

ದಾಬಸ್ಪೇಟೆ :
ವಿದ್ಯಾರ್ಥಿಗಳಲ್ಲಿ ನಾಯಕತ್ವ, ನೈತಿಕ ಮೌಲ್ಯ ಮತ್ತು ಸೇವಾ ಮನೋಭಾವ ಬೆಳೆಸಬೇಕಿದೆ ಎಂದು ಜಿಲ್ಲಾ ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ ರೇಣುಕೇಶ್ವರ ಸ್ವಾಮಿ ಹೇಳಿದರು.
ಸೋಂಪುರದ ಬಿಆರ್ಟಿ ಭವನದಲ್ಲಿ ಹಮ್ಮಿಕೊಂಡಿದ್ದ ರೋಟರಿ ಕ್ಲಬ್ನ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಲಬ್ನ ನೂತನ ಅಧ್ಯಕ್ಷ ವೈ.ಎಸ್.ಶಶಿಧರ್ ಮಾತನಾಡಿ, ಸೋಂಪುರದಲ್ಲಿ ರೋಟರಿ ಸ್ವಂತ ಕಾರ್ಯಾಲಯ ನಿರ್ಮಿಸಲಾಗುವುದು. ಹಿಂದುಳಿದವರಿಗೆ ಸಹಾಯ, ಆರೋಗ್ಯ ಸೇವೆ, ರಕ್ತದಾನ ಶಿಬಿರ, ಶಿಕ್ಷಣ, ಕುಡಿಯುವ ನೀರು, ಸ್ವಚ್ಛತೆ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದರು.
ನಿರ್ಗಮಿತ ಅಧ್ಯಕ್ಷ ದೇವರಾಜು ಮಾತನಾಡಿ, ಶಾಂತಿ, ಧರ್ಮ, ಜಾತಿ, ಜನರ ನಡುವೆ ಸ್ನೇಹ ಬೆಳೆಸಲು ರೋಟರಿ ಪ್ರೇರಣೆ ನೀಡುತ್ತದೆ ಎಂದರು.
ಪೊಲೀಸ್ ಕಾನ್ಸ್ಟೆಬಲ್ ಶಿವಕುಮಾರ್ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಟಾಫರ್ ಆದ 10 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ವಿವಿಧ ಶಾಲೆಗಳಿಗೆ ಟ್ರಾ$್ಯಕ್ಸೂಟ್ ಮತ್ತು ಬ್ಯಾಗ್, ನೂತನ ಶಾಲಾ ಕಟ್ಟಡಗಳ ನಿಮಾರ್ಣಕ್ಕೆ ಸಹಾಯಧನ ಚೆಕ್ ನೀಡಲಾಯಿತು.
ನಿರ್ದೇಶಕರಾದ ಚನ್ನತಿಮ್ಮಯ್ಯ, ಬೈರಣ್ಣ, ಕೆ.ಎನ್.ಬಿ.ಹರೀಶ್, ರವಿಕುಮಾರ್, ಗೋವಿಂದರಾಜು, ಯುವರಾಜ್, ಚಿಕ್ಕಸ್ವಾಮಿ, ಹರೀಶ್, ಖಜಾಂಚಿ ಮಂಗಳಮ್ಮ, ಎಲ್.ಎಸ್.ಶೇಖರ್, ರವಿಕುಮಾರ್, ಚಂದ್ರಶೇಖರ್, ಧನಲಕ್ಷಿ$್ಮ, ಮೋಹನ್, ಪ್ರವಿಣ್ ಕುಮಾರ್, ಗಿರೀಶ್, ಚಿಕ್ಕಮ್ಮ, ಕೆ.ಆದರ್ಶ ಇದ್ದರು.