ಸಹಬಾಳ್ವೆಯಿಂದ ದೇಶ-ಸಮಾಜ ಅಭಿವೃದ್ಧಿ

ಬೇಲೂರು ಪಟ್ಟಣ ಸಮೀಪದ ಎಸ್.ಸೂರಾಪುರದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬೇಲೂರು ಪಟ್ಟಣ ಸಮೀಪದ ಎಸ್.ಸೂರಾಪುರದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬಕ್ರೀದ್ ಹಬ್ಬ
  • ಎಸ್.ಸೂರಾಪುರದ ಈದ್ಗಾ ಮೈದಾನ
ಬೇಲೂರು: ಬಕ್ರೀದ್ ಹಬ್ಬದ ಅಂಗವಾಗಿ ಸಾವಿರಾರು ಮುಸ್ಲಿಮರು ಪಟ್ಟಣ ಸಮೀಪದ ಎಸ್.ಸೂರಾಪುರದ ಈದ್ಗಾ ಮೈದಾನದಲ್ಲಿ ಮಸೀದಿ ಗುರುಗಳ ನೇತೃತ್ವದಲ್ಲಿ ಗುರುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿದ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್, ಬಕ್ರೀದ್ ಹಬ್ಬ ತ್ಯಾಗ, ಬಲಿದಾನ, ಸಹಾನುಭೂತಿ ಮತ್ತು ಸಹೋದರತ್ವವವನ್ನು ಸಾರಲಿದೆ. ಪ್ರವಾದಿ ಇಬ್ರಾಹಿಂ ಅವರ ತ್ಯಾಗದ ಸಂದೇಶ ಪ್ರತಿಯೊಬ್ಬರ ಜೀವನದಲ್ಲೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರೇರಣೆಯಾಗಿದೆ ಎಂದರು.
ಬಡವರು, ನಿರ್ಗತಿಕರು ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿ ಬೆಳೆಸಬೇಕು. ಎಲ್ಲ ಧರ್ಮದ ಜನರು ಒಂದಾಗಿ ಸಹಬಾಳ್ವೆಯಿಂದ ಬದುಕಿದಾಗ ಮಾತ್ರ ದೇಶ ಮತ್ತು ಸಮಾಜ ಅಭಿವೃದ್ಧಿಯಲ್ಲಿ ಸಾಗುತ್ತದೆ. ಪಟ್ಟಣದ ಜನತೆ ಎಲ್ಲರೂ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಸಹೋದರ ಭಾವದಿಂದ ಆಚರಿಸಬೇಕು ಎಂದು ತಿಳಿಸಿದರು.
ಕೋಟೆ ಮಸೀದಿ ಗುರುಗಳಾದ ಮೌಲಾನ ರಿಜ್ವಾನ್, ಪ್ರಮುಖರಾದ ನಹೀಮ್, ಅಕ್ರಂ, ತನ್ವೀರ್, ಅಬ್ದುಲ್ ಜಬ್ಬರ್, ಜಾಕೀರ್ ಪಷಾ, ಬಷೀರ್ ಸಾಬ್, ಮೊಹಮ್ಮದ್ ಸೂಫಿಯಾನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net