ಬ್ರಿಟಿಷ್ ಕೌನ್ಸಿಲ್ ದಕ್ಷಿಣ ಭಾರತ ನಿರ್ದೇಶಕಿ ಜನಕ ಪುಷ್ಪನಾಥನ್ ಮಾತನಾಡಿ, ಶಿಕ್ಷಣ, ಕೌಶಲ ಮತ್ತು ವ್ಯಕ್ತಿಗಳ ನಡುವಿನ ಸಂವಹನ ಸಂಪರ್ಕ ವರ್ಧಿಸುವುದು ಸಹಭಾಗಿತ್ವದ ಉದ್ದೇಶವಾಗಿದೆ. ಯುವಕರು ಆತ್ಮವಿಶ್ವಾಸದಿಂದ ಇಂಗ್ಲಿಷ್ ಮಾತನಾಡುವಂತೆ ಮಾಡುವುದು ಹಾಗೂ ಉದ್ಯೋಗ ಅರ್ಹತೆಗಳನ್ನು ಸೃಷ್ಟಿಸುವುದು ಗುರಿಯಾಗಿದೆ. ಇದು ಇಂಡಿಯಾ- ಯುಕೆ ವಿಷನ್-2035 ಆಶಯಗಳನ್ನು ಬಿಂಬಿಸುತ್ತದೆ ಎಂದು ಹೇಳಿದರು.