ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ‘ಡಿಜಿ ಯಾತ್ರಾ’

ಆಯ್ದ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗಾಗಿ ‘ಡಿಜಿ ಯಾತ್ರಾ’ ಸೇವೆಯನ್ನು ಕೆಂಪೇಗೌಡ ವಿವಾನ ನಿಲ್ದಾಣವು ಘೋ ಷಿಸಿದೆ.
digi yatra
ಪ್ರಯಾಣಿಕರು ಡಿಜಿ ಯಾತ್ರದ ಮೂಲಕ ವಿಮಾನ ನಿಲ್ದಾಣ ಪ್ರವೇಶಿಸುತ್ತಿರುವುದು.folder
Published on: 

ಬೆಂಗಳೂರು: ಆಯ್ದ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗಾಗಿ ‘ಡಿಜಿ ಯಾತ್ರಾ’ ಸೇವೆಯನ್ನು ಕೆಂಪೇಗೌಡ ವಿವಾನ ನಿಲ್ದಾಣವು ಘೋಷಿಸಿದೆ.

ಈ ಸೇವೆಯು ಅರ್ಹರಿಗೆ ಸುರಕ್ಷಿತ ಡಿಜಿಟಲ್ ಪ್ರಯಾಣ ಗುರುತು ಹಾಗೂ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಸ್ಪರ್ಶರಹಿತ ಪ್ರಯಾಣದ ಅನುಭವ ಒದಗಿಸಲಿದೆ. ಈ ಮೂಲಕ ಪ್ರಯಾಣಿಕರು ಪದೇಪದೇ ಗುರುತಿನ ಚೀಟಿ ಸೇರಿ ಇತರೆ ದಾಖಲೆಗಳನ್ನು ತೋರಿಸುವ ಅಗತ್ಯವನ್ನು ಕಡಿಮೆಗೊಳಿಸಲಿದೆ.

ದೇಶಿಯ ವಿವಾನ ಪ್ರಯಾಣದಲ್ಲಿ ಡಿಜಿ ಯಾತ್ರಾ ಬಳಕೆ ಚಾಲ್ತಿಯಲ್ಲಿದ್ದು, 2.65 ಕೋಟಿಗೂ ಹೆಚ್ಚು ಬಳಕೆದಾರರಿದ್ದಾರೆ. ಇದರಿಂದಾಗಿ ಈ ಸೇವೆಯನ್ನು ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ವಿಸ್ತರಿಸಲಾಗುತ್ತಿದೆ.

ಡಿಜಿ ಯಾತ್ರಾ ಆ್ಯಪ್‌ನಲ್ಲಿ ಇ-ಪಾಸ್‌ಪೋರ್ಟ್ ಚಿಪ್ ಪರಿಶೀಲನೆ ಮೂಲಕ ಸುರಕ್ಷಿತವಾಗಿ ದೃಢೀಕೃತ ಭಾವಚಿತ್ರ ಪರಿಶೀಲನೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಇಂಡಿಗೋ ಮತ್ತು ಏರ್ ಇಂಡಿಯಾದ ಆಯ್ದ ವಿವಾನಗಳಿಗೆ ಬೋರ್ಡಿಂಗ್‌ವರೆಗೆ ಸೌಲಭ್ಯವನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net