

ಶ್ರೀನಿವಾಸಪುರ:
ನಂಬಿಹಳ್ಳಿ ಕ್ಲಸ್ಟರ್ನ 14 ಸರ್ಕಾರಿ ಶಾಲೆಗಳಿಗೆ ಸೇರಿದ ಸಿಆರ್ಸಿ ಕೇಂದ್ರ ಸಂಪೂರ್ಣ ಶಿಥಿಲಗೊಂಡಿದ್ದು, ಪ್ರಾಣ ಭಯದಿಂದ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕಾದ ವಾತಾವರಣ ನಿಮಾರ್ಣವಾಗಿದೆ.
ಈ ಭಾಗದಲ್ಲಿ ಸುಮಾರು 4 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಕಟ್ಟಡದ ಸಮಸ್ಯೆ ಕುರಿತು ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇನೆ. ಕಟ್ಟಡ ತೆರವುಗೊಳಿಸಲು ಅನುಮತಿ ಬಂದಿಲ್ಲ. ವಿಧಿ ಇಲ್ಲದೆ ಪ್ರಾಣ ಭಯದಿಂದಲೇ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದೇವೆ.
— ಮಂಜುನಾಥ ರೆಡ್ಡಿ ಸಿಆರ್ಪಿ
ಸಿಆರ್ಸಿ ಕೇಂದ್ರದ ಕಟ್ಟಡ ಹಳೆಯದಾಗಿದ್ದು, ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡಿದೆ. ಇಲಾಖೆ ತೆರವುಗೊಳಿಸಲು ಅನುಮತಿ ನೀಡಿದ್ದಲ್ಲಿ ಗ್ರಾಮಸ್ಥರು ಮುಂದೆ ನಿಂತು ಹೊಸ ಕಟ್ಟಡ ನಿರ್ಮಿಸಲು ಮುಂದಾಗುತ್ತೇವೆ. ಶ್ರೀ ಕಟ್ಟಡ ನೆಲಸಮ ಮಾಡಲು ಸಂಬಂದಪಟ್ಟ ಅಧಿಕಾರಿಗಳು ಅನುಮತಿ ನೀಡಬೇಕು.
— ಕೆ.ಹೆಚ್.ನಾರಾಯಣಸ್ವಾಮಿ ಎಸ್ಡಿಎಂಸಿ ಅಧ್ಯಕ್ಷ