ಇಬ್ಬಂದಿ ನೀತಿಗೆ ಧಿಕ್ಕಾರ! ಗಣರಾಜ್ಯೋತ್ಸವ ಪರೇಡ್​ನಲ್ಲಿ ರಾಜ್ಯದ ಟ್ಯಾಬ್ಲೋ ಏಕಿಲ್ಲ? ಸಿಂಪಲ್​ ಸುನಿ ಗರಂ

ನಿರ್ದೇಶಕ ಸಿಂಪಲ್ ಸುನಿ
ನಿರ್ದೇಶಕ ಸಿಂಪಲ್ ಸುನಿ
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರ ರಾಜಧಾನಿಯಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ
  • ದೆಹಲಿಯ ಪಥಸಂಚಲನದಲ್ಲಿ ಕಾಣಲಿಲ್ಲ ಕರ್ನಾಟಕದ ಟ್ಯಾಬ್ಲೋ
  • ಈ ಬಗ್ಗೆ ಕನ್ನಡ ಚಿತ್ರರಂಗದ ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮೂಲಕ​ ಬೇಸರ
ಬೆಂಗಳೂರು: 77ನೇ ಗಣರಾಜ್ಯೋತ್ಸವ ದಿನಾಚರಣಗೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿದ್ದು, ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಪಥಸಂಚಲನದಲ್ಲಿ ಕರ್ನಾಟಕದ 'ಮಿಲೆಟ್ಸ್​ ಟು ಮೈಕ್ರೋಚಿಪ್'​ ಸ್ತಬ್ಧಚಿತ್ರ ಕಾಣಿಸಲಿಲ್ಲ. ಇದು ರಾಜ್ಯದ ಜನತೆಗೆ ಭಾರೀ ಬೇಸರ ತಂದಿದೆ. ಈ ವಿಚಾರಕ್ಕೆ ಸ್ಯಾಂಡಲ್​ವುಡ್​ ನಿರ್ದೇಶಕ ಸಿಂಪಲ್ ಸುನಿ ಕೂಡ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ಪಯಣವನ್ನು ಸಂಕೇತಿಸುವಂತೆ, ಸಿರಿಧಾನ್ಯದಿಂದ ಮೈಕ್ರೋಚಿಪ್​ವರೆಗೆ (ಮಿಲ್ಲೆಟ್ ಟು ಮೈಕ್ರೋಚಿಪ್) ಎನ್ನುವ ಸ್ತಬ್ಧಚಿತ್ರವನ್ನು ಈ ಬಾರಿಯ ಗಣರಾಜ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಆಯೋಜಿಸುವ ಮಹಾದಾಸೆಯನ್ನು ಕರ್ನಾಟಕವು ಹೊಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ರಾಜ್ಯದ ಟ್ಯಾಬ್ಲೋ ಪ್ರದರ್ಶನಕ್ಕೆ ನಿರಾಕರಿಸಿರುವುದು ಕನ್ನಡಿಗರ ಮನಸ್ಸಿಗೆ ಘಾಸಿ ಉಂಟುಮಾಡಿದೆ.

ಕೇಂದ್ರ ಸರ್ಕಾರ ನಡೆಗೆ ಸುನಿ ಕಿಡಿನುಡಿ

ಈ ಬಗ್ಗೆ ಟ್ವೀಟ್​ (ಪ್ರಸ್ತುತ ಎಕ್ಸ್​) ಮಾಡಿರುವ ನಿರ್ದೇಶಕ ಸಿಂಪಲ್ ಸುನಿ, "ಸರ್ವರಿಗೂ 77ನೇ ಗಣರಾಜ್ಯೋತ್ಸವದ ಶುಭಾಶಯಗಳು. ವಿವಿಧತೆಯಲ್ಲಿ ಏಕತೆ ಭಾರತದ ಹೆಮ್ಮೆ. ಆದರೆ, ಈ ಬಾರಿಯ ಪರೇಡ್​ನಲ್ಲಿ ನಮ್ಮ ನೆಚ್ಚಿನ ಕರ್ನಾಟಕದ ಟ್ಯಾಬ್ಲೋ ಸ್ತಬ್ಧ ದಿಬ್ಬಣ ಕಾಣೆಯಾಗಿದ್ದು ಮಾತ್ರ ವಿಷಾದನೀಯ. ಪರ್ಯಾಯ ನೀತಿಯಂತೆ ನಮಗೆ ತಪ್ಪಿದ್ದು ಎಂದುಕೊಂಡರೂ ಗುಜರಾತ್ ಮತ್ತು ಉತ್ತರಪ್ರದೇಶಕ್ಕೆ ಮಾತ್ರ ಪ್ರತಿ ವರ್ಷ ಅವಕಾಶ ದೊರಕುತ್ತಿರುವ ಇಬ್ಬಂದಿ ನೀತಿಗೆ ಮಾತ್ರ ಧಿಕ್ಕಾರ" ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net