ವೀರಭದ್ರನ ಆರಾಧನೆಯಿಂದ ಕಷ್ಟಗಳು ದೂರ

 ಕಮಲಾಪುರ ತಾಲೂಕಿನ ವರನಾಳದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಿವಪ್ರಭು ಪಾಟೀಲ್​ ಅವರನ್ನು ಸನ್ಮಾನಿಸಲಾಯಿತು. ಶ್ರೀ ಅಪ್ಪಾರಾವ ದೇವಿ ಮುತ್ಯಾ, ಅಲ್ಲಮಪ್ರಭು ದೇಶಮುಖ, ಸುರೇಶ ಲೇಂಗಟಿ, ಅನೀಲಕುಮಾರ ನರೋಣಿ, ನರೇಶ ಹರಸೂರಕರ್​ ಇದ್ದರು

Published on

ಕಮಲಾಪುರ: ದುಷ್ಟರ ಸಂಹಾರ ಮಾಡಿ, ಅವರ ಅಹಂಕಾರವನ್ನು ನಾಶ ಮಾಡಲು ಅವತರಿಸಿದ ಮಹಾಪುರುಷನೇ ಶ್ರೀ ವೀರಭದ್ರೇಶ್ವರ. ವೀರಭದ್ರೇಶ್ವರರ ಆರಾಧನೆಯಿಂದ ಜೀವನದಲ್ಲಿನ ಸಂಕಷ್ಟಗಳು ದೂರವಾಗಲಿವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್​ ಹೇಳಿದರು. ವರನಾಳ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಹಾಗೂ ಕಾಳಿಕಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಲಕರು ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕಾರಗಳನ್ನು ಕಲಿಸಬೇಕು ಎಂದು ಸಲಹೆ ನೀಡಿದರು. ಶ್ರೀನಿವಾಸಸರಡಗಿಯ ಶ್ರೀ ಅಪ್ಪಾರಾವ ದೇವಿ ಮುತ್ಯಾ ಆಶೀರ್ವಚನ ನೀಡಿದರು. ಹಲಕರ್ಟಿಯ ಶ್ರೀ ಅಭಿನವ ಮುನೀಂದ್ರ ಶಿವಾಚಾರ್ಯ, ಅನಿಲಕುಮಾರ ನರೋಣಿ, ಗುರಣ್ಣ ನರೋಣಿ, ರೇವಪ್ಪ ಮೂಲಗೆ, ರೇವಪ್ಪ ಚೀಲಿ, ಮಲ್ಲಿಕಾರ್ಜುನ ಚೀಲಿ, ಜಗದೀಶ ಪಾಟೀಲ್​, ಹುಚ್ಚಪ್ಪ ಪಾಟೀಲ್​, ಜಗದೀಶ ನರೋಣಿ, ರಾಜಕುಮಾರ ನರೋಣಿ, ಮಲ್ಲಿಕಾರ್ಜುನ ಮೂಲಗೆ, ರೇವಪ್ಪ ಮೂಲಗೆ, ಮಾಣಿಕ ಜಾನ್ಕರ್​, ರಾಜಕುಮಾರ ನರೋಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net