂದುವರಿಯಲಿದೆ ಎಂದು ತಿಳಿಸಿದರು.
ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆದ ಶಾಸಕ ಬಿ.ಆರ್​.ಪಾಟೀಲ್​ ಮಾತನಾಡಿದರು. ಮಾದನಹಿಪ್ಪರಗಿಯ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸೈನಿಕ ಸಂದ ಉಪಾಧ್ಯಕ್ಷ ರಾಜು ಸಿಂಗೆ, ಪ್ರಮುಖರಾದ ಎಸ್​.ಮಲ್ಲಶೆಟ್ಟಿ, ಸಲ್ಮಾನ್​ ನಗರ, ಸಿದ್ಧಾರ್ಥ ಹರಸೂರೆ, ಪರಮೇಶ್ವರ ಇತರರಿದ್ದರು. ತರಬೇತಿಯಲ್ಲಿ ಉತ್ತಮ ಸಾಧನೆ ಮಾಡಿದ ಶಿಬಿರಾರ್ಥಿಗಳನ್ನು ಸತ್ಕರಿಸಲಾಯಿತು. ಪ್ರಮೋದ ಪಾಂಚಾಳ ನಿರೂಪಣೆ ಮಾಡಿದರು. ಸತೀಶ ಸನ್ಮುಖ ವಂದಿಸಿದರು.
"

ನಮ್ಮ ಬದುಕಿನಲ್ಲಿ ಸವಾಲುಗಳು ಬರುತ್ತವೆ, ಅವುಗಳನ್ನು ಎದುರಿಸಿ ನಿಲ್ಲುವ ಶಕ್ತಿ ನಮ್ಮಲ್ಲಿರಬೇಕು. ವಿದ್ಯಾರ್ಥಿಗಳು ಅಭ್ಯಾಸದ ಜತೆಗೆ ದೇಶ ಸೇವೆಗೆ ಸಿದ್ಧರಾಗಲು ತರಬೇತಿ ಪಡೆಯುತ್ತಿರುವುದು ಖುಷಿ ತಂದಿದೆ. ಈ ತರಬೇತಿ ನಿಮ್ಮ ಜೀವನಕ್ಕೆ ಪ್ರೇರಣೆಯಾಗುತ್ತದೆ.

— > ಬಿ.ಆರ್​.ಪಾಟೀಲ್​, ಶಾಸಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net