ದ್ಯಾಮವ್ವದೇವಿ ಕಾರ್ತಿಕೋತ್ಸವ ನಾಳೆ

ದ್ಯಾಮವ್ವದೇವಿ ಮೂರ್ತಿ
ದ್ಯಾಮವ್ವದೇವಿ ಮೂರ್ತಿ
Published on
ಬೆಟಗೇರಿ: ಗ್ರಾಮದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಸ್ಥಳಿಯ ಗ್ರಾಮದೇವತೆ ದ್ಯಾಮವ್ವದೇವಿ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಡಿ.12ರಂದು ನಡೆಯಲಿವೆ. ಬೆಳಗ್ಗೆ 7 ಗಂಟೆಗೆ ದೇವಿ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಅಲಂಕಾರ, ಉಡಿತುಂಬುವುದು, ಪುರಜನರಿಂದ ಪೂಜೆ, ನೆವೇದ್ಯ ಸಮರ್ಪಣೆ, ಬಳಿಕ ಮಹಾಪ್ರಸಾದ, ದೀಪೋತ್ಸವ, ಕಾರ್ತಿಕೋತ್ಸವ ಜರುಗಲಿದೆ ಎಂದು ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net